ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ! ಕಜೆರವರ ಜೊತೆ ಕೈಜೋಡಿಸಿ ಮತ್ತೊಂದು ಮಹತ್ವದ ನಿರ್ಧಾರ ! ಏನು ಗೊತ್ತಾ?

ರಾಜ್ಯದ ಜನತೆಗೆ ಭರ್ಜರಿ ಗುಡ್ ನ್ಯೂಸ್ ! ಕಜೆರವರ ಜೊತೆ ಕೈಜೋಡಿಸಿ ಮತ್ತೊಂದು ಮಹತ್ವದ ನಿರ್ಧಾರ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಕಳೆದ ಕೆಲವು ದಿನಗಳಿಗೆ ಹೋಲಿಸಿದರೇ ಕರ್ನಾಟಕದಲ್ಲಿ ಸೋಂಕಿತರ ಪ್ರಮಾಣ ದಿನೇದಿನೇ ಗಣನೀಯವಾಗಿ ಹೆಚ್ಚುತ್ತಿದೆ. ಅಂಕಿ ಅಂಶಗಳನ್ನು ಗಮನಿಸಿದರೇ ಕರ್ನಾಟಕದಲ್ಲಿ ಇನ್ನು ಸೋಂಕಿತರ ಪ್ರಮಾಣ ಗಣನೀಯವಾಗಿ ಏರಿಕೆಯಾಗುವ ಸಂದರ್ಭವಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಕರ್ನಾಟಕದ ಜನರು ಗಿರಿಧರ್ ಕಜೆರವರ ಮಾತ್ರೆಗಳ ಫಲಿತಾಂಶ ನೋಡಿ ನಿಟ್ಟುಸಿರು ಬಿಟ್ಟಿದ್ದರು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮೂಲಕ ನಮ್ಮ ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಸಂಪೂರ್ಣವಾಗಿ ಗಿಡ ಮೂಲಿಕೆಗಳಿಂದ ತಯಾರು ಮಾಡಿ, ಮೊದಲನೇ ಹಂತದ ಕ್ಲಿನಿಕಲ್ ಪ್ರಯೋಗದಲ್ಲಿ ವಿವಿಧ ವಯಸ್ಸಿನ ಸೋಂಕಿತರ ಮೇಲೆ ಹಾಗೂ ಈಗಾಗಲೇ ಬೇರೆ ಸೋಂಕುಗಳಿಂದ ಬಳಲುತ್ತಿರುವ ಹತ್ತು ಜನರ ಮೇಲೆ ಪ್ರಯೋಗ ಮಾಡಲಾಗಿತ್ತು. ವೈದ್ಯ ಲೋಕಕ್ಕೆ ಅಚ್ಚರಿಯೆಂಬಂತೆ ಕೇವಲ ಎರಡು ದಿನಗಳಲ್ಲಿ ಹತ್ತು ಜನರ ಆರೋಗ್ಯದಲ್ಲಿ ಗಣನೀಯ ಏರಿಕೆ ಕಂಡು ಬಂದಿತ್ತು. ನಂತರ ಬೆರಳೆಣಿಕೆಯ ದಿನಗಳಲ್ಲಿ 10 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು.

ಈ ಫಲಿತಾಂಶ ನೋಡಿದ ರಾಜ್ಯದ ಜನರಲ್ಲಿ ಗಿರಿಧರ್ ಕಜೆರವರ ಮೇಲಿದ್ದ ನಂಬಿಕೆ ಬಹಳ ಹೆಚ್ಚಾಗಿತ್ತು, ಇಷ್ಟೇ ಅಲ್ಲದೇ ಸೋಂಕು ಬಂದ ಮೇಲೆ ಗುಣಮುಖ ರನ್ನಾಗಿ ಮಾಡುವ ಬದಲು ಮೊದಲಿಗೆ ಪ್ರಾಥಮಿಕ ಸಂಪರ್ಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವ ಜನರಿಗೂ ಕೂಡ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮಾತ್ರೆಗಳನ್ನು ನೀಡಿದರೇ, ಸೋಂಕೇ ಬರದಂತೆ ತಡೆಯಬಹುದು ಎಂದು ಗಿರಿಧರ್ ಕಜೆರವರು ಹೇಳಿದ್ದರು‌. ಇದಾದ ಬಳಿಕ ಕೆಲವು ದಿನಗಳ ಕಾಲ ಗಿರಿಧರ್ ಕಜೆರವರ ಔಷಧೀಯ ಕುರಿತು ಮಾಹಿತಿ ಹೊರ ಬರದ ಕಾರಣ ಎಲ್ಲರೂ ಆಯುರ್ವೇದ ಪದ್ಧತಿಯನ್ನು ತಿರಸ್ಕಾರ ಮಾಡಲಾಗುತ್ತಿದೆ ಹಾಗೂ ದೊಡ್ಡ ದೊಡ್ಡ ಫಾರ್ಮಸಿ ಕಂಪನಿಗಳ ಲಾಭಿಗೆ ರಾಜ್ಯ ಸರ್ಕಾರ ಮಣಿಯುತ್ತದೆ ಆರೋಪ ಮಾಡಿದ್ದರು. ಆದರೆ ಮೊನ್ನೆಯಷ್ಟೇ ದಿಗ್ವಿಜಯ ನ್ಯೂಸ್ ನಲ್ಲಿ ಮಾತನಾಡಿದ ಗಿರಿಧರ್ ಕಜೆ ರವರು ಲೈಸನ್ಸ್ ಸೇರಿದಂತೆ ಮಾತ್ರೆಗಳನ್ನು ನೀಡಲು ಅಗತ್ಯವಿರುವ ಎಲ್ಲಾ ಅನುಮತಿ ಸಿಕ್ಕಿದ್ದು ಗಣನೀಯ ಪ್ರಮಾಣದಲ್ಲಿ ಉತ್ಪಾದನೆ ಮಾಡುತ್ತಿದ್ದೇವೆ. ಇನ್ನು ಕೆಲವೇ ದಿನಗಳಲ್ಲಿ ಮಾತ್ರೆಗಳನ್ನು ತಲುಪಿಸಲಾಗುತ್ತದೆ ಎಂದು ಹೇಳುವುದರ ಮೂಲಕ ಭರ್ಜರಿ ಸಿಹಿಸುದ್ದಿ ನೀಡಿದ್ದರು‌. ಅದರ ಜೊತೆಗೆ ಇದೀಗ ಮತ್ತೊಂದು ಸಿಹಿ ಸುದ್ದಿ ಹೊರ ಬಿದ್ದಿದ್ದು, ಸನ್ಮಾನ್ಯ ಈಶ್ವರಪ್ಪನವರು ಮಾತನಾಡಿ ಸರ್ಕಾರದ ಮಹತ್ವದ ಹೆಜ್ಜೆಯನ್ನು ಬಹಿರಂಗಪಡಿಸಿದ್ದಾರೆ.

ಹೌದು ಸ್ನೇಹಿತರೇ, ಇನ್ನು ಮುಂದೆ ರಾಜ್ಯದಲ್ಲಿ ರಾಜ್ಯದ ಜನರಿಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಸಂಪೂರ್ಣವಾಗಿ ಕೊರೊನ ಅನ್ನು ರಾಜ್ಯದಿಂದ ತೆಗೆದು ಹಾಕಲು ನಿರ್ಧಾರ ಮಾಡಲಾಗಿದ್ದು, ಪ್ರತಿಯೊಂದು ಮನೆಗಳಿಗೂ ಹುಡುಕಿಕೊಂಡು ಗಿರಿಧರ್ ರವರು ತಯಾರಿಸಿರುವ ರೋಗನಿರೋಧಕ ಕಿಟ್ ಗಳು ಮನೆ ಬಾಗಿಲಿಗೆ ಬರಲಿವೆ. ಕೇವಲ ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದಲ್ಲಿ, ಆಧಾರ್ ಕಾರ್ಡ್ ಅನ್ನು ನೋಡಿ, ವೇರಿಫೈ ಮಾಡಿ, ನಿಮ್ಮ ವಯಸ್ಸಿಗೆ ತಕ್ಕಂತೆ ಅಗತ್ಯವಾಗಿರುವ ರೋಗ ನಿರೋಧಕ ಶಕ್ತಿಯನ್ನು ಗಿಡ ಮೂಲಿಕೆಗಳಿಂದ ಹೆಚ್ಚು ಮಾಡುವಂತಹ ಕಿಟ್ ಗಳನ್ನು ನಿಮಗೆ ನೀಡಲಾಗುತ್ತದೆ. ಈ ಮೂಲಕ ರಾಜ್ಯದಲ್ಲಿ ಹರಡಿರುವ ಸೋಂಕನ್ನು ತಡೆಗಟ್ಟ ಬಹುದು ಎನ್ನಲಾಗಿದೆ. ಈ ಕಾರ್ಯಕ್ರಮ ಮೊದಲು ಶಿವಮೊಗ್ಗ ಜಿಲ್ಲೆಯಿಂದ ಆರಂಭವಾಗಲಿದ್ದು, ಗಿರಿಧರ್ ಕಜೆ ರವರೇ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೇವಲ ಶಿವಮೊಗ್ಗ ಜಿಲ್ಲೆಯೊಂದಕ್ಕೆ 4 ಲಕ್ಷಕ್ಕೆ ಕಿಟ್ ಗಳ ಅಗತ್ಯವಿದ್ದು ತಯಾರಿಕೆಯಲ್ಲಿ ತೊಡಗಿರುವುದಾಗಿ ತಿಳಿದು ಬಂದಿದೆ. ಆದರೆ ಇನ್ನು ನಮ್ಮಲ್ಲಿ ಮೂಡುತ್ತಿರುವ ಪ್ರಶ್ನೆ ಏನೆಂದರೆ ಕೇವಲ ಗಿರಿಧರ್ ಕಜೆ ರವರ ಕಂಪನಿಯ ಮೇಲೆ ಆಧಾರವಾಗಿರುವ ಬದಲು, ಅದೇ ಫಾರ್ಮುಲ ಅನ್ನು ಬಳಸಿಕೊಂಡು ಇನ್ನಿತರ ಆಯುರ್ವೇದಿಕ್ ಉತ್ಪಾದನಾ ಘಟಕಗಳಲ್ಲಿಯೂ ಕೂಡ ಈ ಕಿಟ್ ಗಳನ್ನು ತಯಾರು ಮಾಡಿದರೇ ಇಡೀ ಕರ್ನಾಟಕ ರಾಜ್ಯದ ಜನತೆಗೆ ಹಂಚಲು ಸಹಾಯವಾಗಲಿದೆ ಏನಂತೀರಾ.