ಸೋನು ಸೂದ್ ರವರ ಹುಟ್ಟುಹಬ್ಬದ ಪ್ರಯುಕ್ತ, ಅವರ ಸ್ಪೂರ್ತಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ತಿಳಿಯಿರಿ.

ಸೋನು ಸೂದ್ ರವರ ಹುಟ್ಟುಹಬ್ಬದ ಪ್ರಯುಕ್ತ, ಅವರ ಸ್ಪೂರ್ತಿ ಹಾಗೂ ಆಸಕ್ತಿದಾಯಕ ವಿಷಯಗಳನ್ನು ತಿಳಿಯಿರಿ.

ನಮಸ್ಕಾರ ಸ್ನೇಹಿತರೇ, ಇದೀಗ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡುವ ಮೂಲಕ ಹಲವಾರು ಸಿನಿಮಾಗಳಲ್ಲಿ ನಟಿಸಿ ಉತ್ತಮ ಹೆಸರು ಗಳಿಸಿ, ನಿಜ ಜೀವನದಲ್ಲಿ ಹೀರೋ ಆಗಿ ದೇಶದ ಮನೆ ಮಾತಾಗಿರುವ ಸೋನು ಸೂದ್ ರವರಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಸೋನು ಸೂದ್ ರವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಇಂದು ಅವರು ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ಅಸಲಿಗೆ ಅವರಿಗೆ ಪ್ರೇರಣೆ ನೀಡಿದ್ದು ಯಾರು ಹಾಗೂ ಅವರ ಬಗ್ಗೆ ಕೆಲವೊಂದು ಕುತೂಹಲಕಾರಿ ಸಂಗತಿಗಳನ್ನು ತಿಳಿದು ಕೊಳ್ಳೋಣ.

ಸೋನು ಸೂದ್ ರವರು ಮೊದಲಿನಿಂದಲೂ ಹಲವಾರು ಸಾಮಾಜಿಕ ಕಳಕಳಿ ಮೆರೆಯುವಂತಹ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ, ದಕ್ಷಿಣ ಭಾರತದ ಚಿತ್ರರಂಗ ಸೇರಿದಂತೆ ಬಾಲಿವುಡ್ ನಲ್ಲಿ ಹಲವಾರು ಚಿತ್ರಗಳಲ್ಲಿ ನಟನೆ ಮಾಡಿರುವ ಸೋನು ಸೂದ್ ರವರು, ಮೊದಲಿಗೆ ಚಿಕ್ಕ ಪುಟ್ಟ ಸಮಾಜಸೇವಾ ಕಾರ್ಯಗಳ ಮೂಲಕ ಆರಂಭಮಾಡಿ 2016 ರಲ್ಲಿ ತನ್ನ ತಾಯಿ ಸರೋಜ್ ಸೂದ್ ರವರ ಹೆಸರಿನಲ್ಲಿ ಒಂದು ಸಂಸ್ಥೆಯನ್ನು ಆರಂಭಿಸಿ, ಆಸಿಡ್ ಸಂತ್ರಸ್ತರಿಗೆ ಸಹಾಯ ಮಾಡಲು ಆರಂಭಿಸಿದರು, ತದ ನಂತರ ಕಳೆದ ವರ್ಷ ಅಂಗವಿಕಲ ತಂಡಗಳಿಗೆ ಬ್ಯಾಂಕಾಕ್ ತೆರಳಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಲು ಹಣದ ಕೊರತೆ ಇದೆ ಎಂದು ತಿಳಿದಾಗ ವಿದ್ಯಾರ್ಥಿಗಳ ಸಂಪೂರ್ಣ ಪ್ರಯಾಣದ ದರ ಹಾಗೂ ಅಲ್ಲಿನ ಖರ್ಚುಗಳನ್ನು ತಾವೇ ವಹಿಸಿಕೊಂಡು ಎಲ್ಲರ ಮನಗೆದ್ದಿದ್ದರು.

ಇದಾದ ಬಳಿಕ ಇದೇ ರೀತಿಯ ಸಾಮಾಜಿಕ ಕಳಕಳಿ ಮೆರೆಯುವಂತಹ ಕಾರ್ಯಗಳಲ್ಲಿ ನಿರತವಾಗಿದ್ದ ಸೋನು ಸೂದ್ ರವರು ಒಮ್ಮೆಲೆ ದೇಶ ಲಾಕ್ಡೌನ್ ‌ಆದ ಬಳಿಕ ಲಕ್ಷಾಂತರ ವಲಸೆ ಕಾರ್ಮಿಕರನ್ನು ತಮ್ಮ ತಮ್ಮ ಮನೆಗಳಿಗೆ ಸೇರಿಸಿದ್ದಾರೆ. ಬಸ್, ರೈಲು, ವಿಮಾನ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಿ, ಮನೆ ತಲುಪಿಸುವುದರ ಜೊತೆಗೆ ಅದೇ ಸಮಯದಲ್ಲಿ ಲಕ್ಷಾಂತರ ಜನರಿಗೆ ಆಹಾರ ಕೂಡ ತಲುಪಿಸಿದ್ದಾರೆ. ಇದಕ್ಕೆಲ್ಲ ನಿಮಗೆ ಸ್ಫೂರ್ತಿ ಯಾರು ಎಂದು ಕೇಳಿದ ತಕ್ಷಣ ಸೋನು ಸೂದ್ ರವರು ಭಾವುಕರಾಗಿ ತಮ್ಮ ಪೋಷಕರನ್ನು ನೆನೆದು ಇಂದು ಅವರು ನನ್ನ ಬಳಿ ಇಲ್ಲ. ನನ್ನ ತಂದೆ, ತಾಯಿಯೇ ನನಗೆ ಸ್ಪೂರ್ತಿ. ಅದೇ ಕಾರಣಕ್ಕಾಗಿ ನಾನು ಯಾವುದಾದರೂ ಕಾರ್ಯ ಮಾಡುವ ಮುನ್ನ ಅವರ ಹೆಸರಿನಲ್ಲಿ ಕೆಲಸ ಆರಂಭಿಸುತ್ತೇನೆ.

ಈ ಪ್ರತಿಯೊಂದು ಗುಣಗಳು ನನಗೆ ತಿಳಿಸಿ ಕೊಟ್ಟದ್ದು‌ ನನ್ನ ತಂದೆ ಹಾಗೂ ತಾಯಿ ರವರ ಮೌಲ್ಯಗಳ ಮಾತುಗಳು ಎಂದು ಹೇಳಿದರು. ನನ್ನ ತಾಯಿ ಮತ್ತು ತಂದೆ ನನ್ನ ಜೀವನದ ಪ್ರಮುಖ ಸ್ಪೂರ್ತಿದಾಯಕ ಸ್ತಂಭಗಳು. ನೀವು ಯಾರಿಗಾದರೂ ಸಹಾಯ ಮಾಡಲು ಸಾಧ್ಯವಾದರೇ ಮಾತ್ರ ನೀವು ಯಶಸ್ವಿಯಾಗುತ್ತೀರಿ ಎಂದು ಅವರು ನನಗೆ ಕಲಿಸಿದರು ಎಂದು ಸೋನು ಸೂದ್ ರವರು ಹೇಳಿದ್ದಾರೆ. ವಲಸೆಗಾರನಾಗಿ, 1998 ರಲ್ಲಿ ಮುಂಬೈಗೆ ಕೇವಲ 5,500 ರೂ.ಗಳನ್ನು ತನ್ನ ಜೇಬಿನಲ್ಲಿಟ್ಟುಕೊಂಡು ಸಿನಿಮಾದಲ್ಲಿ ನಟಿಸಲು ಬಂದಿದ್ದೆ, ಆ ದಿನಗಳಲ್ಲಿ ಅನುಭವಿಸಿದ ಕಷ್ಟಗಳು ನನಗೆ ತಿಳಿದಿವೆ, ನಾವು ಒಬ್ಬ ವಲಸಿಗ. ಅದೇ ಕಾರಣಕ್ಕಾಗಿ ಇಂದು ವಲಸೆ ಕಾರ್ಮಿಕರನ್ನು ಮನೆಗೆ ತಲುಪಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೇ ರೀತಿಯ ಹಲವಾರು ಮಾತುಗಳನ್ನು ಕಪಿಲ್ ಶರ್ಮ ರವರ ಶೋ ನಲ್ಲಿ ಹಂಚಿಕೊಂಡಿದ್ದು, ಇದೇ ಶನಿವಾರ ಶೋ ಪ್ರಸಾರವಾಗಲಿದೆ. ಇನ್ನು ಹೆಚ್ಚಿನ ಮಾಹಿತಿ ತಿಳಿಯಲು ನಾವು ಅಲ್ಲಿಯವರೆಗೂ ಕಾಯಬೇಕಾಗುತ್ತದೆ.