ಭಾರತೀಯ ನೌಕಾಪಡೆಗೆ ಆನೆಬಲ ತುಂಬಲ ನಿರ್ಧಾರ ! ಮತ್ತೊಂದು ಮಹತ್ವದ ಒಪ್ಪಂದಕ್ಕೆ ಸಿದ್ಧವಾಗಿದೆ ಭಾರತ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ದೇಶ ಸುಖಾ ಸುಮ್ಮನೆ ಗಡಿಗಳಲ್ಲಿ ಕ್ಯಾತೆ ತೆಗೆಯುತ್ತಿದೆ. ಭಾರತ ದೇಶವಷ್ಟೇ ಅಲ್ಲದೇ ತನ್ನ ಇತರ ನೆರೆಹೊರೆಯ ರಾಷ್ಟ್ರಗಳ ಜೊತೆ ಗಡಿ ಕ್ಯಾತೆ ತೆಗೆದು ಇನ್ನಿಲ್ಲದ ತಕರಾರು ಮಾಡುತ್ತಿರುವ ಚೀನಾ ದೇಶಕ್ಕೆ ಬುದ್ಧಿ ಕಲಿಸಲು ವಿಶ್ವದ ಬಲಾಢ್ಯ ದೇಶಗಳು ಒಂದಾಗಿವೆ. ಎಲ್ಲಾ ದೇಶಗಳು ಒಂದಾಗಿ ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡುತ್ತಿರುವ ಬೆನ್ನಲ್ಲೇ ಭಾರತ ದೇಶ ತನ್ನ ಸೇನಾ ಒಲವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಿಕೊಳ್ಳುವತ್ತ ಗಮನ ಹರಿಸಿದೆ. ಯುದ್ಧದಲ್ಲಿ ಭಾರತಕ್ಕೆ ಇತರ ದೇಶಗಳಿಂದ ಸಿಗುತ್ತದೆಯಾದರೂ ಇತರ ದೇಶಗಳ ಮೇಲೆ ಅವಲಂಬಿತವಾಗಿರುವುದು ಒಳ್ಳೆಯದಲ್ಲ ಎಂಬುದನ್ನು ಭಾರತ ದೇಶ ಸ್ಪಷ್ಟವಾಗಿ ಅರಿತು ಕೊಂಡಿದೆ. ಅದೇ ಕಾರಣಕ್ಕಾಗಿ ಹಲವಾರು ಯುದ್ಧ ವಿಮಾನಗಳನ್ನು ರಷ್ಯಾ ದೇಶದಿಂದ ಆಮದು ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ.

ಇದರ ಜೊತೆಗೆ ಹಿಂದುಸ್ತಾನ ಏರೋನಾಟಿಕ್ಸ್ ಲಿಮಿಟೆಡ್ ಕಂಪನಿಯ ಜೊತೆ ವಿಶ್ವದ ಇತರ ದೇಶಗಳ ಗಮನಸೆಳೆದಿರುವ ತೇಜಸ್ ಫೈಟರ್ ಜೆಟ್ ಗಳನ್ನು ಭಾರತೀಯ ವಾಯುಪಡೆಗೆ ಸೇರಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದ್ದು, ಇನ್ನೇನು ಕೆಲವೇ ಕೆಲವು ದಿನಗಳಲ್ಲಿ 83 ಫೈಟರ್ ಜೆಟ್ ಗಳ ಒಪ್ಪಂದಕ್ಕೆ ಸಹಿ ಹಾಕಲಾಗುತ್ತಿದೆ ಎಂದು ಹಿಂದುಸ್ಥಾನ್ ಏರೊನಾಟಿಕ್ಸ್ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷರೇ ಹೇಳಿದ್ದಾರೆ. ಇವೆಲ್ಲವೂ ಹೊಸ ಒಪ್ಪಂದ ವಾದರೇ ಈಗಾಗಲೇ ಭಾರತ ದೇಶ ಫ್ರಾನ್ಸ್ ನ ರಫೆಲ್ ಯುದ್ಧ ವಿಮಾನಗಳು, ರಷ್ಯಾ ದೇಶದ ಯುದ್ಧವಿಮಾನ ಹಾಗೂ s400 ಕ್ಷಿಪಣಿ ವ್ಯವಸ್ಥೆ, ಸಮುದ್ರದಲ್ಲಿ ಅಡಗಿರುವ ಸಬ್ ಮೆರಿನ್ ಗಳನ್ನು ಹುಡುಕಿ ಉಡೀಸ್ ಮಾಡುವಂತಹ ವಿಶ್ವದಲ್ಲಿಯೇ ಬಲಾಡ್ಯ ಹೆಲಿಕಾಪ್ಟರ್ಗಳು ಎಂದು ಖ್ಯಾತಿ ಪಡೆದು ಕೊಂಡಿರುವ MH-60 ಸೀ ವಾಕ್ ಹೆಲಿಕ್ಯಾಪ್ಟರ್ ಗಳು ಇನ್ನೇನು ಕೆಲವೇ ಕೆಲವು ತಿಂಗಳುಗಳಲ್ಲಿ ಭಾರತೀಯ ಸೇನೆಗೆ ಸೇರಿಕೊಳ್ಳಲಿದೆ.

ಈ ಎಲ್ಲಾ ಒಪ್ಪಂದಗಳ ನಡುವೆ ಇದೀಗ ಭಾರತ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದ್ದು, ಭಾರತ ಹಾಗೂ ಚೀನಾ ನಡುವೆ ಒಂದು ವೇಳೆ ಯುದ್ಧ ನಡೆದಲ್ಲಿ ಪ್ರಮುಖ ಪಾತ್ರವಹಿಸುವ ಸಮುದ್ರ ಮಾರ್ಗದಲ್ಲಿ ಚೀನಾ ದೇಶಕ್ಕೆ ತಕ್ಕ ಉತ್ತರ ನೀಡಲು ಭಾರತೀಯ ನೌಕಾ ಪಡೆಯನ್ನು ಮತ್ತಷ್ಟು ಬಲಪಡಿಸಲು ಸಿದ್ಧತೆ ನಡೆಸಿದೆ. ಹೌದು, ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋನ ಪರಿಸ್ಥಿತಿಯಿಂದ ಭಾರತದ ಎರಡನೇ ಯುದ್ಧವಿಮಾನ ನೌಕೆ ಸೇರ್ಪಡೆ ಗೊಳ್ಳುವುದು ವಿಳಂಬವಾಗಿದೆ. ಆದರೆ ಎರಡನೇ ಯುದ್ಧವಿಮಾನ ಭಾರತೀಯ ನೌಕಾಪಡೆಗೆ ಸೇರಿಕೊಳ್ಳುವ ಮುನ್ನವೇ ಭಾರತ ದೇಶವು ಮತ್ತೊಂದು ಯುದ್ಧವಿಮಾನ ನೌಕೆಯನ್ನು ನೌಕಾಪಡೆಗೆ ಸೇರಿಸಲು ಮುಂದಾಗಿದೆ. ಚೀನಾ ದೇಶ ಈಗಾಗಲೇ ಎರಡು ಯುದ್ಧವಿಮಾನ ನೌಕೆಗಳನ್ನು ಹೊಂದಿರುವ ಕಾರಣ ಭಾರತ ದೇಶಕ್ಕೆ ಕೂಡ ಮತ್ತಷ್ಟು ವಿಮಾನ ಯುದ್ಧ ನೌಕೆಗಳು ಅತ್ಯಗತ್ಯವಾಗಿದೆ, ಅದೇ ಕಾರಣಕ್ಕಾಗಿ ಇದೀಗ ಭಾರತ ದೇಶವು ಎರಡನೇ ಯುದ್ದ ನೌಕೆ ಬರುವ ಮುನ್ನವೇ ಮೂರನೇ ಯುದ್ಧನೌಕೆಯನ್ನು ಕೂಡ ತಯಾರು ಮಾಡಲು ಸಿದ್ಧತೆ ನಡೆಸಿದೆ. ಒಟ್ಟಿನಲ್ಲಿ ದಿನೇದಿನೇ ಭಾರತೀಯ ಸೇನೆಯ ಬಲ ಹೆಚ್ಚುತ್ತಿದ್ದು ಖಂಡಿತ ಚೀನಾ ದೇಶ ಕ್ಯಾತೆ ತೆಗೆದರೇ ಮುಟ್ಟಿನೋಡಿಕೊಳ್ಳುವಂತೆ ಉತ್ತರ ನೀಡಿ ಭಾರತದ ಭೂಭಾಗಗಳನ್ನು ವಾಪಸು ಪಡೆಯುವುದರಲ್ಲಿ ಯಾವುದೇ ಅನುಮಾನ ವಿರುವುದಿಲ್ಲ.