ಕಷ್ಟದ ದಿನಗಳಲ್ಲಿ ಸಾಥ್ ನೀಡಿದ ಪತ್ನಿ ! ಭಾವುಕರಾದ ಸೋನು ! ಇವರ ಪ್ರೇಮಕಥೆ ಪ್ರತಿಯೊಬ್ಬರಿಗೂ ಪಾಠ ಕಲಿಸುತ್ತದೆ !

ನಮಸ್ಕಾರ ಸ್ನೇಹಿತರೇ, ನಟನೆ ಮಾಡಿದ ಸಿನಿಮಾಗಳಲ್ಲಿ ವಿಲನ್ ಆಗಿ ಹಲವಾರು ಚಿತ್ರಗಳಲ್ಲಿ ನಟಿಸಿ ಜನರ ಮನ ಗೆದ್ದಿದ್ದ ಸೋನು ಸೂದ್ ರವರು ದೇಶದಲ್ಲಿ ಲಾಕ್ಡೌನ್ ಆದ ಬಳಿಕ ನಿಜ ಜೀವನದ ಹೀರೋ ಆಗಿ ಜನರ ಮನ ಗೆಲ್ಲುತ್ತಿದ್ದಾರೆ. ದೇಶದ ಮೂಲೆ ಮೂಲೆಯಿಂದ ಬರುವ ಪ್ರತಿಯೊಂದು ಮನವಿಗಳಿಗೆ ಪ್ರತಿಕ್ರಿಯೆ ನೀಡಿ ಸಂದರ್ಭಕ್ಕೆ ತಕ್ಕಂತೆ ಅನುಗುಣವಾಗಿ ಎಲ್ಲರಿಗೂ ಸಹಾಯ ಹಸ್ತ ಚಾಚುತ್ತಿರುವ ಸೋನು ಸೂದ್ ರವರು ಇದೀಗ ಇಡೀ ದೇಶದ ಜನರ ಪಾಲಿಗೆ ಅಸಲಿ ಹಿರೋ ಎನಿಸಿ ಕೊಂಡಿದ್ದಾರೆ.‌ ನಿಮಗೆಲ್ಲರಿಗೂ ತಿಳಿದಿರುವಂತೆ ಸೋನು ಸೂದ್ ರವರು ಹುಟ್ಟಿನಿಂದಲೇ ಶ್ರೀಮಂತರಲ್ಲ, ಇವರ ಕೈಯಲ್ಲಿ ಮುಂಬಯಿ ನಗರಕ್ಕೆ ಬಂದಾಗ ಸಾಮಾನ್ಯ ಜೀವನವನ್ನು ಸಾಗಿಸುವುದಕ್ಕೂ ಕೂಡ ಹಣವಿರಲಿಲ್ಲ, ಪ್ರತಿ ದಿವಸ ರೈಲಿನಲ್ಲಿ ಪ್ರಯಾಣ ಮಾಡಿ ಸಿನಿಮಾಗಳಲ್ಲಿ ನಟನೆ ಮಾಡಲು ಅವಕಾಶಕ್ಕಾಗಿ ಅಲೆಯುತ್ತಿದ್ದರು, ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಇಂದು ಬಾಲಿವುಡ್ ಚಿತ್ರರಂಗ ಸೇರಿದಂತೆ ದಕ್ಷಿಣ ಭಾರತದ ಚಿತ್ರರಂಗಗಳಲ್ಲಿ ಹಲವಾರು ಸಿನಿಮಾಗಳಲ್ಲಿ ನಟನೆ ಮಾಡಿ ಉತ್ತಮ ನಟ ಎನಿಸಿ ಕೊಂಡಿದ್ದಾರೆ.

ಇಲ್ಲಿಯವರೆಗೂ ಸೋನು ಸೂದ್ ಅವರ ಖಾಸಗಿ ಜೀವನದ ಬಗ್ಗೆ ಯಾರಿಗೂ ತಿಳಿದಿರಲಿಲ್ಲ, ಇವರ ಪತ್ನಿಯಾಗಲಿ ಅಥವಾ ಮಕ್ಕಳಾಗಲಿ ಯಾವುದೇ ಚಿತ್ರರಂಗಕ್ಕೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗುವುದು ಕಡಿಮೆ, ಭಾಗಿಯಾದರೂ ಕೂಡ ಕ್ಯಾಮೆರಾಗಳಿಂದ ದೂರವಿರುತ್ತಾರೆ. ಇತರ ಸೆಲೆಬ್ರಿಟಿಗಳ ಕುಟುಂಬದವರು ಕಾಣಿಸಿ ಕೊಳ್ಳುವ ರೀತಿ ಕ್ಯಾಮರಾಗಳ ಮುಂದೆ ಇವರ ಕುಟುಂಬವು ಎಲ್ಲಿಯೂ ಕಾಣಸಿಗುವುದಿಲ್ಲ. ಇಷ್ಟು ಸಿಂಪಲಾಗಿ ಜೀವನ ನಡೆಸುವ ಸೋನು ಸೂದ್ ಹಾಗೂ ಅವರ ಕುಟುಂಬವು ನಿಜವಾಗಲೂ ಪ್ರತಿಯೊಬ್ಬರಿಗೂ ಪ್ರೇರಣೆಯಾಗಿದೆ. ಇನ್ನು ಸೋನು ಸೂದ್ ರವರ ಪ್ರೇಮಕಥೆಯೂ ಕೂಡ ಎಲ್ಲರಲ್ಲೂ ಒಂದು ಹೊಸ ಚೈತನ್ಯವನ್ನು ತುಂಬುವುದರಲ್ಲಿ ಯಾವುದೇ ಅನುಮಾನವಿಲ್ಲ, ಬನ್ನಿ ನಾವು ಇಂದು ಅವರ ಪ್ರೇಮಕಥೆಯ ಬಗ್ಗೆ ತಿಳಿದುಕೊಳ್ಳೋಣ ಹಾಗೂ ಕಷ್ಟದ ಸಮಯದಲ್ಲಿ ಸೋನು ಸೂದ್ ರವರ ಧರ್ಮಪತ್ನಿ ಯಾವ ರೀತಿ ಸೋನು ಸೂದ್ ರವರ ಜೊತೆಗೆ ನಿಂತರು ಎಂಬುದರ ಬಗ್ಗೆ ಅವರೇ ಹೇಳಿರುವ ಮಾತುಗಳನ್ನು ತಿಳಿದುಕೊಳ್ಳೋಣ.

ಸ್ನೇಹಿತರೇ, ಸೋನು ಸೂದ್ ರವರು ಇಂಜಿನಿಯರಿಂಗ್ ಮಾಡುವಾಗ ಎಂಬಿಎ ಓದುತ್ತಿದ್ದ ಸೋನಾಲಿ ರವರು ಖಾಸಗಿ ಕಾರ್ಯಕ್ರಮದಲ್ಲಿ ನಾಗಪುರದಲ್ಲಿ ಪರಸ್ಪರ ಭೇಟಿಯಾಗಿದ್ದಾರೆ. ಮೊದಲಿಗೆ ಸ್ನೇಹವಾಗಿದ್ದ, ಇವರಿಬ್ಬರ ಸಂಬಂಧ ಕ್ರಮೇಣ ಪ್ರೀತಿಯಾಗಿ ಬದಲಾಯಿತು, ಸೋನು ಸೂದ್ ರವರು ಸಿನಿಮಾದ ಕುರಿತು ಯಾವುದೇ ಕನಸುಗಳನ್ನು ಸೋನಾಲಿ ರವರ ಬಳಿ ಹೇಳಿ ಕೊಂಡಿರಲಿಲ್ಲ. ಕೆಲವೊಮ್ಮೆ ಚಿಕ್ಕದಾಗಿ ಹೇಳಿದ್ದಾರಾದರೂ ಸೋನಾಲಿ ರವರು, ಸೀರಿಯಸ್ ಆಗಿ ತೆಗೆದುಕೊಂಡಿರಲಿಲ್ಲ, ಅದಕ್ಕಾಗಿ ಇಂಜಿನಿಯರಿಂಗ್ ಕ್ಷೇತ್ರವನ್ನು ಬಿಡುತ್ತಾರೆ ಎಂದು ಕೊಂಡಿರಲಿಲ್ಲವಂತೆ. ನಂತರ ಮನೆಯವರನ್ನು ಒಪ್ಪಿಸಿಕೊಂಡು ಇಬ್ಬರು ಮದುವೆಯಾದರು. ತದ ನಂತರ ಸೋನು ಸೂದ್ ರವರಿಗೆ ಇಂಜಿನಿಯರಿಂಗ್ ಕ್ಷೇತ್ರ ಇಷ್ಟವಿಲ್ಲದೇ ಮುಂಬೈಗೆ ತೆರಳುತ್ತೇನೆ ಎಂದರು, ಯಾವುದೇ ಚಿತ್ರರಂಗದ ನಾಯಕರ ಬೆಂಬಲವಿಲ್ಲದೇ ಸೋನು ಸೂದ್ ರವರು ಮುಂಬೈನಲ್ಲಿ ಬಂದು ಯಶಸ್ವಿಯಾಗುವ ಸಾಧ್ಯತೆ ತೀರಾ ಕಡಿಮೆ ಎಂದು ಪತ್ನಿ ರವರಿಗೆ ತಿಳಿದಿತ್ತು.

ಆದರೆ ಸೋನು ಸೂದ್ ಅವರ ಆಸೆಯನ್ನು ನಿರಾಕರಿಸಲು ಸಾಧ್ಯವಿಲ್ಲದೇ ಸೋನಾಲಿ ರವರು ಒಪ್ಪಿಕೊಂಡರು. ಹಾಗೂ ಕಷ್ಟವಾದರೂ ಪರವಾಗಿಲ್ಲ ಎಂದು ಸೋನು ಸೂದ್ ರವರನ್ನು ಒಬ್ಬಂಟಿಯಾಗಿ ಕಳುಹಿಸಿ ಕೊಡದೇ ತಾವು ಕೂಡ ಮುಂಬೈ ನಗರಕ್ಕೆ ಸೋನು ಸೂದ್ ರವರ ಜೊತೆ ಕಾಲಿಟ್ಟರು. ಮುಂಬೈ ನಗರದಲ್ಲಿ ಒಂದು ಪುಟ್ಟ ಮನೆಯನ್ನು ಬಾಡಿಗೆಗೆ ತೆಗೆದು ಕೊಂಡರು, ಆ ಮನೆ ಸೋನಾಲಿ ರವರಿಗೆ ಇಷ್ಟವಾಗಿರಲಿಲ್ಲ. ಆದರೆ ಅದನ್ನು ಸೋನು ಸೂದ್ ರವರ ಬಳಿ ಎಂದಿಗೂ ಹೇಳಿ ಕೊಂಡವರಲ್ಲ, ಪತ್ನಿಯ ಪ್ರತಿಕ್ರಿಯೆ ನೋಡಿ ನನಗೆ ತಿಳಿಯಿತು ಆದರೆ ಮುಂಬೈ ನಗರದಲ್ಲಿ ನಮಗೆ ಬೇರೆ ಯಾವುದೇ ಆಯ್ಕೆ ಉಳಿದಿರಲಿಲ್ಲ. ನಮ್ಮ ಬಳಿಯಿದ್ದ ಹಣದಲ್ಲಿ ನಾವು ಆ ಮನೆ ಬಾಡಿಗೆ ತೆಗೆದು ಕೊಂಡದ್ದೇ ಹೆಚ್ಚು ಎಂದು ಸ್ವತಹ ಸೋನು ಸೂದ್ ರವರೇ ಹೇಳಿದ್ದಾರೆ.

ತನ್ನ ಪತ್ನಿಯ ಪ್ರತಿಕ್ರಿಯೆ ನೋಡಿಯೂ ಕೂಡ ಏನೂ ಮಾತನಾಡದ ಸೋನು ಸೂದ್ ರವರು ಬೇರೆ ವಿಧಿ ಇಲ್ಲ ಎಂಬುದನ್ನು ಚೆನ್ನಾಗಿ ಅರಿತು ಕೊಂಡಿದ್ದರು, ಸೋನಾಲಿ ರವರು ಕೂಡ ಏನನ್ನು ಮಾತನಾಡಲಿಲ್ಲ. ಸೋನು ಸೂದ್ ರವರು ಹಲವಾರು ವರ್ಷಗಳ ಕಾಲ ಸಿನಿಮಾಗಳಲ್ಲಿ ನಟಿಸುವ ಅವಕಾಶಕ್ಕಾಗಿ ಕಷ್ಟಪಟ್ಟರು, ಸಿಕ್ಕ ಚಿಕ್ಕಪುಟ್ಟ ಅವಕಾಶಗಳಿಂದ ಜೀವನ ನಡೆಸುತ್ತಿದ್ದರು. ಮನೆಯಲ್ಲಿ ಎಂತಹ ಕಷ್ಟ ಬಂದರೂ ಕೂಡ ಸೋನಾಲಿ ರವರು ಎಂದಿಗೂ ಒಂದು ಮಾತು ಕೂಡ ನನ್ನ ಬಳಿ ದೂರಿರಲಿಲ್ಲ, ಬದಲಾಗಿ ನಾನು ಪ್ರತಿಬಾರಿಯೂ ಮತ್ತೊಂದು ಹೆಜ್ಜೆ ಇಡುವಾಗ ಆ ದಾರಿಯಲ್ಲಿ ಅನೇಕ ಸವಾಲುಗಳು ಇದ್ದರೂ ಕೂಡ ನನ್ನನ್ನು ನಗುತ್ತಾ ಪ್ರೋತ್ಸಾಹಿಸಿದರು ಎಂದು ಸೋನು ಸೂದ್ ರವರು ಭಾವುಕರಾಗಿ ನುಡಿದಿದ್ದಾರೆ.

ಎಷ್ಟೇ ಕಷ್ಟಬಂದರೂ ಕೂಡ ಪತಿಯ ಜೊತೆಯಲ್ಲೇ ನಿಂತು, ಸೋನು ಸೂದ್ ರವರನ್ನು ಯಶಸ್ಸಿನ ಹಾದಿಯಲ್ಲಿ ನಡೆಯುವಂತೆ ಮಾಡಿದರು, ಇವರಿಬ್ಬರ ಅನುಭಂದ ಜೀವನ ಸಂಗಾತಿಯು ಸಾಥ್ ನೀಡಿ ಜೊತೆಯಲ್ಲಿ ಇದ್ದರೇ, ಯಶಸ್ಸು ಖಂಡಿತಾ ಎಂಬುದನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೇ, ಯಾವುದೇ ಕಾರ್ಯಕ್ರಮದಲ್ಲಿ ಪತ್ನಿರವರ ಕುರಿತು ಪ್ರಶ್ನೆ ಕೇಳಿದರೇ, ಇಂದಿಗೂ ಕೂಡ ಸೋನು ಸೂದ್ ರವರು ಭಾವುಕರಾಗುತ್ತಾರೆ ಹಾಗೂ ಅವರು ಮಾತನಾಡುವ ಪ್ರತಿಯೊಂದು ಮಾತುಗಳಲ್ಲಿ ಪತ್ನಿಯ ಮೇಲಿರುವ ಪ್ರೀತಿಯಷ್ಟೇ ಅಲ್ಲದೇ, ಗೌರವ ಅಭಿಮಾನವು ಕೂಡ ಕಂಡು ಬರುತ್ತದೆ. ಇವರಿಬ್ಬರ ಅನುಭಂದ ನೋಡಿದರೇ, ಪ್ರತಿಯೊಂದು ಸಂಬಧದಲ್ಲಿಯೂ ಕೂಡ ಪ್ರೀತಿಯಷ್ಟೇ ಅಲ್ಲದೇ ಅಲ್ಲೊಂದು ಗೌರವ, ನಂಬಿಕೆ ಇರಬೇಕು ಎಂಬುದನ್ನು ಸಾರುತ್ತದೆ. ಒಂದು ವೇಳೆ ಇವರ ಪತ್ನಿ ಇವರ ಮೇಲೆ ನಂಬಿಕೆ ಇಟ್ಟು ಸಾಥ್ ನೀಡದೇ ಇದ್ದಿದ್ದರೇ, ನಮಗೆ ಸೋನು ಸೂದ್ ಯಾರು ಎಂದು ಕೂಡ ತಿಳಿಯುತ್ತಿರಲಿಲ್ಲ. ಅಲ್ಲವೇ?