ಕೃಷ್ಣ ಹಾಗೂ ರಾಮ ತುಳಸಿಗೂ ಇರುವ ವ್ಯತ್ಯಾಸ ಹಾಗೂ ಮಹತ್ವವೇನು ಗೊತ್ತೇ?? ಮನೆಯಲ್ಲಿ ತುಳಸಿ ಬೆಳೆಸುವುದರಿಂದ ಆಗುವ ಲಾಭಗಳೇನು ಗೊತ್ತೇ?

ಕೃಷ್ಣ ಹಾಗೂ ರಾಮ ತುಳಸಿಗೂ ಇರುವ ವ್ಯತ್ಯಾಸ ಹಾಗೂ ಮಹತ್ವವೇನು ಗೊತ್ತೇ?? ಮನೆಯಲ್ಲಿ ತುಳಸಿ ಬೆಳೆಸುವುದರಿಂದ ಆಗುವ ಲಾಭಗಳೇನು ಗೊತ್ತೇ?

ನಮಸ್ಕಾರ ಸ್ನೇಹಿತರೇ, ಭಾರತೀಯ ಸಂಸ್ಕೃತಿಯಲ್ಲಿ ತುಳಸಿ ಗಿಡ ಬಹಳ ಪವಿತ್ರವಾದದ್ದು ಎಂದು ನಂಬಲಾಗಿದೆ. ಹಲವಾರು ಔಷದಿ ಗುಣಗಳನ್ನು ಹೊಂದಿರುವ ತುಳಸಿಯನ್ನು ನಾವು ಲಕ್ಷಿ ತಾಯಿಯ ಅವತಾರವೆಂದು ಪರಿಗಣಿಸುತ್ತೇವೆ. ವಿಷ್ಣುವಿನ ಪೂರ್ಣಾವತಾರವಾದ ಕೃಷ್ಣನಿಗೆ ತುಳಸಿ ಎಂದರೇ ಬಹಳ ಅಚ್ಚು ಮೆಚ್ಚು. ಅದೇ ಕಾರಣಕ್ಕಾಗಿ ಪೂಜೆಯಲ್ಲಿ ಕೃಷ್ಣನಿಗೆ ತುಳಸಿಯನ್ನು ಅರ್ಪಿಸಲಾಗುತ್ತದೆ. ತುಳಸಿಯಲ್ಲಿ ಒಟ್ಟಾಗಿ ಮೂರು ವಿಧಗಳಿದ್ದು, ರಾಮ ತುಳಸಿ, ಕೃಷ್ಣ ತುಳಸಿ ಹಾಗೂ ವನ ತುಳಸಿ. ಇಂದು ನಾವು ಕೃಷ್ಣ ತುಳಸಿ ಹಾಗೂ ರಾಮ ತುಳಸಿಗೂ ಇರುವ ವ್ಯತ್ಯಾಸ ಹಾಗೂ ಅವುಗಳ ಮಹತ್ವಗಳ ಬಗ್ಗೆ ತಿಳಿದುಕೊಳ್ಳೋಣ. ಯಾವ ಕಾರಣಕ್ಕೆ ನಮ್ಮ ಪುರಾಣಗಳಲ್ಲಿ ಹಾಗೂ ನಮ್ಮ ಹಿರಿಯರು ತುಳಸಿಗೆ ಮಹತ್ವ ನೀಡುತ್ತಿದ್ದರು ಎಂಬ ಪ್ರಶ್ನೆ ಇಂದು ನಮಗೆ ಉತ್ತರ ಸಿಗಲಿದೆ.

ಕೃಷ್ಣ ತುಳಸಿಯು ಸಾಮಾನ್ಯವಾಗಿ ಕಪ್ಪು ಅಥವಾ ನೇರಳೆ ಬಣ್ಣದ ತುಳಸಿ ಎಲೆಗಳನ್ನು ಹೊಂದಿರುತ್ತದೆ, ಕಾಂಡಗಳು ಕೂಡ ಕಪ್ಪು ಅಥವಾ ನೇರಳೆ ಬಣ್ಣದಾಗಿರುತ್ತವೆ. ಇವುಗಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚುಸುವಂತಹ ಗುಣಗಳು ಸಾಕಷ್ಟಿವೆ. ಪ್ರಮುಖವಾಗಿ ಇದು ದೇಶದ ಉಷ್ಣಾಂಶವನ್ನು ಹೆಚ್ಚಿಸುತ್ತದೆ. ಆದ ಕಾರಣ ಮಳೆಗಾಲದಲ್ಲಿ ಇವುಗಳನ್ನು ಬಳಸ ಬಹುದಾಗಿದೆ. ಇನ್ನು ಕಫ, ಕೆಮ್ಮು ನಂತಹ ಕಾಯಿಲೆಗಳಿಗೆ ಇದು ರಾಮ ಬಾಣವಾಗಿದೆ. ಇನ್ನು ರಾಮ ತುಳಸಿಯು ನೋಡುವುದಕ್ಕೆ ಹಸಿರಾಗಿರುತ್ತದೆ. ರುಚಿಯನ್ನು ಗಮನಿಸುವುದಾದರೇ ರಾಮ ತುಳಸಿಯು ಹೆಚ್ಚು ಒಗರು ಇರುವುದಿಲ್ಲ, ಆದರೆ ಕೃಷ್ಣ ತುಳಸಿಯು ಹೆಚ್ಚು ಖಾರ ಮತ್ತು ಒಗರಾಗಿತ್ತದೆ. ರಾಮ ತುಳಸಿಯು ತಂಪಿನ ಅಂಶಗಳನ್ನು ಹೊಂದಿದ್ದು, ಬೇಸಿಗೆಯಲ್ಲಿ ಕಷಾಯ ಅಥವಾ ಪಾನಕ ಮಾಡಿಕೊಂಡು ದೇಹದ ತೇವಾಂಶವನ್ನು ಕಾಪಾಡಿ ಕೊಳ್ಳಬಹುದಾಗಿದೆ.

ಪೂಜೆಯ ವಿಚಾರದಲ್ಲಿ ಗಮನಿಸುವುದಾದರೇ, ಎರಡೂ ರೀತಿಯ ತುಳಸಿಗಳಿಗೆ ಮಹತ್ವ ನೀಡಲಾಗುತ್ತದೆಯಾದರೂ, ವಿಷ್ಣುವಿಗೆ ಕೃಷ್ಣ ತುಳಸಿ ಎಂದರೇ ಅಚ್ಚು ಮೆಚ್ಚು. ಆದ ಕಾರಣ ಪೂಜೆಯಲ್ಲಿ ಕೃಷ್ಣ ತುಳಸಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತದೆ. ಇನ್ನು ತುಳಸಿ ಗಿಡಗಳನ್ನು ಮನೆಯ ಮುಂದೆ ಬೆಳೆಸುವುದರಿದ ಆಗುವ ಪ್ರಯೋಜನಗಳೆಂದರೇ, ತುಳಸಿಗಳ ಸುವಾಸನೆಯಿಂದ ಸೊಳ್ಳೆ ಸೇರಿದಂತೆ ಇನ್ನಿತರ ಕೀಟಗಳು ಕಡಿಮೆಯಾಗುತ್ತವೆ. ಹೆಚ್ಚಿನ ಗಿಡಗಳು ಇದ್ದಷ್ಟು ಕೀಟಗಳು ಕಡಿಮೆ. ಅಷ್ಟೇ ಅಲ್ಲದೇ, ನೀವು ಪ್ರತಿದಿನ ಎರಡರಿಂದ ಮೂರು ತುಳಸಿ ಎಲೆಗಳನ್ನು ಸೇವಿಸುತ್ತಾ ಬಂದರೇ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದಲ್ಲಿರುವ ಅನಗತ್ಯ ಬೊಜ್ಜು ಕೂಡ ಕರಗುತ್ತದೆ ಎಂದು ವೈದ್ಯ ಶಾಸ್ತ್ರ ಹೇಳುತ್ತದೆ. ಒಂದು ತುಳಸಿ ಗಿಡದಿಂದ ಇಷ್ಟೆಲ್ಲ ಲಾಭಗಳು ಇರುವಾಗ ನಮ್ಮ ಮನೆ ಮುಂದೆ ಯಾಕೆ ಒಂದು ತುಳಸಿ ಗಿಡ ಇರಬಾರದು? ಅಲ್ಲವೇ, ಈ ಕೂಡಲೇ ನಿಮ್ಮ ಮನೆ ಮುಂದೆ ಒಂದು ತುಳಸಿ ಗಿಡ ಬೆಳೆಸಿ.