ಚೀನಾಗೆ ಮತ್ತೊಂದು ಬಿಗ್ ಶಾಕ್ ! ಸ್ವದೇಶಿ ಭಾರತವನ್ನು ಉತ್ತೇಜಿಸಲು ಮತ್ತೊಂದು ಕ್ರಮ ತೆಗೆದುಕೊಂಡ ನಮೋ ! ಏನು ಗೊತ್ತಾ??

ಚೀನಾಗೆ ಮತ್ತೊಂದು ಬಿಗ್ ಶಾಕ್ ! ಸ್ವದೇಶಿ ಭಾರತವನ್ನು ಉತ್ತೇಜಿಸಲು ಮತ್ತೊಂದು ಕ್ರಮ ತೆಗೆದುಕೊಂಡ ನಮೋ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶದ ಗಡಿಯಲ್ಲಿ ನಡೆದ ಕಹಿ ಘಟನೆಯ ಬಳಿಕ ಚೀನಾ ದೇಶಕ್ಕೆ ಬುದ್ಧಿ ಕಲಿಸುವ ಸಲುವಾಗಿ ಭಾರತ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಚೀನಾ ಅಪ್ಲಿಕೇಶನ್ಗಳು, ಚೀನಾ ಕಂಪನಿಗಳು ಪಡೆದುಕೊಂಡಿದ್ದ ರೈಲ್ವೆ ಹಾಗೂ ರಸ್ತೆ ಟೆಂಡರ್ ಗಳು, ಚೀನಾದಿಂದ ಆಮದು ಮಾಡಿಕೊಳ್ಳುತ್ತಿದ್ದ ವಿದ್ಯುತ್ ಉಪಕರಣಗಳು ಸೇರಿದಂತೆ ಎಲ್ಲವನ್ನೂ ನಿಲ್ಲಿಸಲಾಗಿದೆ. ಇನ್ನು ಇದೇ ರೀತಿಯ ಹಾದಿಯಲ್ಲಿ ಚೀನಾ ದೇಶದಿಂದ ಆಮದು ಮಾಡಿಕೊಳ್ಳಲಾಗುವ ಸೌರ ಫಲಕಗಳ ಮೇಲಿರುವ ಅವಲಂಬನೆಯನ್ನು ಕಡಿಮೆ ಮಾಡಬೇಕು ಎಂಬ ಆಲೋಚನೆಯಿಂದ ಭಾರತ ತನ್ನದೇ ಆದ ಸಿದ್ಧತೆಗಳನ್ನು ನಡೆಸುತ್ತಿದೆ. ಒಟ್ಟಿನಲ್ಲಿ ಭಾರತ ದೇಶವು ಚೀನಾ ದೇಶದ ಮೇಲಿನ ಎಲ್ಲಾ ವಿಭಾಗಗಳಲ್ಲೂ ಅವಲಂಬನೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ಮೂಲಕ ಚೀನಾ ದೇಶದ ಜೊತೆ ನಡೆಯುತ್ತಿರುವ ಸಂಪೂರ್ಣ ವ್ಯಾಪಾರ ಸಂಪರ್ಕವನ್ನು ಸಿಸೀಮಿತಗೊಳಿಸುವ ಗುರಿ ಹೊಂದಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಚೀನಾ ದೇಶ ಈ ರೀತಿಯ ಕ್ರಮಗಳನ್ನು ಕೈಗೊಳ್ಳಬಾರದು ಎನ್ನುತ್ತಿದ್ದರೂ ಕೂಡ ಭಾರತ ದೇಶ ಚೀನಾ ದೇಶದ ಕೂಗಿಗೆ ಕಿಂಚಿತ್ತೂ ತಲೆಕೆಡಿಸಿಕೊಳ್ಳುತ್ತಿಲ್ಲ. ತನ್ನ ನಿರ್ಧಾರಗಳನ್ನು ತಾನು ತೆಗೆದುಕೊಳ್ಳುತ್ತಾ ಮುಂದೆ ಸಾಗುತ್ತಿದೆ. ಇದೇ ನಿಟ್ಟಿನಲ್ಲಿ ಇದೀಗ ಮತ್ತೊಂದು ಹೆಚ್ಚಾಗುತ್ತಿರುವ ಭಾರತ ದೇಶವು ಮತ್ತೊಂದು ಅಧಿಸೂಚನೆ ಹೊರಡಿಸಿದ್ದು ಇನ್ನು ಮುಂದೆ ಯಾವುದೇ ಕಲರ್ ಟಿವಿ ಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವಂತಿಲ್ಲ ಎಂಬ ಆದೇಶ ಹೊರಡಿಸಿದೆ. ಕಳೆದ ವರ್ಷ ಚೀನಾ ದೇಶದಿಂದ 292 ಮಿಲಿಯನ್ ಡಾಲರ್ ಬೆಳೆಬಾಳುವ ಟಿವಿಗಳು ಆಮದಾಗಿದ್ದವು, ಇನ್ನು ವಿಯೆಟ್ನಾಮ್ ದೇಶದಿಂದ 428 ಮಿಲಿಯನ್ ಡಾಲರ್ ಬೆಲೆ ಬಾಳುವ ಟಿವಿಗಳು ಆಮದಾಗಿದ್ದವು.

ಆದರೆ ಇನ್ನು ಮುಂದೆ ಭಾರತ ದೇಶದಲ್ಲಿ ತಯಾರು ಮಾಡಿರುವ ಟಿವಿ ಗಳನ್ನು ಮಾತ್ರ ಬಳಸುವಂತೆ ಆದೇಶ ನೀಡಲಾಗಿದೆ, ಭಾರತದಲ್ಲಿ ಯಾವುದೇ ವಿದೇಶಿ ಕಂಪನಿಗಳು ಮಾರಾಟ ಮಾಡಬೇಕು ಎಂದು ಕೊಂಡರೆ ನಮ್ಮ ದೇಶದಲ್ಲಿ ಉತ್ಪಾದನಾ ಘಟಕಗಳನ್ನು ತೆಗೆದು ಇಲ್ಲಿಯೇ ತಯಾರಿಸಬೇಕು. ಇದರಿಂದ ಉದ್ಯೋಗಗಳು ಕೂಡ ಹೆಚ್ಚಾಗಲಿದ್ದು ದಿನೇದಿನೇ ಚೀನಾ ದೇಶದ ಮೇಲಿರುವ ಅವಲಂಬನೆ ಭಾರತದಲ್ಲಿ ಕಡಿಮೆಯಾಗುತ್ತ ಸಾಗುತ್ತಿದೆ. ಜನ ಸಾಮಾನ್ಯರು ಕೂಡ ಈ ರೀತಿಯ ನಿರ್ಧಾರಗಳಿಗೆ ಬೆಂಬಲ ಸೂಚಿಸಿದ್ದಾರೆ. ಸ್ವಇಚ್ಛೆಯಿಂದ ತಮ್ಮದೇ ಆದ ವಿವಿಧ ರೀತಿಗಳಲ್ಲಿ ಚೀನಾ ದೇಶಕ್ಕೆ ಬುದ್ದಿ ಕಲಿಸಿಯೇ ತೀರುತ್ತೇವೆ ಎನ್ನುತ್ತಿದ್ದಾರೆ.