ಬಾಯ್ಕಾಟ್ ಅಭಿಯಾನಕ್ಕೆ ಸೋಲೊಪ್ಪಿಕೊಂಡ ವಿವೋ, ವಿವೋ ಮಂಡಿಯೂರಿದರೂ ಬಿಸಿಸಿಐ ಗೆ ಏನಾಗಿದೆ? ನಡೆದ್ದದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶದ ವಸ್ತುಗಳನ್ನು ಖರೀದಿಸಬಾರದು ಎಂದು ಹಲವಾರು ಅಭಿಯಾನಗಳು ಆರಂಭವಾಗಿದೆ. ಹಲವಾರು ವರ್ಷಗಳಿಂದ ಈ ರೀತಿಯ ಅಭಿಯಾನಗಳು ಕೇಳಿ ಬಂದಿತ್ತಾದರೂ ಅದು ಕೇವಲ ಸಾಮಾನ್ಯ ಜನರ ಮಟ್ಟಕಸ್ಟೇ ಸೀಮಿತವಾಗಿತ್ತು. ಆದರೆ ಗಡಿಯಲ್ಲಿ ನಡೆದ ಘಟನೆ ಸಾಮಾನ್ಯ ಜನರನ್ನು ಸೇರಿಸಿದಂತೆ ಸೆಲೆಬ್ರೆಟಿಗಳು ಹಾಗೂ ಹಲವಾರು ರಾಜ್ಯಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ದೇಶದ ಮೂಲೆ ಮೂಲೆಯಲ್ಲೂ ಚೀನಾ ದೇಶದ ವಸ್ತುಗಳನ್ನು ಬಳಸಬೇಡಿ ಎಂಬ ಅಭಿಯಾನಗಳು ಆರಂಭವಾಗಿವೆ. ಎಲ್ಲರೂ ಒಟ್ಟಾಗಿ ಚೀನಾ ದೇಶಕ್ಕೆ ಬುದ್ದಿಕಲಿಸಿ ತೀರುತ್ತೇವೆ ಎಂದು ಪಣತೊಟ್ಟಿದ್ದಾರೆ. ಈಗಾಗಲೇ ಸ್ವದೇಶಿ ವಸ್ತುಗಳನ್ನು ಬಳಸೋಣ ಹಾಗೂ ನಿರ್ಮಾಣ ಮಾಡೋಣ ಎಂಬ ಅಭಿಯಾನವು ಕೂಡ ಭರ್ಜರಿ ಯಶಸ್ಸನ್ನು ಕಾಣುತ್ತಿದ್ದು ದಿನೇ ದಿನೇ ಚಿಕ್ಕ ಚಿಕ್ಕ ಮೆಟ್ಟಿಲುಗಳು ಆದರೂ ಒಂದಲ್ಲ ಒಂದು ರೀತಿಯ ಜಯಗಳನ್ನು ಗಳಿಸುತ್ತಾ ಅಭಿಯಾನಗಳು ಮುಂದೆ ಸಾಗುತ್ತಿದೆ.

ಈಗಾಗಲೇ ಭಾರತ ದೇಶದಲ್ಲಿ ಅಭಿಯಾನಗಳಿಂದ ಚೀನಾ ದೇಶ ಲಕ್ಷಾಂತರ ಕೋಟಿಗಳ ನಷ್ಟ ಅನುಭವಿಸಿದೆ. ಕೇವಲ ನಿನ್ನೆಯಷ್ಟೇ ಚೀನಾ ದೇಶದ ರಾಖಿಗಳನ್ನು ಭಾರತೀಯರು ಕೊಂಡುಕೊಳ್ಳದ ಕಾರಣ ಬರೋಬ್ಬರಿ ನಾಲ್ಕು ಸಾವಿರ ಕೋಟಿ ನಷ್ಟವನ್ನು ಚೀನಾ ದೇಶ ಅನುಭವಿಸಿದೆ. ಈ ನಿರ್ಧಾರವನ್ನು ಕಳೆದ ಕೆಲವು ದಿನಗಳ ಹಿಂದೆ ವ್ಯಾಪಾರಿ ಒಕ್ಕೂಟವು ಮಾಡಿದೆ ಎಂದು ನಾವು ಸುದ್ದಿ ಪ್ರಕಟಣೆ ಮಾಡಿದಾಗ ಹಲವಾರು ಚೀನಾ ಪ್ರೇಮಿಗಳು ನಮ್ಮ ಮೇಲೆ ಮುಗಿಬಿದ್ದಿದ್ದರು. ಇದು ಎಲ್ಲಾ ಸುಳ್ಳು ಚೀನಾಗೆ ನಷ್ಟ ಇಲ್ಲ ಎಂದಿದ್ದರು ಹಾಗೂ ವ್ಯಾಪಾರಿಗಳು ಚೀನಾ ದೇಶದಿಂದ ಆಮದು ಮಾಡಿಕೊಳ್ಳುತ್ತಾರೆ ನೋಡುತ್ತಿರಿ ಎಂದಿದ್ದರು. ಆದರೆ ಈಗಾಗಲೇ ರಕ್ಷಾv ಬಂಧನ ಮುಗಿದು ಹೋಗಿದೆ ಹಾಗೂ ಭಾರತೀಯ ವ್ಯಾಪಾರಿಗಳು ಚೀನಾ ದೇಶದಿಂದ ರಾಖಿಗಳನ್ನು ಆಮದು ಮಾಡಿಕೊಂಡಿಲ್ಲ. ಇದರಿಂದ ಚೀನಾ ದೇಶಕ್ಕೆ ನಾಲ್ಕು ಸಾವಿರ ಕೋಟಿ ನಷ್ಟವಾಗಿದೆ ಎಂದು ಮಾಧ್ಯಮದಲ್ಲಿ ನೀವು ಸುದ್ದಿ ನೋಡಿರುತ್ತೀರಾ. ಇಂದು ಕೂಡ ಅದೇ ರೀತಿಯ ಘಟನೆ ನಡೆಯುತ್ತಿದ್ದು ಭಾರತೀಯ ಅಭಿಯಾನಕ್ಕೆ ವಿವೋ ಕಂಪನಿ ಸೋಲೊಪ್ಪಿಕೊಂಡಿದೆ.

ನಾನೂರಕ್ಕೂ ಹೆಚ್ಚು ಕೋಟಿ ರೂಪಾಯಿ ಖರ್ಚು ಮಾಡುವ ಮೂಲಕ ಐಪಿಎಲ್ ಪ್ರಾಯೋಜಕತ್ವವನ್ನು ಪಡೆದು ಕೊಂಡಿದ್ದ ವಿವೋ ಕಂಪನಿಯು ಇದೀಗ ಇನ್ನು ಹಲವಾರು ವರ್ಷಗಳ ಒಪಂದ ಬಾಕಿ ಉಳಿದಿರುವ ಸಂದರ್ಭದಲ್ಲಿಯೇ, ನಾವು ಇನ್ನು ಮುಂದೆ ಐಪಿಎಲ್ ಪ್ರಾಯೋಜಕತ್ವವನ್ನು ಭಾರತದಲ್ಲಿ ನಡೆಸುವುದಿಲ್ಲ ಎಂದು ಹೇಳಿ ಹಿಂದೆ ಸರಿಯಲು ನಿರ್ಧಾರ ಮಾಡುತ್ತಿದೆ. ವಿವೋ ಕಂಪನಿಯ ನಿರ್ಧಾರದ ಕುರಿತು ಬಿಸಿಸಿಐ ಸಂಸ್ಥೆಯು ಈಗಾಗಲೇ ಎಲ್ಲಾ ಫ್ರಾಂಚೈಸಿಗಳ ಜೊತೆ ಮಾತುಕತೆ ನಡೆಸಿದೆ ಹಾಗೂ ವಿವೋ ಕಂಪನಿಗೆ ತನ್ನ ಅಧಿಕೃತ ನಿರ್ಧಾರ ತಿಳಿಸಲು ಕೇಂದ್ರದ ಒಪ್ಪಿಗೆ ಅಗತ್ಯವಿರುವ ಕಾರಣ ಕೇಂದ್ರದ ಬಳಿ ಹಲವಾರು ಸುತ್ತಿನ ಸಭೆಗಳಲ್ಲಿ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. ಆದರೆ ಇದನ್ನು ಕಂಡ ಸಾಮಾನ್ಯ ಜನರು ಬಿಸಿಸಿಐ ಈ ಕೂಡಲೇ ವಿವೋ ಕಂಪನಿಯ ಮನವಿಯನ್ನು ಅಂಗೀಕಾರ ಮಾಡಿ ಪ್ರಾಯೋಜಕತ್ವವನ್ನು ನಿಲ್ಲಿಸಿ ಇಲ್ಲವಾದಲ್ಲಿ ಐಪಿಎಲ್ ಯಾರೂ ನೋಡುವುದಿಲ್ಲ ಎಂಬ ಮಾತುಗಳ ಮೂಲಕ ಸ್ಪಷ್ಟ ಸಂದೇಶ ರವಾನೆ ಮಾಡಿದ್ದಾರೆ.