ವಿಶೇಷ ನಾಗಪಂಚಮಿಯ ದಿನ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು ಅಚ್ಚರಿಯ ಘಟನೆ ! ನಡೆದದ್ದೇನು ಗೊತ್ತಾ??

ವಿಶೇಷ ನಾಗಪಂಚಮಿಯ ದಿನ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆಯಿತು ಅಚ್ಚರಿಯ ಘಟನೆ ! ನಡೆದದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪ್ರತಿ ವರ್ಷದಂತೆ ಶ್ರಾವಣ ತಿಂಗಳಿನ ಐದನೇ ದಿನದಂದು ನಾಗರ ಪಂಚಮಿ ಹಬ್ಬ ಬಂದಿತ್ತು. ಆದರೆ ಈ ಬಾರಿ ನಾಗರ ಪಂಚಮಿ ಹಬ್ಬವು ಬಹಳ ವಿಶೇಷ ದಿನದಂದು ಆಗಮಿಸಿತ್ತು, ನಿಮಗೆಲ್ಲರಿಗೂ ತಿಳಿದಿರುವಂತೆ ಶ್ರಾವಣ ತಿಂಗಳಿನ ಶನಿವಾರದ ದಿನಗಳು ಬಹಳ ಪ್ರಾಮುಖ್ಯತೆಯನ್ನು ಪಡೆದು ಕೊಂಡಿವೆ. ಈ ಬಾರಿ ನಾಗರ ಪಂಚಮಿಯ ಹಬ್ಬ ಕೂಡ ಶ್ರಾವಣ ಶನಿವಾರದಂದು ಬಂದಿರುವ ಕಾರಣ ಬಹಳ ವಿಶೇಷ ಎಂದು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪರಿಗಣಿಸಲಾಗಿತ್ತು.

ಒಂದು ವೇಳೆ ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಮುಗಿದು ಹೋಗಿದ್ದರೆ ಕರ್ನಾಟಕದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ನಾಗರ ಪಂಚಮಿಯ ದಿನ ಲಕ್ಷಾಂತರ ಜನ ಭೇಟಿ ನೀಡಿ, ವಿಶೇಷವಾದ ಪೂಜೆ ಸಲ್ಲಿಸಿ ಸುಬ್ರಹ್ಮಣ್ಯ ಸ್ವಾಮಿಯ ಆಶೀರ್ವಾದ ಪಡೆದು ಕೊಂಡು ವಾಪಸಾಗುತ್ತಿದ್ದರು. ಪುಣ್ಯಕ್ಷೇತ್ರ ಶ್ರೀ ಕುಕ್ಕೆ ಯಲ್ಲಿರುವ ನಾಗ ದೇವತೆಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿತ್ತು, ಆದರೆ ಕೊರೋನಾ ಕಾರಣದಿಂದಾಗಿ ಈ ಬಾರಿ ಹೆಚ್ಚು ಭಕ್ತರಿಗೆ ದೇವಾಲಯಕ್ಕೆ ಹೋಗಲು ಅನುಮತಿ ಇಲ್ಲದ ಕಾರಣ ಹಲವಾರು ಭಕ್ತರು ದೇವಸ್ಥಾನದಿಂದ ಹೊರಗಡೆ ನಿಂತುಕೊಂಡು ನಮಸ್ಕರಿಸಿ ವಾಪಸಾಗಿದ್ದಾರೆ. ಇನ್ನು ಇದೇ ಸಮಯದಲ್ಲಿ ನಾಗರ ಪಂಚಮಿಯ ವಿಶೇಷ ದಿನದಂದು ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಮೂಲ ದೇವರಿಗೆ ಪಂಚಾಮೃತ ಅಭಿಷೇಕ ನಡೆಸುವಾಗ ಅಚ್ಚರಿಯೊಂದು ನಡೆದಿದೆ.

ಸಾಮಾನ್ಯವಾಗಿ ದೇವಾಲಯದ ಸುತ್ತ ನಾಗರ ಹಾವುಗಳು ಕಂಡು ಬರುತ್ತವೆ, ಆದರೆ ನಾಗರ ಪಂಚಮಿಯ ವಿಶೇಷ ದಿನದಂದು ಮೂಲ ದೇವರಿಗೆ ಪಂಚಾಮೃತ ಅಭಿಷೇಕ ನಡೆಸುವಾಗ ಗರ್ಭಗುಡಿಯ ಹುತ್ತದಿಂದ ನಾಗರ ಹಾವೊಂದು ಹೊರಬಂದು ಭಕ್ತರಿಗೆ ನಾಗ ರಾಜ ಪ್ರತ್ಯಕ್ಷ ನೀಡಿದ್ದಾನೆ. ಪ್ರತ್ಯಕ್ಷಗೊಂಡ ನಾಗರಹಾವು ಕ್ಷೇತ್ರದ ಒಳಾಂಗಣ ಮತ್ತು ಹೊರಾಂಗಣ ಸುತ್ತಾಡಿ ದೇವಾಲಯಕ್ಕೆ ಸಂಪೂರ್ಣ ಪ್ರದಕ್ಷಣೆ ಹಾಕಿದೆ. ತದ ನಂತರ ದೇವಾಲಯದ ಅರ್ಚಕರು ನಾಗರಾಜನಿಗೆ ಹಾಲನ್ನು ನೀಡಿದ್ದಾರೆ. ದೇವಾಲಯದ ಪ್ರದಕ್ಷಿಣೆ ಮುಗಿದ ಬಳಿಕ ಹಾಲನ್ನು ಕುಡಿದು ಪಕ್ಕದಲ್ಲಿನ ಗಿಡಗಳ ಪೊದೆಗೆ ಹಾವು ಹೋಗಿ ಸೇರಿಕೊಂಡಿದ್ದು ವಿಶೇಷ ನಾಗರ ಪಂಚಮಿಯ ದಿನದಂದು ಗರ್ಭಗುಡಿಯಿಂದ ನಾಗರಾಜ ಹೊರಬಂದಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.