ಗೇರ್ ಬದಲಾಯಿಸುತ್ತಿದೆ ಭಾರತ ! 5 ನೇ ತಲೆಮಾರಿನ ಯುದ್ದ ವಿಮಾನಗಳ ವಿಷಯದಲ್ಲಿ ಬಲಾಡ್ಯ ರಾಷ್ಟ್ರಗಳಿಗೆ ಸೆಡ್ಡು ! ನಡೆಯುತ್ತಿರುವುದಾದರೂ ಏನು ಗೊತ್ತಾ??

ಗೇರ್ ಬದಲಾಯಿಸುತ್ತಿದೆ ಭಾರತ ! 5 ನೇ ತಲೆಮಾರಿನ ಯುದ್ದ ವಿಮಾನಗಳ ವಿಷಯದಲ್ಲಿ ಬಲಾಡ್ಯ ರಾಷ್ಟ್ರಗಳಿಗೆ ಸೆಡ್ಡು ! ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದಷ್ಟೇ ಭಾರತಕ್ಕೆ 4.5 ತಲೆಮಾರಿನ 5 ರಫೇಲ್ ಯುದ್ಧ ವಿಮಾನಗಳು ಆಗಮಿಸಿವೆ. ಇನ್ನು ಒಂದೂವರೇ ವರ್ಷದಲ್ಲಿ ಉಳಿದ 31 ಯುದ್ಧ ವಿಮಾನಗಳು ಭಾರತೀಯ ವಾಯುಪಡೆಯನ್ನು ಸೇರಲಿವೆ. ಇದು ಉತ್ತಮ ಬೆಳವಣಿಗೆಯಾದರೂ ಕೂಡ ಎಲ್ಲೋ ಒಂದು ಕಡೆ ಇತರ ದೇಶಗಳ ಮೇಲೆ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ಆಲೋಚನೆ ನಡೆಸಿರುವ ಭಾರತಕ್ಕೆ ಅತ್ಯಾಧುನಿಕ ಯುದ್ಧ ವಿಮಾನಗಳ ತಯಾರಿಕೆ ಕನಸಾಗಿಯೇ ಉಳಿದಿದೆ. ತೇಜಸ್ ಯುದ್ಧ ವಿಮಾನ, ಬ್ರಹ್ಮೋಸ್ ಕ್ಷಿಪಣಿಗಳು, ಹೆಲಿಕ್ಯಾಪ್ಟರ್ ಗಳು ಸೇರಿದಂತೆ ಇನ್ನಿತರ ಮಿಲಿಟರಿ ಉಪಕರಣಗಳನ್ನು ಭಾರತದಲ್ಲಿ ತಯಾರಿ ಮಾಡುತ್ತಿದ್ದರೂ ಕೂಡ ಭಾರತೀಯ ವಾಯುಪಡೆಗೆ ಅತ್ಯಾಧುನಿಕವಾಗಿ ಅಗತ್ಯವಾಗಿರುವ ಯುದ್ಧ ವಿಮಾನಗಳ ತಯಾರಿ ಇಲ್ಲಿಯವರೆಗೂ ಭಾರತದಲ್ಲಿ ನಡೆದಿಲ್ಲ.

ವಿಶ್ವದ ಇತರ ದೇಶಗಳು 5ನೇ ತಲೆಮಾರಿನ ಯುದ್ಧ ವಿಮಾನಗಳನ್ನು ತಯಾರಿ ಮಾಡುವ ಆಲೋಚನೆಯಲ್ಲಿ ತೊಡಗಿಕೊಂಡಿರುವ ಸಂದರ್ಭದಲ್ಲಿ ಭಾರತದಲ್ಲಿ ಇಲ್ಲಿಯವರೆಗೂ ನಾಲ್ಕನೇ ತಲೆಮಾರಿನ ಯುದ್ದ ವಿಮಾನ
ಕೂಡ ತಯಾರಾಗಿಲ್ಲ. ಇದರ ಕುರಿತು ಆಲೋಚನೆ ನಡೆಸಿ ರಷ್ಯಾ ದೇಶದ ಜೊತೆ 5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಸಿ ಮಿಲಿಟರಿ ಕ್ಷೇತ್ರದಲ್ಲಿ ಮತ್ತಷ್ಟು ಯಶಸ್ಸು ಸಾಧಿಸಲು ಭಾರತ ಆಲೋಚನೆ ನಡೆಸಿತ್ತು. ಆದರೆ 2017ರಲ್ಲಿ ಭಾರತ ದೇಶವು ವಿದೇಶಿ ತಂತ್ರಜ್ಞಾನದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿ ಇಲ್ಲಿಯೇ ಐದನೇ ತಲೆಮಾರಿನ ಯುದ್ಧ ವಿಮಾನವನ್ನು ತಯಾರಿಸಲು ನಿರ್ಧಾರ ಮಾಡಿ ರಷ್ಯಾ ದೇಶದ ಬಳಿ ಇದರ ಕುರಿತು ಮಾತುಕತೆ ನಡೆಸಿತ್ತು. ಆದರೆ ರಷ್ಯಾದ ಸುಖೋಯ್ ಕಂಪನಿ ಊಹಿಸಲಾಗದಷ್ಟು ಹಣ ಕೇಳಿದ ಬಳಿಕ ಭಾರತ ಒಪ್ಪಂದ ಕೈಬಿಟ್ಟು, ನಮ್ಮಲ್ಲಿಯೇ 5ನೇ ತಲೆಮಾರಿನ ಯುದ್ಧ ವಿಮಾನ ತಯಾರಿಸುತ್ತೇವೆ ಎಂದಿತ್ತು.

ಇದೀಗ ಇದರ ಕುರಿತು ಮಹತ್ವದ ಮಾಹಿತಿಗಳು ಹೊರ ಬಿದ್ದಿದ್ದು, ಇನ್ನು ಕೆಲವೇ ಕೆಲವು ವರ್ಷಗಳಲ್ಲಿ ಭಾರತದಲ್ಲಿ 5ನೇ ತಲೆಮಾರಿನ ಯುದ್ಧ ವಿಮಾನಗಳು ತಯಾರಾಗಲಿವೆ ಎಂಬ ಸುದ್ದಿಗಳು ತಿಳಿದು ಬಂದಿದೆ. ಇತರ ಕುರಿತು ಅಧಿಕೃತ ಆದೇಶ ವನ್ನು ವಾಯುಪಡೆ ಅಧ್ಯಕ್ಷರೇ ಹೊರ ಹಾಕಿರುವ ಕಾರಣ ಭಾರತೀಯರ ಕನಸು ಮತ್ತಷ್ಟು ಬಲಗೊಂಡಿವೆ. ಹೌದು, ಭಾರತ ತನ್ನ 5 ನೇ ತಲೆಮಾರಿನ ಸುಧಾರಿತ ಮಲ್ಟಿರೋಲ್ ಯುದ್ಧ ವಿಮಾನವನ್ನು (ಎಎಂಸಿಎ) ಅಭಿವೃದ್ಧಿಪಡಿಸುವಲ್ಲಿ ನಿರತವಾಗಿದ್ದು, ತನ್ನ ಕಾರ್ಯವನ್ನು ವೇಗಗೊಳಿಸಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ರಷ್ಯಾ ಹಾಗೂ ಫ್ರಾನ್ಸ್ ದೇಶಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ಮತ್ತು ‘ಆತ್ಮನಿರ್ಭರ್ ಭಾರತ್’ ಅನ್ನು ಬೆಂಬಲಿಸುವುದು ಇದರ ಮೂಲ ಉದ್ದೇಶವಾಗಿದೆ. ಭಾರತೀಯ ವಾಯುಪಡೆ (ಐಎಎಫ್) ಸ್ಥಳೀಯ ಎಎಂಸಿಎ ಅಭಿವೃದ್ಧಿಪಡಿಸಲು ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮತ್ತು ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿಯ ಸಹಯೋಗದೊಂದಿಗೆ ಅತಿ ವೇಗವಾಗಿ 5 ನೇ ತಲೆಮಾರಿನ ಯುದ್ಧ ವಿಮಾನಗಳನ್ನು ತಯಾರಿಸಲು ಮುಂದಾಗಿದೆ. ಮೊದಲ ಹಾರಾಟವನ್ನು 2024-25ರಲ್ಲಿ ನಿರೀಕ್ಷಿಸಲಾಗಿದ್ದು, ಪ್ರಯೋಗಗಳು ಮತ್ತು ಪರೀಕ್ಷೆಗಳ ನಂತರ 2029 ರ ವೇಳೆಗೆ ಪೂರ್ಣ ಉತ್ಪಾದನೆಯಾಗಲಿವೆ. ಈ ಯುದ್ಧ ವಿಮಾನಗಳು 25-ಟನ್ ತೂಕವಿರಲಿದ್ದು, ಎಲ್ಲಾ ರೀತಿಯ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯ ಬಲ್ಲದಾಗಿರುತ್ತವೆ, ಅದು ಸೂಪರ್-ಕ್ರೂಸ್ ವೇಗದೊಂದಿಗೆ, ಯಾಕೆಂದರೆ ಇವುಗಳು ಎರಡು ಎಂಜಿನ್ ಗಳನ್ನು ಹೊಂದಿರಲಿವೆ ಎಂಬುದು ತಿಳಿದು ಬಂದಿದೆ.