ಚೀನಾ ಹೂಡಿಕೆಯ ಟ್ಯಾಕ್ಸಿ ಅಪ್ಲಿಕೇಶನ್ ಗಳಿಗೆ ಸೆಡ್ಡು ! ಕನ್ನಡಿಗರ ಕಮಾಲ್ ! ಗ್ರಾಹಕರಿಗೂ, ಚಾಲಕರಿಗೂ ಲಾಭ !

ನಮಸ್ಕಾರ ಸ್ನೇಹಿತರೇ, ಇದೀಗ ದೇಶದ ಎಲ್ಲೆಡೆ ಚೀನಾ ದೇಶಕ್ಕೆ ಹಣದ ಹರಿವು ನಿಲ್ಲಿಸಬೇಕು ಎಂಬ ಕೂಗು ಕೇಳಿ ಬರುತ್ತಿದೆ. ಇದೀಗ ಅದೇ ಹಾದಿಯಲ್ಲಿ ನಮ್ಮ ಕನ್ನಡಿಗರ ತಂಡವೊಂದು ಚೀನಾ ದೇಶದ ಬಂಡವಾಳ ಹೊಂದಿರುವ ದಿಗ್ಗಜ ಟ್ಯಾಕ್ಸಿ ಕಂಪನಿಗಳಿಗೆ ಪರ್ಯಾಯವಾಗಿ ಗ್ರಾಹಕರಿಗೂ ಹಾಗೂ ಚಾಲಕರಿಗೂ ಹೆಚ್ಚು ಅನುಕೂಲವಾಗುವಂತಹ ಅಪ್ಲಿಕೇಶನ್ ಅನ್ನು ರಚಿಸಿ ಬಿಡುಗಡೆ ಮಾಡಿದೆ.

ಈ ಅಪ್ಲಿಕೇಶನ್ ಗೆ “ಇಂಡಿಯನ್ ಟ್ಯಾಕ್ಸಿಸ್” ಎಂದು ಹೆಸರಿಸಲಾಗಿದ್ದು, ಗ್ರಾಹಕರು ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿ ಕೊಳ್ಳಬಹುದಾಗಿದೆ. ಇನ್ನು ಈ ಕಂಪನಿಯಲ್ಲಿ ಚಾಲಕರು ನೋಂದಾಯಿಸಿಕೊಳ್ಳಲು “ಮೈ ಟ್ಯಾಕ್ಸಿ” ಎಂಬ ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಂಡು ಅಪ್ಲಿಕೇಶನ್ ಭರ್ತಿ ಮಾಡಬೇಕಾಗಿದೆ. ಈ ಅಪ್ಲಿಕೇಶನ್ ನಲ್ಲಿ ಮೀಟರ್ ದರ ಅನ್ವಯವಾಗುವ ಕಾರಣ ಗ್ರಾಹಕರಿಗೂ ಹಾಗೂ ಚಾಲಕರಿಗೂ ಹೆಚ್ಚು ಲಾಭವಾಗುತ್ತದೆ.

ಅಷ್ಟೇ ಅಲ್ಲದೇ, ಚಾಲಕರಿಂದ ಇತರ ದಿಗ್ಗಜ ಕಂಪನಿಗಳಂತೆ ಕಮಿಷನ್ ರೂಪದಲ್ಲಿ ಈ ಕಂಪನಿಯು ಯಾವುದೇ ಹಣವನ್ನು ಪಡೆದು ಕೊಳ್ಳುವುದಿಲ್ಲ. ಇನ್ನು ಕೊರೋನ ಪರಿಸ್ಥಿತಿಯಲ್ಲಿ ಚಾಲಕರಿಗೆ ದುಡಿಮೆ ಅನಿವಾರ್ಯವಿರುವ ಕಾರಣ ಮುಂಜಾಗ್ರತಾ ಕ್ರಮಗಳ ಕುರಿತು ಮಾಹಿತಿ ನೀಡಿ, ಉಚಿತವಾಗಿ ಕಾರ್ ಅನ್ನು ಸ್ಯಾನಿಟೈಜ್ ಮಾಡಿ ಕೊಡಲಾಗುತ್ತದೆ ಹಾಗೂ ಗ್ರಾಹಕರು, ಚಾಲಕರ ಮಧ್ಯೆ ಪರದೆಯನ್ನು ಹಾಕಿ, ಉಚಿತ ಮಾಸ್ಕ್, ಸ್ಯಾನಿಟೈಝೆರ್ ನೀಡಲಾಗುತ್ತದೆ.

Facebook Comments

Post Author: Ravi Yadav