ಚೀನಾಗೆ ಕೊನೆಯ ಮೊಳೆ ! ಟ್ರಂಪ್ ಹೊರಡಿಸಿದರು ಅತಿದೊಡ್ಡ ಆದೇಶ ! ಪ್ರತಿ 10 ಗಂಟೆಗೊಳಿಗೊಮ್ಮೆ ಚೀನಾಗೆ ಶಾಕ್ ! ! ಏನು ಗೊತ್ತಾ?

ಚೀನಾಗೆ ಕೊನೆಯ ಮೊಳೆ ! ಟ್ರಂಪ್ ಹೊರಡಿಸಿದರು ಅತಿದೊಡ್ಡ ಆದೇಶ ! ಪ್ರತಿ 10 ಗಂಟೆಗೊಳಿಗೊಮ್ಮೆ ಚೀನಾಗೆ ಶಾಕ್ ! ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಚೀನಾ ದೇಶಕ್ಕೆ ಅತಿದೊಡ್ಡ ಶಾಕ್ ನೀಡಲು ಡೊನಾಲ್ಡ್ ಟ್ರಂಪ್ ರವರು ಸಿದ್ಧತೆ ನಡೆಸಿ ಹೊಸ ಆದೇಶ ಹೊರಡಿಸಿದ್ದಾರೆ. ಈ ಮೂಲಕ ಈ ಆದೇಶದಿಂದ ಪ್ರತಿ ಹತ್ತು ಗಂಟೆಗಳಿಗೊಮ್ಮೆ ಚೀನಾ ದೇಶಕ್ಕೆ ಶಾಕ್ ನೀಡಲು ಫೆಡರಲ್ ಬ್ಯುರೋ ಆಫ್ ಇನ್ವೆಸ್ಟಿಗೇಷನ್ (FBI) ಸಿದ್ಧವಾಗಿದೆ ಎಂದು FBI ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ. ಟ್ರಂಪ್ ರವರ ಈ ಆದೇಶದಿಂದ ಚೀನಾ ದೇಶದ ಆರ್ಥಿಕತೆ ಪಾಕಿಸ್ತಾನಕ್ಕಿಂತಲೂ ಕೆಲ ಮಟ್ಟಕ್ಕೆ ತಲುಪತ್ತದೆ ಎಂಬುದು ಆರ್ಥಿಕ ತಜ್ಞರ ಲೆಕ್ಕಾಚಾರವಾಗಿದೆ.

ಹೌದು ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಟೆಕ್ ದೈತ್ಯ ಅಮೇರಿಕ ದೇಶದ ಹಲವಾರು ಬೌದ್ಧಿಕ ಆಸ್ತಿ (ಅಮೆರಿಕನ್ ಇಂಟಲೆಕ್ಚುಯಲ್ ಪ್ರಾಪರ್ಟಿ) ಗಳನ್ನು ಕದ್ದು, ಚೀನಾ ದೇಶ ತನ್ನ ದೇಶದಲ್ಲಿನ ಕಂಪನಿಗಳಿಗೆ ನೀಡಿ ವಿಶ್ವ ಮಾರುಕಟ್ಟೆಯನ್ನು ತೆಕ್ಕೆಗೆ ತೆಗೆದುಕೊಂಡು ಆರ್ಥಿಕವಾಗಿ ವಿಶ್ವದಲ್ಲಿಯೇ ಬಲಿಷ್ಠವಾಗಲು ಇನ್ನಿಲ್ಲದ ಪ್ರಯತ್ನ ನಡೆಸುತಿತ್ತು. ಇದರ ಬಗ್ಗೆ ಹಲವಾರು ವರ್ಷಗಳಿಂಗ ಮಾಹಿತಿ ಸಿಗುತ್ತಿದ್ದಾದರೂ ಅಮೇರಿಕ ದೇಶ ಇದರ ಕುರಿತು ಗಮನ ಹರಿಸಿರಲಿಲ್ಲ. ಆದರೆ ಇದೀಗ ಈ ಕುರಿತು ಗಮನ ಹರಿಸಿ ಹೊಸ ಆದೇಶ ಹೊರಡಿಸಿದ್ದಾರೆ.

ಈ ತನಿಖೆಯ ಆಧಾರದ ಮೇಲೆ ಚೀನಾ ದೇಶವನ್ನು ಜಾಗತಿಕ ಡಾಲರ್ ಆಧಾರಿತ ಬ್ಯಾಂಕಿಂಗ್ ವ್ಯವಹಾರ ವ್ಯವಸ್ಥೆ ಯಿಂದ ದೂರವಿಡಲು ಹಾಗೂ ಅಮೆರಿಕದ ಆರ್ಥಿಕ ಮೂಲ ಸೌಕರ್ಯಗಳನ್ನು ಬಳಸದೇ ಇರಲು ಆದೇಶ ಹೊರಡಿಸಲು ಅಮೇರಿಕಾ ದೇಶ ಸಿದ್ಧತೆ ನಡಿಸಿದೆ. ಒಂದು ವೇಳೆ ಇದು ನಡೆದರೇ ಚೀನಾ ದೇಶದ ಆರ್ಥಿಕತೆ ಪಾತಾಳಕ್ಕೆ ಕುಸಿಯಲಿದೆ. ಈಗಾಗಲೇ ಇದೇ ರೀತಿಯ ನಿಬಂಧನೆಗಳನ್ನು ಅಮೇರಿಕ ದೇಶ ಇರಾನ್, ವೆನೆಜುವೆಲಾ ಮತ್ತು ರಷ್ಯಾ ದೇಶಗಳ ಮೇಲೆ ವಿಧಿಸಿದೆ. ಅಂತರರಾಷ್ಟ್ರೀಯ ವ್ಯಾಪಾರ ವ್ಯವಸ್ಥೆಯಿಂದ ಹೊರಗುಳಿದರೇ ಆರ್ಥಿಕತೆ ಯಾವ ಮಟ್ಟಕ್ಕೆ ತಲುಪಲಿದೆ ಎಂಬುದಕ್ಕೆ ಈ ದೇಶಗಳೇ ಸಾಕ್ಷಿ.