ಕಾಶಿ, ಮಥುರಾ ಅಷ್ಟೇ ಅಲ್ಲದೇ, ಎಲ್ಲಾ ಹಿಂದೂಗಳ ಮತ್ತೊಂದು ಅತಿ ದೊಡ್ಡ ಕನಸನ್ನು ನನಸು ಮಾಡಲು ಮುಂದಾದ ಸ್ವಾಮಿ ಅಂಡ್ ಟೀಮ್! ಏನು ಗೊತ್ತಾ?

ಕಾಶಿ, ಮಥುರಾ ಅಷ್ಟೇ ಅಲ್ಲದೇ, ಎಲ್ಲಾ ಹಿಂದೂಗಳ ಮತ್ತೊಂದು ಅತಿ ದೊಡ್ಡ ಕನಸನ್ನು ನನಸು ಮಾಡಲು ಮುಂದಾದ ಸ್ವಾಮಿ ಅಂಡ್ ಟೀಮ್! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಹಿಂದುಗಳ ಹಲವಾರು ವರ್ಷಗಳ ಬೇಡಿಕೆ ಹಾಗೂ ಕನಸಾಗಿದ್ದ ರಾಮ ಮಂದಿರದ ಶಿಲಾನ್ಯಾಸ ಕಾರ್ಯಕ್ರಮ ಯಶಸ್ವಿಯಾಗಿ ಪೂರ್ಣಗೊಂಡಿದೆ. ಈ ದಿನಗಳನ್ನು ಕಣ್ತುಂಬಿಕೊಳ್ಳಲು ಸುಪ್ರೀಂ ತೀರ್ಪು ನೀಡುವವರೆಗೂ ಎಲ್ಲರೂ ತುದಿಗಾಲಲ್ಲಿ ಕಾದು ನಿಂತಿದ್ದರು. ಸುಪ್ರೀಂ ತೀರ್ಪು ರಾಮ ಮಂದಿರ ಪರವಾಗಿ ಬರಲು ಹಲವಾರು ಜನ ತಮ್ಮದೇ ಆದ ರೀತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಅದರಲ್ಲಿ ಸುಬ್ರಮಣ್ಯಮ್ ಸ್ವಾಮಿರವರು ಕೂಡ ತಮ್ಮದೇ ಆದ ವಿಶೇಷ ಸೇವೆಯನ್ನು ಸಲ್ಲಿಸಿದ್ದಾರೆ, ಸುಪ್ರೀಂ ತೀರ್ಪು ರಾಮ ಮಂದಿರ ಪರವಾಗಿ ಬರಲು ಸಾಕಷ್ಟು ಶ್ರಮಿಸಿದ್ದಾರೆ. ರಾಮ ಮಂದಿರ ನಿರ್ಮಾಣ ಆರಂಭವಾದ ಮೇಲೆ ಸುಬ್ರಹ್ಮಣ್ಯ ಸ್ವಾಮಿ ರವರು ಕಾಶಿ ವಿಶ್ವನಾಥ ದೇವಾಲಯ ಹಾಗೂ ಮಥುರ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯಗಳಿಗೆ ಅಗತ್ಯವಾಗಿರುವ ಸಿದ್ಧತೆಗಳನ್ನು ಮಾಡಿಕೊಳ್ಳಲಿದ್ದಾರೆ ಎಂದು ಎಲ್ಲರೂ ಅಂದು ಕೊಂಡಿದ್ದರು.

ಇದನ್ನು ಸ್ವತಃ ಅವರೇ ಒಪ್ಪಿಕೊಂಡು, ಹೌದು ನಾನು ರಾಮ ಮಂದಿರ ನಿರ್ಮಾಣವಾದ ತಕ್ಷಣ ವಿಶ್ರಮಿಸುವುದಿಲ್ಲ, ಬದಲಾಗಿ ಇನ್ನು ಹಲವಾರು ದೇವಾಲಯಗಳು ಪುನರ್ ನಿರ್ಮಾಣ ಕಾರ್ಯ ಬಾಕಿ ಇದೆ, ನಾನು ಅವುಗಳ ಕಾರ್ಯದಲ್ಲಿ ನಿರತರಾಗಿರುತ್ತೇವೆ ಎಂದು ಈ ಹಿಂದೆ ಹಲವಾರು ಬಾರಿ ಹೇಳಿಕೆ ನೀಡಿದ್ದರು. ಈ ಎಲ್ಲಾ ದೇವಾಲಯಗಳ ಪುನರ್ ನಿರ್ಮಾಣ ಕಾರ್ಯಗಳ ಕುರಿತು ಇನ್ನೇನು ಚರ್ಚೆ ಆರಂಭಿಸಬಹುದು ಎಂದು ಕೊಳ್ಳುವಷ್ಟರಲ್ಲಿ ಅವುಗಳ ಜೊತೆಗೆ ಸುಬ್ರಹ್ಮಣ್ಯ ಸ್ವಾಮಿ ಮತ್ತು ಅವರ ತಂಡ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಇದು ಕೂಡ ಕಳೆದ ಕೆಲವು ದಶಕಗಳಿಂದ ಕೋಟ್ಯಂತರ ಹಿಂದೂಗಳ ಕನಸಾಗಿದೆ, ಇದು ಯಾವುದೇ ದೇವಾಲಯದ ನಿರ್ಮಾಣ ವಲ್ಲ ಬದಲಾಗಿ ಮುಜರಾಯಿ ಇಲಾಖೆಗಳ ಕೈಯಲ್ಲಿ ಸಿಕ್ಕು ನಲು-ಗುತ್ತಿರುವ ದೇವಾಲಯಗಳ ಪರಿಸ್ಥಿತಿಯನ್ನು ಬದಲಾಯಿಸಲು ಸ್ವಾಮಿ ಹೊರಟಿದ್ದಾರೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಹಲವಾರು ವರ್ಷಗಳಿಂದಲೂ ಲಕ್ಷಾಂತರ ಹಿಂದೂ ದೇವಾಲಯಗಳನ್ನು ರಾಜ್ಯಗಳು ತನ್ನ ವಶಕ್ಕೆ ಪಡೆದು ಕೊಂಡು ಅಲ್ಲಿ ಆಡಳಿತ ನಡೆಸುತ್ತಿವೆ, ದೇವಾಲಯಗಳಿಂದ ಬಂದ ದುಡ್ಡನ್ನು ದೇವಾಲಯದ ಜೀರ್ಣೋದ್ಧಾರಕ್ಕೆ ಬಳಸದೇ ರಾಜ್ಯಗಳು ಇನ್ನಿತರ ಕೆಲಸಗಳಿಗೆ ಬಳಸಿಕೊಂಡು ದೇವಾಲಯಗಳಿಗೆ ಅಗತ್ಯವಾಗಿರುವ ಅನುದಾನ ನೀಡುತ್ತಿಲ್ಲ, ಹೆಚ್ಚು ನೀಡದಿದ್ದರೂ ಪರವಾಗಿಲ್ಲ ಆದರೆ ದೇವಾಲಯದ ಅಗತ್ಯವಾಗಿರುವ ಕೆಲವು ಸೌಲಭ್ಯಗಳನ್ನು ಕೂಡ ಮುಜರಾಯಿ ಇಲಾಖೆ ನೀಡುತ್ತಿಲ್ಲ ಅಷ್ಟೇ ಅಲ್ಲದೇ ಮನ ಬಂದಂತೆ ಆಸ್ತಿಗಳನ್ನು ಹರಾಜು ಹಾಕುತ್ತ, ಚಿನ್ನ, ಬೆಳ್ಳಿಗಳನ್ನು ಯಥೇಚ್ಛವಾಗಿ ಹರಾಜು ಹಾಕುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಭಾರತೀಯ ಸಂವಿಧಾನದ ಪ್ರಕಾರ ಸುಬ್ರಹ್ಮಣ್ಯ ಸ್ವಾಮಿ ರವರು ಹಿಂದೂ ದೇವಾಲಯಗಳ ಪರ ವಾದ ಮಂಡಿಸಲು ಮುಂದಾಗಿದ್ದು, ಅಗತ್ಯವಾಗಿರುವ ಎಲ್ಲಾ ಸಿದ್ಧತೆ ಮಾಡಿ ಕೊಳ್ಳುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಇದರ ಕುರಿತು ಅವರೇ ಸ್ವತಹ ತಿಳಿಸಿದ್ದು, ನನ್ನ ವಕೀಲರ ಯುವ ತಂಡ ಸಂವಿಧಾನದ ಪ್ರಕಾರ ಹಿಂದೂ ದೇವಾಲಯಗಳನ್ನು ಸ್ವತಂತ್ರಗೊಳಿಸುವ ಚಿಂತನೆಯಲ್ಲಿ ತೊಡಗಿ ಕೊಂಡಿರುವುದು ಸ್ವಾಗತರ್ಹ, ಎಂದು ಟ್ವೀಟ್ ಮಾಡುವ ಮೂಲಕ ಇದೀಗ ತಮ್ಮ ನಡೆ ರಾಜ್ಯಗಳ ಮುಜರಾಯಿ ಗಳಿಂದ ದೇವಾಲಯಗಳನ್ನು ಹೊರತರುವುದು ಎಂದು ತಿಳಿಸಿದ್ದಾರೆ.