ಸಲ್ಮಾನ್, ಕರಣ್ ಗೆ ಸೇರಿದಂತೆ ಬಾಲಿವುಡ್ ಗೆ ಬಿಗ್ ಶಾಕ್ ! ಸುಶಾಂತ್ ಫ್ಯಾನ್ಸ್ ಗೆ ಭರ್ಜರಿ ಸಿಹಿ ಸುದ್ದಿ ! ಯಾಕೆ ಗೊತ್ತಾ?

ಸಲ್ಮಾನ್, ಕರಣ್ ಗೆ ಸೇರಿದಂತೆ ಬಾಲಿವುಡ್ ಗೆ ಬಿಗ್ ಶಾಕ್ ! ಸುಶಾಂತ್ ಫ್ಯಾನ್ಸ್ ಗೆ ಭರ್ಜರಿ ಸಿಹಿ ಸುದ್ದಿ ! ಯಾಕೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಎಲ್ಲೆಡೆ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಘಟನೆಗೆ ಕಾರಣರಾದವರನ್ನು ಹುಡುಕಿ ಹೊರ ತೆಗಿಯಬೇಕು, ಅವರಿಗೆ ಪಾಠ ಕಲಿಸಲೇಬೇಕು ಎಂದು ಅಭಿಯಾನಗಳನ್ನು ನಡೆಸುತ್ತಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳಷ್ಟೇ ಅಲ್ಲದೇ, ಬಹುತೇಕ ಸಾಮಾನ್ಯರು ಕೂಡ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾರೆ.

ಇವರೆಲ್ಲರೂ ಬಾಲಿವುಡ್ ಚಿತ್ರರಂಗದಲ್ಲಿ ಸ್ಟಾರ್ ಕುಟುಂಬಗಳ ಕಾರುಬಾರು ನಿಲ್ಲಿಸಲು ಈ ಕೂಡಲೇ ಸಿಬಿಐಅಖಾಡಕ್ಕೆ ಇಳಿದು ಸಂಪೂರ್ಣ ಮಾಹಿತಿ ಕಲೆಹಾಕಿ ನಡೆದ ಘಟನೆಗೆ ತಕ್ಕ ತೀರ್ಪು ನೀಡಬೇಕು ಎಂದು ಹೇಳುತ್ತಿದ್ದಾರೆ. ಈ ಮೂಲಕ ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನಪಕ್ಷಪಾತವನ್ನು ನಿಲಿಸಲೇಬೇಕು ಎಂದು ಒತ್ತಾಯ ಮಾಡಿದ್ದಾರೆ. ಇನ್ನು ಕೆಲವರು, ಸಲ್ಮಾನ್ ಖಾನ್, ಕರಣ್ ಜೋಹರ್ ರವರಿಗೆ ಬುದ್ದಿ ಕಲಿಸಿಯೇ ತೀರುತ್ತೇವೆ ಎಂದಿದ್ದಾರೆ. ಈ ಅಭಿಯಾನಗಳಿಂದ ಈಗಾಗಲೇ ಕರಣ್ ಜೋಹರ್ ರವರು, ತಮ್ಮ ಪ್ರತಿಷ್ಠಿತ ಮಾಮಿ ಫಿಲಂ ಫೆಸ್ಟಿವಲ್ ಮಂಡಳಿಯಿಂದ ಕೆಳಗಿಳಿದಿದ್ದಾರೆ. ಅಷ್ಟೇ ಅಲ್ಲದೇ ಕರಣ್ ರವರ ಕಾಫೀ ವಿಥ್ ಕರಣ್ ಇನ್ನು ಮುಂದೆ ಪ್ರಸಾರ ಮಾಡುವುದಿಲ್ಲ, ನಡೆಸುವುದಿಲ್ಲ ಎಂದು ಚಾನೆಲ್ ಹೇಳಿಕೊಂಡಿದೆ.

ಇನ್ನು ಸಲ್ಮಾನ್ ರವರಿಗೂ ಕೂಡ ಸಿನಿಮಾ ಬಿಡುಗಡೆಯಾಗಿ ನಮ್ಮ ಶಕ್ತಿ ತೋರಿಸುತ್ತೇವೆ ಎಂದು ಸುಶಾಂತ್ ಸಿಂಗ್ ಅಭಿಮಾನಿಗಳು ಟ್ರೆಂಡಿಂಗ್ ಸೃಷ್ಟಿಸಿದ್ದಾರೆ. ಇವರಿಬ್ಬರಷ್ಟೇ ಅಲ್ಲದೇ ಇನ್ನು ಹಲವಾರು ಜನಗಳಿಗೆ ಬುದ್ದಿ ಕಲಿಸಲು ಸಿಬಿಐ ಅಖಾಡಕ್ಕೆ ಇಳಿಯಬೇಕು ಎಂದು ಅಭಿಮಾನಿಗಳು ಒತ್ತಾಯ ಮಾಡುತ್ತಿದ್ದರು. ಇವರ ಕೂಗಿಗೆ ಇದೀಗ ಧ್ವನಿಯಾಗಲು ಸುಬ್ರಮಣ್ಯನ್ ಸ್ವಾಮಿ ಅಖಾಡಕ್ಕೆ ಇಳಿದಿದ್ದಾರೆ. ತಮ್ಮ ತಂಡದ ವಕೀಲರಿಗೆ ಈ ಕುರಿತು ಸಂಪೂರ್ಣ ವರದಿ ತಿಳಿಸಲು ಹೇಳಿದ್ದು, ಸುಶಾಂತ್ ಸಿಂಗ್ ರವರ ಘಟನೆಯನ್ನು ಸಿಬಿಐಗೆವರ್ಗಾಹಿಸಲು ಸಾಂವಿಧಾನಿಕವಾಗಿ ಸಾಧ್ಯವಿದೆಯೇ ಎಂಬುದರ ಕುರಿತು ಗಮನ ಹರಿಸಲು ಸೂಚಿಸಿದ್ದಾರೆ. ಇದರಿಂದ ಸುಶಾಂತ್ ಸಿಂಗ್ ಅಭಿಮಾನಿಗಳು ಫುಲ್ ಖುಷ್ ಆಗಿದ್ದು, ಸ್ವಾಮಿ ರವರಿಗೆ ಧನ್ಯವಾದ ತಿಳಿಸಿದ್ದಾರೆ. ಒಟ್ಟಾರೆಯಾಗಿ ಇವರ ನಡೆಯ ಮೂಲಕ ಒಂದೆಡೆ ಸುಶಾಂತ್ ಸಿಂಗ್ ಫ್ಯಾನ್ಸ್ ಖುಷಿ ಪಟ್ಟರೇ, ಬಾಲಿವುಡ್ ಮಂದಿಗೆ ಮಾತ್ರ ಇದು ನುಂಗಲಾರದ ತುತ್ತಾಗಿದೆ.