ಗ್ರೇಟ್: ತನ್ನ ಹುಟ್ಟುಹಬ್ಬದ ದಿನ 3 ಲಕ್ಷ ಜನರಿಗೆ ವಿಶೇಷ ಹುಡುಗೊರೆ ಹೊತ್ತುತಂದ ಸೋನು ಸೂದ್ ! ಇದು ಆರಂಭ ಮಾತ್ರ ! ಏನು ಗೊತ್ತಾ?

ಗ್ರೇಟ್: ತನ್ನ ಹುಟ್ಟುಹಬ್ಬದ ದಿನ 3 ಲಕ್ಷ ಜನರಿಗೆ ವಿಶೇಷ ಹುಡುಗೊರೆ ಹೊತ್ತುತಂದ ಸೋನು ಸೂದ್ ! ಇದು ಆರಂಭ ಮಾತ್ರ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದು ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ನಿಮ್ಮೆಲ್ಲರ ನೆಚ್ಚಿನ ಸೋನು ಸೂದ್ ರವರು ತಮ್ಮ 47ನೇ ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಕೊಳ್ಳುತ್ತಿದ್ದಾರೆ. ದೇಶದ ಜನರ ಮನ ಗೆದ್ದಿರುವ ಸೋನು ಸೂದ್ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹುಟ್ಟುಹಬ್ಬದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ದೇಶದ ಮೂಲೆ ಮೂಲೆಯಲ್ಲಿ ಲಕ್ಷಾಂತರ ಜನರಿಗೆ ವಿವಿಧ ರೀತಿಯ ಸಹಾಯ ಮಾಡುವ ಮೂಲಕ ಮನೆಮಾತಾಗಿರುವ ಸೋನು ಸೂದ್ ರವರು ತನ್ನ ಹುಟ್ಟುಹಬ್ಬದ ದಿನ ಬೇರೆಯವರಿಂದ ಉಡುಗೊರೆ ಪಡೆದು ಕೊಳ್ಳುವ ಬದಲು ಇದೀಗ ವಿಶೇಷ ರೀತಿಯಲ್ಲಿ ತಾವೇ ಮೂರು ಲಕ್ಷ ಜನರಿಗೆ ವಿಶೇಷ ಉಡುಗೊರೆಯನ್ನು ಹೊತ್ತುಕೊಂಡು ಬಂದಿದ್ದಾರೆ. ಈ ವಿಶೇಷ ಉಡುಗೊರೆಯ ಸಂಖ್ಯೆಗಳು ಕೇವಲ ಆರಂಭ ಮಾತ್ರ ಇದು ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ.

ಹೌದು ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಕೋರೋನ ವೈರಸ್ನಿಂದ ಕೋಟ್ಯಾಂತರ ಜನ ತಮ್ಮ ಹುದ್ದೆಗಳನ್ನು ಕಳೆದು ಕೊಂಡಿದ್ದಾರೆ. ಕೇವಲ ಭಾರತ ಮಾತ್ರವಲ್ಲ ವಿಶ್ವದೆಲ್ಲೆಡೆ ಇದೇ ರೀತಿಯ ಪರಿಸ್ಥಿತಿ ಉಂಟಾಗಿದೆ. ಅದರಲ್ಲಿಯೂ ಉದ್ಯೋಗಕ್ಕಾಗಿ ಬೇರೆ ಪ್ರದೇಶಗಳಿಗೆ ತೆರಳಿ, ವಲಸೆ ಕಾರ್ಮಿಕರು ಕನಿಷ್ಠ ಇನ್ನು ಒಂದು ವರ್ಷಗಳ ಕಾಲ ಕೆಲಸ ಮಾಡುವುದು ಅಸಾಧ್ಯವೆನಿಸಿದೆ. ಇನ್ನು ಇದು ಕೇವಲ ದಿನಗೂಲಿ ಕಾರ್ಮಿಕರಿಗೆ ಮಾತ್ರವಲ್ಲ ಬದಲಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಹೋಗಿದೆ ರೀತಿಯ ಪರಿಸ್ಥಿತಿ ಉಂಟಾಗಿದೆ. ಅದೇ ಕಾರಣಕ್ಕಾಗಿ ಐಟಿ-ಬಿಟಿ ನಗರ ಬೆಂಗಳೂರು ಕೂಡ ಇದೀಗ ದಟ್ಟಣೆ ಇಲ್ಲದೆ ಖಾಲಿಯಾಗಿದೆ.

ಇದರ ಕುರಿತು ಗಮನ ಹರಿಸಿರುವ ಸೋನು ಸೂದ್ ರವರು ತಮ್ಮದೇ ಆದ ವೆಬ್ ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ಮೂಲಕ ಉದ್ಯೋಗ ನೀಡುವ ಕಂಪನಿಗಳು ಹಾಗೂ ಉದ್ಯೋಗಕ್ಕಾಗಿ ಕಾದುಕುಳಿತಿರುವ ಜನರನ್ನು ಒಂದೇ ಪ್ಲಾಟ್ನಲ್ಲಿ ತರಲು ವೆಬ್ಸೈಟ್ ಹಾಗೂ ಅಪ್ಲಿಕೇಶನ್ ರಿಲೀಸ್ ಮಾಡಿದ್ದಾರೆ.ಈಗಾಗಲೇ ಮೂರು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಬೇಕಾಗಿದೆ ಎಂದು ಹಲವಾರು ಕಂಪನಿಗಳು ಆಸಕ್ತಿ ತೋರಿದ್ದು ಈ ಕಂಪನಿಗಳಲ್ಲಿ ಉತ್ತಮ ಸಂಬಳ, ಪಿಎಫ್, ಪಿಎಸ್ಐ ಹಾಗೂ ಇನ್ನಿತರ ಸೌಲಭ್ಯಗಳು ಇರಲಿವೆ ಎಂದು ತಿಳಿದು ಬಂದಿದೆ. ಇಂದು ಕೇವಲ ಆರಂಭವಾಗಿದ್ದು, ಮತ್ತಷ್ಟು ಉದ್ಯೋಗದಾತ ಕಂಪನಿಗಳು ಈ ವೆಬ್ಸೈಟ್ ನಲ್ಲಿ ಸೇರಿಕೊಳ್ಳಲಿವೆ ಇದರಿಂದ ಉದ್ಯೋಗಗಳು ದೊರೆಯಲಿವೆ. ಈ ವೆಬ್ಸೈಟ್ ನ ಹೆಸರು Pravasirojgar.com ಆಗಿದ್ದು ನಿಮಗೆ ಉದ್ಯೋಗ ಬೇಕು ಎಂದಲ್ಲಿ ನೀವು ಕೂಡ ಅರ್ಜಿ ಹಾಕಬಹುದಾಗಿದೆ. ಒಂದು ವೇಳೆ ನೀವು ಉದ್ಯೋಗಿಗಳನ್ನು ಹೈರ್ ಮಾಡಬೇಕು ಎಂದು ಕೊಂಡರೇ ನಿಮಗೂ ಕೂಡ ಇದೇ ವೆಬ್ಸೈಟ್ ನಲ್ಲಿ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿದೆ.