ರಾಮ ಮಂದಿರದ ಕುರಿತು ವಿಶೇಷ ಸಂದೇಶ ಕಳುಹಿಸಿದ ಪಾಕ್ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ರಾಮ ಮಂದಿರದ ಕುರಿತು ವಿಶೇಷ ಸಂದೇಶ ಕಳುಹಿಸಿದ ಪಾಕ್ ಮಾಜಿ ಕ್ರಿಕೆಟಿಗ ಹೇಳಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದಶಕಗಳ ಕೋಟ್ಯಂತರ ಭಾರತೀಯರ ಕನಸು ನನಸಾಗಿದೆ. ಪುಣ್ಯ ಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆದಿದೆ. ಇನ್ನು ಸರಿ ಸುಮಾರು ಮೂರು ವರ್ಷಗಳಲ್ಲಿ ಪ್ರಪಂಚದಲ್ಲಿಯೇ ಮೂರನೇ ಅತಿದೊಡ್ಡ ಹಿಂದೂ ದೇವಾಲಯ ವಾಗಿ ರಾಮ ಮಂದಿರ ನಿರ್ಮಾಣ ಪೂರ್ಣವಾಗಲಿದೆ ಹಾಗೂ ಕೋಟ್ಯಂತರ ಭಾರತೀಯರು ಶ್ರೀ ರಾಮನ ದರ್ಶನವನ್ನು ಪುಣ್ಯ ಭೂಮಿ ಅಯೋಧ್ಯೆಯಲ್ಲಿ ಮಾಡಬಹುದಾಗಿದೆ. ಇಂತಹ ಒಂದು ಐತಿಹಾಸಿಕ ಸಂದರ್ಭದಲ್ಲಿ ಹಲವಾರು ಖ್ಯಾತ ಸೆಲೆಬ್ರೆಟಿಗಳು ತಮ್ಮದೇ ಆದ ಮಾತುಗಳ ಮೂಲಕ ಸಂತೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ. ವೀರೇಂದ್ರ ಸೆಹ್ವಾಗ್, ಸೈನಾ ನೆಹವಾಲ್, ಮೊಹಮ್ಮದ್ ಕೈಫ್ ಸೇರಿದಂತೆ ಇನ್ನೂ ಹಲವಾರು ಖ್ಯಾತ ಸೆಲೆಬ್ರಿಟಿಗಳು ರಾಮಮಂದಿರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.

ಅದೇ ರೀತಿ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರರೋಬ್ಬರು ರಾಮ ಮಂದಿರ ನಿರ್ಮಾಣದ ಶಿಲನ್ಯಾಸ ಕಾರ್ಯಕ್ರಮದ ಕುರಿತು ಸಂತಸ ವ್ಯಕ್ತಪಡಿಸಿ ವಿಶೇಷ ಸಂದೇಶವೊಂದನ್ನು ಬರೆದು ಕೊಂಡಿದ್ದಾರೆ. ಇದನ್ನು ಕಂಡ ನೆಟ್ಟಿಗರು ಭಾರತದಲ್ಲಿರುವ ಅನೇಕ ಕ್ರಿಕೆಟ್ ಆಟಗಾರರು ಶ್ರೀ ರಾಮ ಮಂದಿರದ ಕುರಿತು ಸಂತಸದ ಮಾತುಗಳನ್ನು ಎಲ್ಲಿಯೂ ಹೊರ ಹಾಕಿಲ್ಲ ಎಲ್ಲರೂ ಮೌನವಾಗಿದ್ದಾರೆ. ಆದರೆ ಪಾಕಿಸ್ತಾನದಿಂದ ಒಬ್ಬ ಆಟಗಾರ ವಿಶೇಷ ಸಂದೇಶ ಕಳುಹಿಸಿರುವುದು ನಿಜಕ್ಕೂ ಸಂತಸದ ಸಂಗತಿ ಎಂದಿದ್ದಾರೆ.

ಹೌದು ಸ್ನೇಹಿತರೇ, ಪಾಕಿಸ್ತಾನದ ಮಾಜಿ ಲೆಗ್ ಸ್ಪಿನ್ನರ್ ದನೀಶ್ ಕನೇರಿಯಾ ರವರು ಇದೀಗ ರಾಮ ಮಂದಿರದ ಕುರಿತು ಮಾತನಾಡಿದ್ದು ಇದು ವಿಶ್ವದ ಎಲ್ಲಾ ಹಿಂದೂಗಳಿಗೆ ಒಂದು ಐತಿಹಾಸಿಕ ದಿನವಾಗಿದೆ, ಭಗವಾನ್ ರಾಮನ ಸೌಂದರ್ಯವೂ ಅವನ ಹೆಸರಿನಲ್ಲಿ ಅಡಗಿ ಕುಳಿತಿಲ್ಲ, ಬದಲಾಗಿ ಆತನ ನಡುವಳಿಕೆಯಲ್ಲಿ ಸೌಂದರ್ಯವಿದೆ. ಆತನು ದುಷ್ಟರ ಮೇಲೆ ವಿಜಯ ಸಾಧಿಸುವ ಹಕ್ಕಿನ ಸಂಕೇತವಾಗಿದ್ದಾನೆ, ಇಂದು ಪ್ರಪಂಚದಾದ್ಯಂತ ಒಂದು ಸಂತೋಷದ ಅಲೆ ಇದೆ. ಇದು ಬಹಳ ತೃಪ್ತಿಯ ಕ್ಷಣವಾಗಿದೆ, ಶ್ರೀ ರಾಮ ನಮ್ಮೆಲ್ಲರಿಗೂ ಆರಾಧ್ಯ ದೈವ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು, ಭಾರತೀಯ ಕ್ರಿಕೆಟ್ ಆಟಗಾರರು ಬಹುಶಃ ಯಾರಾದರೂ ದುಡ್ಡು ಕೊಡುತ್ತಾರಾ ಎಂದು ಕಾದು ಕುಳಿತಿರಬೇಕು, ಯಾಕೆಂದರೆ ಅವರ ಒಂದು ಪೋಸ್ಟ್ ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತದೆ ಎಂದು ಕೇಳಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ, ಇನ್ನು ಹಲವಾರು ಜನ ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.