ಚೀನಾ ತಲುಪಿದ ಭಾರತೀಯರ ಅಭಿಯಾನ ! ಭಾರತೀಯರ ಒಗ್ಗಟ್ಟಿಗೆ ಮತ್ತೊಂದು ಗೆಲುವು ! ನಡೆದದ್ದೇನು ಗೊತ್ತಾ?

ಚೀನಾ ತಲುಪಿದ ಭಾರತೀಯರ ಅಭಿಯಾನ ! ಭಾರತೀಯರ ಒಗ್ಗಟ್ಟಿಗೆ ಮತ್ತೊಂದು ಗೆಲುವು ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ದೇಶದ ಎಲ್ಲೆಡೆ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಅಭಿಯಾನಗಳು ಆರಂಭವಾಗಿವೆ. ಇದೇ ಮೊದಲ ಬಾರಿಗೆ ಸೆಲೆಬ್ರೆಟಿಗಳು ಸೇರಿದಂತೆ ದಿಗ್ಗಜ ಕಂಪನಿಗಳು ಈ ರೀತಿಯ ಅಭಿಯಾನಕ್ಕೆ ಬೆಂಬಲ ಸೂಚಿಸಿ ಸೈನಿಕರ ಪರವಾಗಿ ನಾವಿದ್ದೇವೆ ಎಂದು ತೋರಿಸಿಕೊಟ್ಟಿದ್ದಾರೆ. ಇನ್ನು ಈ ಅಭಿಯಾನದಿಂದ ಕೆಲವರಿಗೆ ಬಾರಿ ನಿರಾಸೆಯಾಗಿತ್ತು. ಚೀನಾ ಮೇಲೆ ಅತಿಯಾದ ಪ್ರೀತಿಯನ್ನು ತೋರಿಸಿ, ಸಾಧ್ಯವೇ ಇಲ್ಲ, ಮತ್ತೊಮ್ಮೆ ಸೋಲುಕಾಣುತ್ತೀರಿ ಎಂದೆಲ್ಲಾ ಹೇಳಿ ಕಾಮೆಂಟ್ ಹಾಗೂ ಮೆಸೇಜ್ ಗಳ ಮೂಲಕ ತಿಳಿಸಿದ್ದರು.

ಆದರೆ ಇದೀಗ ಮತ್ತೊಮ್ಮೆ ಈ ಅಭಿಯಾನಕ್ಕೆ ಬಾರಿ ಗೆಲುವು ಸಿಕ್ಕಿದ್ದು, ಸಾಮಾನ್ಯ ಜನರಿಂದ ಆರಂಭವಾಗಿ ಇದೀಗ ಚೀನಾ ದೇಶದ ಕದ ತಟ್ಟಿದೆ. ಈ ಅಭಿಯಾನ ಚೀನಾ ದೇಶ ತಲುಪಿದೆ ಎಂದರೇ ಖಂಡಿತಾ ಇದು ಒಂದು ಮಹತ್ವದ ಹೆಜ್ಜೆಯಾಗಿದೆ. ಇದೀಗ ಇದರ ಕುರಿತು ಚೀನಾ ದೇಶದಿಂದ ಭಾರತದ ಚೀನಾ ರಾಯಬಾರಿಗೆ ವಿಶೇಷ ಸಂದೇಶ ಬಂದಿದ್ದು, ಬೇರೆ ವಿಧಿ ಇಲ್ಲದೇ ಚೀನಾ ರಾಯಬಾರಿ ಭಾರತದ ಬಳಿ ಹಾಗೂ ಭಾರತೀಯರ ಬಳಿ ಮನವಿ ಮಾಡಿದ್ದಾರೆ. ಭಾರತೀಯರ ಅಭಿಯಾನದಿಂದ ಏನು ಆಗುವುದಿಲ್ಲ ಎನ್ನುತ್ತಿದ್ದವರಿಗೆ ಅವರೇ ಮಾತುಗಳೇ ಉತ್ತರವಾಗಿವೆ.

ಹೌದು ಸ್ನೇಹಿತರೇ, ಮೊದಲು ಕೆಲವು ದಿನಗಳ ಹಿಂದೆ ನಡೆದ ಸೇನೆಯ ಹಿಂತೆಗೆತದ ಮಾತುಕತೆ ಬಗ್ಗೆ ಮಾತುಗಳನ್ನು ಆರಂಭಿಸಿದ ರಾಯಬಾರಿ ವೀಡಾಂಗ್ ರವರು, ಎರಡು ದೇಶಗಳು ಸ್ನೇಹಿತರಾಗಿರಬೇಕು, ನಮ್ಮದು 2000 ವರ್ಷಗಳ ಇತಿಹಾಸ ಹೊಂದಿರುವ ಸಂಬಂಧ. ಸೌಹಾರ್ದತೆಯಿಂದ ಹೆಚ್ಚು ಸ್ನೇಹವನ್ನು ಸಾಧಿಸಬಹುದು. ಚೀನಾ ಹಾಗೂ ಭಾರತ ಎರಡು ದೇಶಗಳಿಗೆ ಅಭಿವೃದ್ಧಿ ಮತ್ತು ಪುನರುಜ್ಜೀವನವನ್ನು ಸಾಧಿಸುವುದು ಮೊದಲ ಆದ್ಯತೆಯಾಗಿದೆ.

ಚೀನಾ ದೇಶದ ಮೂಲ ಉದ್ದೇಶ ಭಾರತೊಂದಿಗೆ ಸ್ನೇಹವಾಗಿದೆ, ಆದರೆ ಗಡಿಯಲ್ಲಿ ನಡೆದ ಘಟನೆಯಿಂದಾಗಿ ಚೀನಾ ಹಾಗೂ ಭಾರತದ ಸ್ನೇಹದ ಸಾರವನ್ನು ನಿರಾಕರಿಸಿ ಘರ್ಷಣೆಯನ್ನು ಉತ್ಪ್ರೇಕ್ಷಿಸುತ್ತಾರೆ. ಚೀನಾ ದೇಶದ ಆರ್ಥಿಕ ಪ್ರಭಾವವನ್ನು ಕಡಿಮೆ ಮಾಡಲು, ಭಾರತದಲ್ಲಿ ಜನರು ಚೀನಾ ನಿರ್ಮಿತ ವಸ್ತುಗಳನ್ನು ಬಳಸದಂತೆ ಅಭಿಯಾನ ನಡೆಸಿ, ಚೀನಾ ಉತ್ಪನ್ನಗಳನ್ನು ಹೊರಡಿಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿಯ ಅಭಿಯಾನಗಳಿಂದ ಸ್ನೇಹ ಹದೆಗೆಡುತ್ತದೆ. ಚೀನಾ ದೇಶ ಭಾರತದಲ್ಲಿಯೂ ಕೂಡ ಸುಮಾರು 8 ಬಿಲಿಯನ್ ಡಾಲರ್ ಗಳಷ್ಟು ಹೂಡಿಕೆ ಮಾಡಿ, ಸ್ಥಳೀಯ ಮೊಬೈಲ್ ಫೋನ್, ಗೃಹೋಪಯೋಗಿ ವಸ್ತುಗಳು ಮತ್ತು ವಾಹನಗಳ ಉತ್ಪಾದನೆಯನ್ನು ಹೆಚ್ಚಿಸಿದೆ. ಈ ರೀತಿ ಯಾರು ಮಾಡಬಾರದು ಇದರಿಂದ ಗ್ರಾಹಕರಿಗೂ ಹೆಚ್ಚು ನಷ್ಟವಾಗುತ್ತದೆ. ಎರಡು ದೇಶಗಳು ಪರಸ್ಪರ ದೇಶಗಳು ಸ್ನೇಹ ಸಂಬಂಧ ಸಾರಬೇಕು ಎಂದು ಮನವಿ ಮಾಡಿದ್ದಾರೆ.