ತಾಜ್ ಮಹಲ್ vs ತೇಜೋ ಮಹಾಲಯ ! ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದ ಕಪಿಲ್ ಮಿಶ್ರ ! ನಡೆದದ್ದೇನು ಗೊತ್ತಾ?

ತಾಜ್ ಮಹಲ್ vs ತೇಜೋ ಮಹಾಲಯ ! ಇಡೀ ದೇಶದಲ್ಲಿ ತಲ್ಲಣ ಸೃಷ್ಟಿಸಿದ ಕಪಿಲ್ ಮಿಶ್ರ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಈಗಾಗಲೇ ಬಹುಶಹ ನಿಮಗೆ ತಿಳಿದಿರಬಹುದು, ಹಲವಾರು ವರ್ಷಗಳಿಂದಲೂ ವಿಶ್ವದ ಏಳು ಅದ್ಭುತಗಳಲ್ಲಿ ಒಂದಾಗಿರುವ ತಾಜ್ ಮಹಲ್ ಅಸಲಿಗೆ ತಾಜ್ ಮಹಲ್ ಅಲ್ಲವೇ ಅಲ್ಲ, ಅದನ್ನು ಷಹಜಹಾನ್ ಕಟ್ಟಿಸಿಲ್ಲ. ಬದಲಾಗಿ ಅದು ಒಂದು ಶಿವನ ದೇವಾಲಯವಾಗಿದ್ದು, ಅಗ್ರೇಶ್ವರ ಶಿವನ ತೇಜೋ ಮಹಾಲಯ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿವೆ.

ಖ್ಯಾತ ಇತಿಹಾಸ ತಜ್ಞ ರಾಗಿರುವ ಲೇಖಕ ಹಿರಿಯ ಚಿಂತಕ ಪ್ರೊಫೆಸರ್ ಪುರುಷೋತ್ತಮ್ ನಾಗರಾಜ್ ಅವರು ಬರೆದಿರುವ ಸತ್ಯಾನ್ವೇಷಣೆಯ ಪುಸ್ತಕದಲ್ಲಿಯೂ ಕೂಡ ಹಲವಾರು ವಿಚಾರಗಳನ್ನು ಇವರು ಬರೆದು ಕೊಂಡಿದ್ದು, ಬರೋಬರಿ ನೂರಕ್ಕೂ ಹೆಚ್ಚು ಕಾರಣಗಳನ್ನು ನೀಡುತ್ತಾ ಪ್ರತಿಯೊಂದು ಕಾರಣಗಳಿಗೂ ಚಿತ್ರಗಳ ಸಾಕ್ಷಿ ಸಮೇತ ತಾಜ್ ಮಹಲ್‌ ಅಸಲಿಗೆ ತಾಜ್ ಮಹಲ್ ಅಲ್ಲವೇ ಅಲ್ಲ ಬದಲಾಗಿ ಅದು ಶಿವನ ದೇವಾಲಯ ಎಂದು ಬರೆದಿದ್ದಾರೆ. ಈ ಕುರಿತು ಹಲವಾರು ವರ್ಷಗಳಿಂದ ಹಲವಾರು ಮಾತುಗಳು, ಹಲವಾರು ದಾಖಲೆಗಳ ಚಿತ್ರಗಳೊಂದಿಗೆ ಹಲವಾರು ಜನರು ಈ ಕುರಿತು ಧ್ವನಿಯೆತ್ತಿ ತಮ್ಮದೇ ಆದ ವಾದಗಳನ್ನು ಮಂಡಿಸುತ್ತಾ ಈ ಕುರಿತು ತನಿಖೆ ನಡೆದು ಅಸಲಿ ಸತ್ಯವನ್ನು ಹೊರ ತೆಗೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.

ಆದರೆ ಈ ಎಲ್ಲಾ ವಾದ-ವಿವಾದಗಳು ಇಷ್ಟು ದಿವಸ ಕೇವಲ ಸಾಮಾನ್ಯ ಜನರಿಗೆ, ಸಾಮಾಜಿಕ ಜಾಲತಾಣಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಇದೀಗ‌ ಕಪಿಲ್ ಮಿಶ್ರಾರವರು ಈ ಕುರಿತು ಮಾತನಾಡುವ ಮೂಲಕ ದೇಶದ ಎಲ್ಲಡೆ ತಲ್ಲಣ ಸೃಷ್ಟಿಸುವಂತಹ ಟ್ವೀಟ್ ಮಾಡಿದ್ದಾರೆ. ಹಲವಾರು ವರ್ಷಗಳಿಂದಲೂ ಕೇಳಿ ಬರುತ್ತಿರುವ ಮಾತಿಗೆ ಕೈಜೋಡಿಸಿರುವ ಕಪಿಲ್ ಮಿಶ್ರಾ ರವರು ತಾಜ್ ಮಹಲ್ ಎಂಬುವುದು ಒಂದು ಹಿಂದೂ ದೇವಾಲಯ, ವೈಜ್ಞಾನಿಕ ಪುರಾವೆಗಳು ಕೂಡ ತಾಜ್ ಮಹಲ್ ಎಂಬುದು ತೇಜೋ ಮಹಾಲಯ ಎಂದು ಸಾಬೀತು ಪಡಿಸುತ್ತವೆ. 300 ವರ್ಷಗಳ ಕಾಲ ತಾಜ್ ಮಹಲ್ ಅನ್ನು ಶಹಜಹಾನ್ ನಿರ್ಮಿಸಿದ್ದಾನೆ ಎಂದು ನಂಬಿಸುವ ಮೂಲಕ ಜಗತ್ತನ್ನು ಮೂರ್ಖರನ್ನಾಗಿ ಮಾಡಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ ಇದೀಗ ದೇಶದೆಲ್ಲೆಡೆ ಭಾರತವನ್ನು ಸೃಷ್ಟಿಸಿದ್ದು, ಮತ್ತೊಮ್ಮೆ ತಾಜ್ ಮಹಲ್ ಎಂಬುವುದು ತೇಜೋ ಮಹಾಲಯ ಎಂಬ ಭಾರಿ ಸದ್ದು ಕೇಳಿ ಬಂದಿದೆ.