ಬಿಗ್ ಬ್ರೇಕಿಂಗ್: ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಭಾರತೀಯ ಸೇನೆ!ಒಂದಾಗಲಿವೆಯೇ 4 ಬಲಾಢ್ಯ ರಾಷ್ಟ್ರಗಳು ?

ನಮಸ್ಕಾರ ಸ್ನೇಹಿತರೇ, ಇದೀಗ ಚೀನಾ ದೇಶಕ್ಕೆ ಮತ್ತೊಮ್ಮೆ ಸ್ಪಷ್ಟ ಸಂದೇಶ ರವಾನೆ ಮಾಡಲು ಮುಂದಾಗಿದೆ. ಈ ಮೂಲಕ ವಿಶ್ವದ ಬಲಾಢ್ಯ ರಾಷ್ಟ್ರಗಳು ಮತ್ತೊಮ್ಮೆ ಸಮುದ್ರಲ್ಲಿ ಘರ್ಜನೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಬಾರಿ ಘರ್ಜನೆ ಮತ್ತಷ್ಟು ಸದ್ದು ಮಾಡಲಿದೆ. ಯಾಕೆ ಗೊತ್ತಾ? ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ.

ಇಷ್ಟು ದಿವಸ ನಡೆಯುತ್ತಿದ್ದ ವಾರ್ಷಿಕ ಮಿಲಿಟರಿ ಅಭ್ಯಾಸವಾದ ಮಲಬಾರ್ ನೌಕಾ ವ್ಯಾಯಾಮದಲ್ಲಿ ಭಾರತ ಸೇರಿದಂತೆ ಅಮೇರಿಕ ಹಾಗೂ ಜಪಾನ್ ದೇಶಗಳು ಭಾಗವಹಿಸುತ್ತಿದ್ದವು. ಆದರೆ ಈ ಬಾರಿ QUAD ಎಂಬ ತಂಡ ರಚನೆಯಾಗಿರುವ ಕಾರಣ ಚೀನಾ ದೇಶಕ್ಕೆ ಸ್ಪಷ್ಟ ಸಂದೇಶ ರವಾನೆ ಮಾಡಲು ಆಸ್ಟ್ರೇಲಿಯಾ ತಂಡವನ್ನು ಕೂಡ ಮಲಬಾರ್ ನೌಕಾ ವ್ಯಾಯಾಮಕ್ಕೆ ಆಹ್ವಾನಿಸಲು ಭಾರತ ದೇಶ ಸಿದ್ಧತೆ ನಡೆಸಿದೆ.

ಈ QUAD ಒಕ್ಕೂಟ ಅನೌಪಚಾರಿಕ ವಾಗಿದ್ದರೂ ಕೂಡ ಬಾರಿ ಮಹತ್ವವನ್ನು ಪಡೆದುಕೊಂಡಿದೆ. ಇದೇ ಮೊದಲ ಬಾರಿಗೆ ವಿಶ್ವದ ನಾಲ್ಕು ಬಲಿಷ್ಠ ಪ್ರಜಾ ಪ್ರಭುತ್ವದ ರಾಷ್ಟ್ರಗಳು ಮಿಲಿಟರಿ ಮಟ್ಟದಲ್ಲಿ ಅಭ್ಯಾಸ ನಡೆಸುವ ಮೂಲಕ ಚೀನಾ ದೇಶಕ್ಕೆ ಸಂದೇಶ ರವಾನೆ ಮಾಡುವುದಕ್ಕೆ ಯೋಜನೆ ರೂಪಿಸಿವೆ.

ಈ ಕುರಿತು ಆಸ್ಟ್ರೇಲಿಯಾ ದೇಶಕ್ಕೆ ಆಹ್ವಾನ ನೀಡಲು ಭಾರತ ಸಿದ್ಧತೆ ನಡೆಸುತ್ತಿದ್ದು ಜಪಾನ್ ಹಾಗೂ ಅಮೇರಿಕ ದೇಶಗಳ ಜೊತೆ ಮಾತುಕತೆ ನಡೆಸಲು ಯೋಜನೆ ರೂಪಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಹ್ವಾನ ನೀಡಬೇಡಿ ಎಂದು ಅಮೇರಿಕ, ಜಪಾನ್ ಹೇಳುವುದಿಲ್ಲ, ಹಾಗೂ ಭಾರತದ ಆಹ್ವಾನವನ್ನು ತಿರಸ್ಕಾರ ಮಾಡಲು ಆಸ್ಟ್ರೇಲಿಯಾ ಕೂಡ ಮನಸ್ಸು ಮಾಡುವುದಿಲ್ಲ ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ಕಾರಣಕ್ಕೆ ಈ ಬಾರಿಯ ಮಲಬಾರ್ ನೌಕಾ ವ್ಯಾಯಾಮದಲ್ಲಿ ನಾವು 4 ದೇಶಗಳ ಅಭ್ಯಾಸವನ್ನು ನೋಡಬಹುದಾಗಿದೆ.

Facebook Comments

Post Author: Ravi Yadav