ಬಿಗ್ ಬ್ರೇಕಿಂಗ್: 3 ಖಾನ್ ಗಳ ಬಿಗ್ ಶಾಕ್ ! ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿದ ಸ್ವಾಮಿ ! ಏನು ಗೊತ್ತಾ?

ಬಿಗ್ ಬ್ರೇಕಿಂಗ್: 3 ಖಾನ್ ಗಳ ಬಿಗ್ ಶಾಕ್ ! ಬಾಲಿವುಡ್ ನಲ್ಲಿ ತಲ್ಲಣ ಸೃಷ್ಟಿಸಿದ ಸ್ವಾಮಿ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸುಬ್ರಮಣ್ಯನ್ ಸ್ವಾಮಿ ರವರು ಇದೀಗ ಬಾಲಿವುಡ್ ಅಂಗಳದಲ್ಲಿ ಮತ್ತೊಮ್ಮೆ ತಲ್ಲಣ ಸೃಷ್ಟಿಸಿದ್ದಾರೆ. ಕಳೆದ ಕೆಲವು ಗಂಟೆಗಳ ಹಿಂದಷ್ಟೇ ಸುಶಾಂತ್ ಘಟನೆಗೆ ಎಂಟ್ರಿ ಕೊಟ್ಟಿದ್ದ ಸ್ವಾಮಿ ರವರು, ಇದೀಗ ಮತ್ತೊಂದು ವಿಚಾರವಾಗಿ ಬಾಲಿವುಡ್ ಸೆಲೆಬ್ರೆಟಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ. ಅದರಲ್ಲಿಯೂ ಅಮಿರ್ ಖಾನ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ರವರ ಕುರಿತು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಹೌದು ಸ್ನೇಹಿತರೇ, ಇದಕ್ಕೂ ಮುನ್ನ ಸುಶಾಂತ್ ಸಿಂಗ್ ರಾಜಪುತ್ ರವರ ಘಟನೆಯ ಕುರಿತು ಮಾತನಾಡಿ, ಸಾಂವಿಧಾನಿಕವಾಗಿ ಸಿಬಿಐಗೆ ವಹಿಸಲು ಸಾಧ್ಯವೇ ಎಂಬುದರ ಕುರಿತು ವರದಿ ಸಿದ್ದ ಪಡಿಸುವಂತೆ ಕೇಳಿದ್ದ ಸ್ವಾಮಿ ರವರು, ಇದೀಗ ಅಮಿರ್ ಖಾನ್, ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ರವರ ಆಸ್ತಿಗಳ ಮೇಲೆ ಕಣ್ಣಿಟ್ಟಿದ್ದಾರೆ. ಕೇವಲ ಭಾರತ ಅಷ್ಟೇ ಅಲ್ಲದೇ ವಿದೇಶಗಳಲ್ಲಿರುವ ಆಸ್ತಿಗಳ ಮೇಲೆ ಕಣ್ಣಿಟ್ಟು ಸಿಬಿಐ ಸೇರಿದಂತೆ ಎಸ್ಐಟಿ ಮತ್ತು ಐಟಿ ತನಿಖೆ ನಡೆಸಬೇಕು ಎಂದಿದ್ದಾರೆ.

ಟ್ವಿಟ್ಟರ್ ನಲ್ಲಿ ಈ ರೀತಿ ಬರೆದುಕೊಂಡಿರುವ ಸ್ವಾಮಿ ರವರು, ಭಾರತ ಮತ್ತು ವಿದೇಶಗಳಲ್ಲಿ ಬಾಲಿವುಡ್ ಮೂರು ಖಾನ್ ಗಳು (ಸಲ್ಮಾನ್ ಖಾನ್, ಅಮಿರ್ ಖಾನ್ ಹಾಗೂ ಶಾರುಖ್ ಖಾನ್) ಖರೀದಿ ಮಾಡಿರುವ ಆಸ್ತಿಗಳ ಕುರಿತು ಅದರಲ್ಲಿಯೂ ದುಬೈ ನಲ್ಲಿರುವ ಆಸ್ತಿಗಳ ಕುರಿತು ತನಿಖೆ ನಡೆಯಬೇಕು. ಅವರಿಗೆ ಈ ಬಂಗಲೆ ಗಳನ್ನು ಹಾಗೂ ಪ್ರಾಪರ್ಟಿ ಗಳನ್ನು ಯಾರು ಉಡುಗೊರೆಯನ್ನಾಗಿ ನೀಡಿದರು ಅಥವಾ ಹೇಗೆ ಅವರು ಇವೆಲ್ಲವನ್ನೂ ಖರೀದಿ ಮಾಡಿದರು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಇದನ್ನು ಮುನ್ನ ಸುಶಾಂತ್ ರವರ ಘಟನೆಯ ಕುರಿತು ಕೂಡ ಮೂರು ಖಾನ್ ಗಳನ್ನು ಪ್ರಶ್ನಿಸಿದ್ದ ಸುಶಾಂತ್ ಸಿಂಗ್ ರಜಪೂತ್ ರವರ ಕುರಿತು ಯಾಕೆ ಮೌನವಾಗಿದ್ದರು ಎಂದು ಟ್ವಿಟ್ಟರ್ ನಲ್ಲಿ ಬರೆದು ಕೊಂಡಿದ್ದರು. ಅದಾದ ಬಳಿಕ ಕೆಲವೇ ಕೆಲವು ಗಂಟೆಗಳನ್ನು ಈ ರೀತಿ ಟ್ವೀಟ್ ಮಾಡುವ ಮೂಲಕ ಮೂರು ಖಾನ್ ಗಳಿಗೆ ಬಿಗ್ ಶಾಕ್ ನೀಡಿದ್ದಾರೆ.

ಇದಕ್ಕೂ ಮುನ್ನ ದಬಾಂಗ್ ನಿರ್ದೇಶಕ ಅಭಿನವ್ ಕಶ್ಯಪ್ ಅವರು ಸಲ್ಮಾನ್ ಖಾನ್ ಅವರ ಚಾರಿಟಿ ‘ಬೀಯಿಂಗ್ ಹ್ಯೂಮನ್’ ಅನ್ನು ಹಣ ವರ್ಗಾವಣೆಗೆ ಬಳಸುತ್ತಾರೆ, ಇದರ ಕುರಿತು ತನಿಖೆ ನಡೆಯಬೇಕು. ಅವರು ಮುಗ್ಧ ಸಾರ್ವಜನಿಕರನ್ನು ಮರುಳು ಮಾಡುವ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಅವರು 500 ರೂ. ಜೀನ್ಸ್ ಅನ್ನು 5000 ರೂ.ಗೆ ಮಾರಾಟ ಮಾಡುತ್ತಿದ್ದಾರೆ ಮತ್ತು ದಾನದ ಹೆಸರಿನಲ್ಲಿ ಹಣವನ್ನು ಲಾಂಡರಿಂಗ್ ಮಾಡುತ್ತಿದ್ದಾರೆ. ಅವರ ಉದ್ದೇಶ ಯಾರಿಗೂ ಏನನ್ನೂ ನೀಡಬಾರದು, ಆದರೆ ಜನರಿಂದ ಮಾತ್ರ ಸಂಪಾದಿಸುವುದು ಇದರ ಕುರಿತು ತನಿಖೆ ನಡೆಯಬೇಕು ಎಂದಿದ್ದರು.