ಬಿಗ್ ನ್ಯೂಸ್: ಭರ್ಜರಿ ಸಿಹಿ ಸುದ್ದಿ ನೀಡಿದ ಗಿರಿಧರ್ ಕಜೆ ! ರಾಮಬಾಣ ಎಷ್ಟು ದಿನದಲ್ಲಿ ಲಭ್ಯ ಗೊತ್ತಾ?

ಬಿಗ್ ನ್ಯೂಸ್: ಭರ್ಜರಿ ಸಿಹಿ ಸುದ್ದಿ ನೀಡಿದ ಗಿರಿಧರ್ ಕಜೆ ! ರಾಮಬಾಣ ಎಷ್ಟು ದಿನದಲ್ಲಿ ಲಭ್ಯ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕದ ಎಲ್ಲೆಡೆ ಕೋರೋನ ತಾಂಡವವಾಡುತ್ತಿರುವ ಸಂದರ್ಭದಲ್ಲಿ ಆಯುರ್ವೇದದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಕೋರೋನ ಸೋಂಕಿತರನ್ನು ಗುಣಮುಖರಾಗಿ ಮಾಡಬಹುದು ಎಂದು ಖ್ಯಾತ ಆಯುರ್ವೇದಿಕ್ ವೈದ್ಯ ಡಾಕ್ಟರ್ ಗಿರಿಧರ್ ಕಜೆ ರವರು ಹೇಳಿದ್ದರು. ಮೊದಲನೆ ಹಂತದಲ್ಲಿ ಡಾಕ್ಟರ್ ಗಿರಿಧರ್ ರವರ ಔಷಧಿಯನ್ನು ಪರೀಕ್ಷಿಸಲು 10 ಕೊರೊನಾ ಸೋಂಕಿತರ ಮೇಲೆ ಪ್ರಯೋಗ ನಡೆಸಲು ಅನುಮತಿ ನೀಡಲಾಗಿತ್ತು. ವೈದ್ಯಲೋಕಕ್ಕೇ ಅಚ್ಚರಿಯೆಂಬಂತೆ ಔಷಧಿ ನೀಡಿದ ಕೇವಲ ಎರಡು ದಿನಗಳಲ್ಲಿ ಸೋಂಕಿತರಲ್ಲಿ ಗಣನೀಯ ಪ್ರಮಾಣದಲ್ಲಿ ಚೇತರಿಕೆ ಕಂಡು ಬಂದಿತ್ತು. ವಯಸ್ಕರು ಹಾಗೂ ಇನ್ನಿತರ ಕಾಯಿಲೆಗಳಿಂದ ಬಳಲುತ್ತಿರುವವರು ಕೂಡ ಆಯುರ್ವೇದ ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು.

ಈ ಔಷಧಿಯನ್ನು ಸಂಪೂರ್ಣವಾಗಿ ಗಿಡ ಮೂಲಿಕೆಗಳಿಂದ ತಯಾರು ಮಾಡಿರುವ ಕಾರಣ ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ ಎಂದು ಗಿರಿಧರ್ ಕಜೆ ಅವರು ತಿಳಿಸಿದರು. ಇದು ಪ್ರತಿಯೊಬ್ಬರಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚು ಮಾಡುವ ಮೂಲಕ ಚೀನಾ ವೈರಸ್ ವಿರುದ್ಧ ಹೋರಾಡಲು ದೇಹಕ್ಕೆ ಅಗತ್ಯವಾಗಿರುವ ಪೂರಕ ಅಂಶಗಳನ್ನು ನೀಡಿ ಗುಣಮುಖ ರನ್ನಾಗಿ ಮಾಡುತ್ತದೆ ಎಂದು ವಿವರಣೆ ನೀಡಿದ್ದರು‌. ಅಷ್ಟೇ ಅಲ್ಲದೇ ಹಲವಾರು ವಿವಿಧ ಮನೆ ಮದ್ದುಗಳನ್ನು ಹೇಳಿ ರೋಗ ನಿರೋಧಕ ಶಕ್ತಿಯನ್ನು ಹೇಗೆ ಹೆಚ್ಚಿಸಿ ಕೊಳ್ಳಬೇಕು ಎಂಬುದನ್ನು ಕೂಡ ಸಂಪೂರ್ಣ ವಿವರಣೆಯೊಂದಿಗೆ ಹೇಳುವ ಮೂಲಕ ಜನರಲ್ಲಿ ಭರವಸೆ ಮೂಡಿಸಿದ್ದರು. ಸೋಂಕಿತರ ಪ್ರಾರ್ಥಮಿಕ ಸಂಪರ್ಕದಲ್ಲಿ ಇರುವವರೆಗೂ ಕೂಡ ಈ ಮಾತ್ರೆಗಳನ್ನು ನೀಡಬಹುದಾದ ಕಾರಣ ಕೊರೊನ ನಿವಾರಣೆ ಅಷ್ಟೇ ಅಲ್ಲಾ ಬರದಂತೆಯೇ ತಡೆಯಬಹುದು ಎಂದು ರಾಜ್ಯ ಸರ್ಕಾರದ ಮುಂದೆ ಪ್ರಸ್ತಾಪ ಇರಿಸಿದ್ದರು.

ಕರ್ನಾಟಕಕ್ಕೆ ಸಂಪೂರ್ಣವಾಗಿ ಅಗತ್ಯವಿರುವ ಮಾತ್ರೆಗಳನ್ನು ನಾನು ಉಚಿತವಾಗಿ ನೀಡುತ್ತೇನೆ ನನಗೆ ಇದರಿಂದ ಯಾವುದೇ ಹಣ ಬೇಡ, ನಾನು ಯಾವುದೇ ಲಾಭ ಗಳಿಸಲು ಆಸಕ್ತಿ ತೋರುವುದಿಲ್ಲ, ಅಷ್ಟೇ ಅಲ್ಲದೆ ಔಷಧೀಯ ಪೇಟೆಂಟ್ (ಹಕ್ಕು) ಅನ್ನು ನಾನು ಸರ್ಕಾರಕ್ಕೆ ಉಚಿತವಾಗಿ ನೀಡುತ್ತೇನೆ, ಸರ್ಕಾರವು ಇನ್ನಿತರ ದೊಡ್ಡ ದೊಡ್ಡ ಆಯುರ್ವೇದ ಮಾತ್ರೆಗಳನ್ನು ತಯಾರಿ ಮಾಡುವ ಕಂಪನಿಗಳ ಜೊತೆ ಮಾತುಕತೆ ನಡೆಸಿ ಕೂಡಲೇ ಇಡೀ ದೇಶದಲ್ಲಿ ಸರಬರಾಜು ಮಾಡಬಹುದಾಗಿದೆ, ನಾನು ಹಕ್ಕನ್ನು ಉಚಿತವಾಗಿ ಬಹಿರಂಗವಾಗಿ ನೀಡುತ್ತೇನೆ. ಇದರಿಂದ ನನಗೆ ಒಂದು ರೂಪಾಯಿ ಕೂಡ ಹಣ ಬೇಡ ಎಂದು ಸ್ಪಷ್ಟಪಡಿಸಿದ್ದರು. ಈ ಎಲ್ಲಾ ವಿದ್ಯಮಾನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಡಾಕ್ಟರ್ ಗಿರಿಧರ್ ಕಜೆ ಅವರ ಔಷಧಿ ಯಶಸ್ವಿಯಾದರೂ ಕೂಡ ದೊಡ್ಡ ದೊಡ್ಡ ಲಸಿಕೆಗಳ ಕಂಪನಿಯ ಲಾಬಿಯಿಂದಾಗಿ ಡಾಕ್ಟರ್ ಗಿರಿಧರ್ ಕಜೆ ರವರ ಔಷಧಿಗಳನ್ನು ಸೋಂಕಿತರಿಗೆ ನೀಡಲಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು .

ಒಂದು ವೇಳೆ ಡಾಕ್ಟರ್ ಗಿರಿಧರ ಕಜೆ ರವರು ಮಾತು ನೀಡಿದಂತೆ ಕೇವಲ 180 ರೂಪಾಯಿಗೆ ಔಷಧಿಗಳನ್ನು ನೀಡಿದ್ದಲ್ಲಿ ದೊಡ್ಡ ದೊಡ್ಡ ಪ್ರಯೋಗ ಗಳಿಗೆ ಕೋಟ್ಯಾಂತರ ರೂಪಾಯಿ ಹೂಡಿಕೆ ಮಾಡಿ ಲಸಿಕೆ ತಯಾರಿಸುವ ಕೆಲಸದಲ್ಲಿ ನಿರತವಾಗಿರುವ ಕಂಪನಿಗಳಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ಔಷಧೀಯ ಬಗ್ಗೆ ಯಾವ ನಾಯಕರು ಗಮನಹರಿಸುತ್ತಿಲ್ಲ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದೀಗ ಈ ಎಲ್ಲಾ ಆರೋಪಗಳ ಕುರಿತು ದಿಗ್ವಿಜಯ ನ್ಯೂಸ್ ಚಾನೆಲ್ ನಿಜವಾಗಲೂ ಲಾಬಿಗಳು ನಡೆಯುತ್ತಿದೆಯೇ ಎಂಬುದರ ಕುರಿತು ಕಾರ್ಯಕ್ರಮ ನಡೆಸುತ್ತಿದ್ದ ಸಂದರ್ಭದಲ್ಲಿ ನೇರವಾಗಿ ಗಿರಿಧರ್ ಕಜೆ ರವರನ್ನು ಲೈವ್ ಕಾರ್ಯಕ್ರಮದಲ್ಲಿ ಫೋನ್ನಲ್ಲಿ ಮಾತನಾಡಿಸಿದರು. ಈ ಎಲ್ಲಾ ಆರೋಪಗಳಿಗೆ ಪ್ರತಿಕ್ರಿಯೆ ನೀಡಿರುವ ಗಿರಿಧರ್ ಕಜೆ ರವರು ಈಗಾಗಲೇ ಸರ್ಕಾರದ ಕಡೆಯಿಂದ ನಮಗೆ ಅನುಮತಿ ಸಿಕ್ಕಿದೆ. ಆದಕಾರಣ ಔಷಧಿಯನ್ನು ನಾವು ತಯಾರಿ ಮಾಡುವ ಕೆಲಸದಲ್ಲಿ ನಿರತವಾಗಿದ್ದೇವೆ, ಸರ್ಕಾರಕ್ಕೆ 72 ಲಕ್ಷ ಮಾತ್ರೆಗಳನ್ನು ನೀಡುವುದಾಗಿ ಹೇಳಿದ್ದೇನೆ, ಆದ್ದರಿಂದ ನಾನು ಮಾತ್ರೆಗಳ ತಯಾರಿಕೆಯಲ್ಲಿ ತೊಡಗಿದ್ದೇನೆ. ಇನ್ನು ಕೇವಲ ಬೆರಳೆಣಿಕೆಯ ದಿನಗಳಲ್ಲಿ (5 to 6) ನಾನು ಸರ್ಕಾರಕ್ಕೆ ಉಚಿತವಾಗಿ ಮಾತ್ರೆಗಳನ್ನು ರವಾನೆ ಮಾಡುತ್ತೇನೆ. ಸರ್ಕಾರವು ಮಾತ್ರೆ ಗಳನ್ನು ತಯಾರಿಸಲು ಅಗತ್ಯವಿರುವ ಲೈಸನ್ಸ್ ಸೇರಿದಂತೆ ಅನುಮತಿಯನ್ನು ನೀಡಿದೆ ಎಂದು ಹೇಳಿಕೆ ನೀಡುವ ಮೂಲಕ ಎಲ್ಲಾ ಆರೋಪಗಳಿಗೆ ತೆರೆ ಎಳೆದಿದ್ದಾರೆ. ಮೇಲಿನ ವಿಡಿಯೋದಲ್ಲಿ ಹೆಡ್ ಲೈನ್ ಗಳು ಕೇವಲ ಪ್ರಶ್ನಾತೀತವಾಗಿವೆ ಹಾಗೂ ಗಿರಿಧರ್ ಕಜೆ ರವರ ಮಾತುಗಳು ಉತ್ತರ ನೀಡುತ್ತವೆ.