ಬಯಲಾಯಿತು ಪ್ರತಿಷ್ಠಿತ ಸರ್ವೆ ! ವಿಪಕ್ಷಗಳಿಗೆ ಬಿಗ್ ಶಾಕ್ ! ಮತ್ತೊಮ್ಮೆ ಭರ್ಜರಿ ಜಯ ಸಾಧಿಸಿದ ಮೋದಿ !ನಡೆದದ್ದೇನು ಗೊತ್ತಾ??

ಬಯಲಾಯಿತು ಪ್ರತಿಷ್ಠಿತ ಸರ್ವೆ ! ವಿಪಕ್ಷಗಳಿಗೆ ಬಿಗ್ ಶಾಕ್ ! ಮತ್ತೊಮ್ಮೆ ಭರ್ಜರಿ ಜಯ ಸಾಧಿಸಿದ ಮೋದಿ !ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ವಿಶ್ವದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ರಾಷ್ಟ್ರವಾಗಿರುವ ಭಾರತ ದೇಶದಲ್ಲಿ ಇತ್ತೀಚೆಗೆ ಕೋರೋನ ಸಂಖ್ಯೆ ಹೆಚ್ಚಾಗಿದ್ದರೂ ಕೂಡ ಇತರ ದೇಶಗಳ ಆಧುನಿಕತೆ ಹಾಗೂ ಅಲ್ಲಿನ ಜನಸಂಖ್ಯೆಗೆ ಹೋಲಿಸಿದರೆ ಭಾರತವು ಗಣನೀಯ ಪ್ರಮಾಣದಲ್ಲಿ ಸಾಧನೆ ಮಾಡಿರುವುದು ಸುಳ್ಳಲ್ಲ. ಅದೇ ರೀತಿ ಗುಣಮುಖರಾಗುತ್ತಿರುವ ಸಂಖ್ಯೆಯು ಕೂಡ ದಿನೇ ದಿನೇ ಹೆಚ್ಚುತ್ತಿದ್ದು ತುಸು ನೆಮ್ಮದಿ ತರಿಸಿದೆ‌. ಇದೇ ಸಮಯದಲ್ಲಿ ವಿಶ್ವದ ಪ್ರತಿಷ್ಠಿತ ಎಡಲ್ ಮನ್ ಟ್ರಸ್ಟ್ ಬಾರೋಮೀಟರ್ ಎಂಬ ಸಂಸ್ಥೆಯು ವಿಶ್ವದ ಬಹುತೇಕ ದೇಶಗಳ ಜನರ ಅಭಿಪ್ರಾಯವನ್ನು ಸಂಗ್ರಹಣೆ ಮಾಡಿ ನಿಮ್ಮಲ್ಲಿನ ಸರ್ಕಾರದ ಮೇಲೆ ನಿಮಗೆ ಯಾವ ರೀತಿಯ ಭರವಸೆ ಇದೆ ಎಂಬುದರ ಕುರಿತು ಸಮೀಕ್ಷೆ ನಡೆಸಿತ್ತು.

ಒಂದೆಡೆ ವಿರೋಧ ಪಕ್ಷಗಳು ದೇಶದಲ್ಲಿ ನರೇಂದ್ರ ಮೋದಿ ರವರ ಆರ್ಥಿಕತೆ ನಿಯಮಗಳು ಹಾಗೂ ಕೋರೋನ ನಿಯಂತ್ರಣ ಸರಿ ಇಲ್ಲ ಜನರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ, ಮೋದಿ ರವರ ವರ್ಚಸ್ಸು ತಗ್ಗಿದೆ ಎಂದೆಲ್ಲಾ ವಾದ ಮಂಡಿಸುತ್ತಿರುವ ಸಂದರ್ಭದಲ್ಲಿ ಖಾಸಗಿ ಸಂಸ್ಥೆಯಾಗಿರುವ ಎದೆಲ್ಮನ್ ಟ್ರಸ್ಟ್ ಬಾರೋಮೀಟರ್ ಸಂಸ್ಥೆಯು ವಿಶ್ವದ ಇತರ ದೇಶಗಳು ಸೇರಿದಂತೆ ಭಾರತದಲ್ಲಿನ ನಿರ್ದಿಷ್ಟ ಜನ ಸಂಖ್ಯೆಯ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಇದೀಗ ಫಲಿತಾಂಶ ಘೋಷಣೆ ಮಾಡಿದೆ. ಕಳೆದ ಜನವರಿ ಯಲ್ಲಿ ಇದೇ ರೀತಿಯ ಸಮೀಕ್ಷೆಯಲ್ಲಿ ಶೇಕಡಾ 80 ರಸ್ತು ಜನ ಮೋದಿ ರವರ ಮೇಲೆ ನಂಬಿಕೆ ಇಟ್ಟಿದ್ದರು, ಈ ಬಾರಿ ಇದು ಕಡಿಮೆಯಾಗಲಿದೆ ಎಂಬ ಮಾತುಗಳು ಕೇಳಿ ಬಂದಿದ್ದವು ಹಾಗೂ ಕೋರೋನ ಪರಿಸ್ಥಿತಿ ನಿಯಂತ್ರಣ ಮಾಡಲು ಲಕ್ಷಾಂತರ ಕೋಟಿಗಳ ಅನುದಾನ ಪ್ಯಾಕೇಜ್ ಘೋಷಣೆ ಮಾಡಿ ಆರ್ಥಿಕತೆಯನ್ನು ಮೇಲಕ್ಕೆ ಎತ್ತುವ ಮೂಲಕ ಜಪಾನ್ ಹಾಗೂ ಯುಎಸ್ ಸರ್ಕಾರಗಳು ಜನರ ಗೆದ್ದಿರುತ್ತವೆ ಎಂದು ಅಂದಾಜು ಮಾಡಲಾಗಿತ್ತು.

ಆದರೆ ಜಪಾನ್ ಹಾಗೂ ಯುಎಸ್ ಸರ್ಕಾರಗಳನ್ನು ಭಾರತ ಸರ್ಕಾರ ಹಿಂದಿಕ್ಕಿದೆ, ಒಂದೆಡೆ ವಿರೋಧ ಪಕ್ಷಗಳ ಲೆಕ್ಕಾಚಾರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ತಜ್ಞರ ಲೆಕ್ಕಾಚಾರಗಳು ಉಲ್ಟಾ ಆಗಿದ್ದು, ನರೇಂದ್ರ ಮೋದಿ ರವರ ಸರ್ಕಾರ ಕಳೆದ ಬಾರಿಗಿಂತ 7 % ಹೆಚ್ಚು ಜನರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಸಮೀಕ್ಷೆಯಲ್ಲಿ ಪಾಲ್ಗೊಂಡ ಶೇಕಡಾ 87 ರಷ್ಟು ಜನ ಮೋದಿ ಸರ್ಕಾರದ ಮೇಲೆ ಭರವಸೆ ಇಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಮೂಲಕ ಭಾರತ ಸರ್ಕಾರ ಅತಿ ಹೆಚ್ಚು ಭರವಸೆ ಮೂಡಿಸಿರುವ ಸರ್ಕಾರಗಳಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಇನ್ನುಳಿದಂತೆ ಚೀನಾ ಶೇಕಡಾ 90 ರಷ್ಟು ಜನರಲ್ಲಿ ಭರವಸೆ ಮೂಡಿಸಿದೆ ಎಂಬುದು ತಿಳಿದುಬಂದಿದೆ. ಯುಎಸ್ ದೇಶದಲ್ಲಿ ಶೇಕಡಾ 48 ರಷ್ಟು ಜನರು ಮಾತ್ರ ಭರವಸೆ ಇಟ್ಟಿದ್ದಾರೆ ಎನ್ನಲಾಗಿದೆ. ಈ ಫಲಿತಾಂಶ ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಷ್ಯಾ ದೇಶಗಳು ಮತ್ತೊಮ್ಮೆ ವೇಗವಾಗಿ ಬೆಳವಣಿಗೆಯಾಗುತ್ತಿವೆ ಎಂಬುದನ್ನು ತೋರಿಸಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಯಾಕೆಂದರೆ ಜನರ ಭರವಸೆಯೇ ಅಭಿವೃದ್ಧಿಯ ಸಂಕೇತ ಎನ್ನುತ್ತಾರೆ ತಜ್ಞರು. ನಿಮಗೂ ನಮ್ಮಲ್ಲಿನ ಸರ್ಕಾರದ ಮೇಲೆ ಎಷ್ಟು ಭರವಸೆ ಇದೆ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ. (ಒಟ್ಟಾರೆಯಾಗಿ 1200 ಪ್ರತಿ ದೇಶದಿಂದ ಅಭಿಪ್ರಾಯ ಮಂಡಿಸಿದ್ದಾರೆ.)