ಬಾಲಿವುಡ್ನಲ್ಲಿ ಶುರುವಾಯಿತು ಅಭಿಯಾನದ ಹವಾ ! ಚೀನಾಗೆ ತಕ್ಕ ಪಾಠ ಕಲಿಸಲು ಮಹತ್ವದ ಹೆಜ್ಜೆ ಇಟ್ಟ ಕಾರ್ತಿಕ್ ! ಮಾಡಿದ್ದೇನು ಗೊತ್ತಾ?

ಬಾಲಿವುಡ್ನಲ್ಲಿ ಶುರುವಾಯಿತು ಅಭಿಯಾನದ ಹವಾ ! ಚೀನಾಗೆ ತಕ್ಕ ಪಾಠ ಕಲಿಸಲು ಮಹತ್ವದ ಹೆಜ್ಜೆ ಇಟ್ಟ ಕಾರ್ತಿಕ್ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಎಲ್ಲೆಡೆ ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಅಭಿಯಾನಗಳು ಆರಂಭವಾಗಿವೆ. ದಿನಕ್ಕೊಂದು ಯಶಸ್ಸಿ ನಂತೆ ಪ್ರತಿ ದಿನವೂ ಒಂದಲ್ಲ ಒಂದು ರೀತಿ ಅಭಿಯಾನಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದ್ದು ಎಲ್ಲೆಡೆ ಸಂತಸದ ಮಾತುಗಳು ಕೇಳಿ ಬರುತ್ತಿವೆ. ಇದು ಹೀಗೆ ಮುಂದುವರೆದಲ್ಲಿ ಖಂಡಿತ ಈ ಅಭಿಯಾನ ಯಶಸ್ವಿಯಾಗಲಿದೆ.

ಇದೀಗ ಬಾಲಿವುಡ್ ನಲ್ಲಿ ಯುವ ತಾರೆಯಾಗಿ ಮಿಂಚುತ್ತಿರುವ ಕಾರ್ತಿಕ್ ಆರ್ಯನ್ ರವರು ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ ತಮ್ಮದೇ ಆದ ರೀತಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಾರ್ತಿಕ್ ಆರ್ಯನ್ ರವರು ಚೀನಾ ದೇಶದ ಮೂಲ ಮೊಬೈಲ್ ಕಂಪನಿಯಾಗಿರುವ ಒಪ್ಪೋ ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ನಿನ್ನ ಇದ್ದಕ್ಕಿದ್ದಂತೆ ತನ್ನ ಐಫೋನ್ ಮೊಬೈಲ್ ನಲ್ಲಿ ಫೋಟೋ ತೆಗೆಯುತ್ತಿರುವ ಚಿತ್ರವನ್ನು ಅಪ್ಲೋಡ್ ಮಾಡಿದ್ದರು.

ಯಾವುದೇ ಸೆಲೆಬ್ರಿಟಿಗಳಲ್ಲಿ ಒಂದು ಮೊಬೈಲ್ ಕಂಪನಿ ಗೆ ಬ್ರಾಂಡ್ ಅಂಬಾಸಿಡರ್ ಆಗಿರುವ ಸಂದರ್ಭದಲ್ಲಿ ಇತರ ಮೊಬೈಲ್ಗಳನ್ನು ಬಹಿರಂಗವಾಗಿ ಫೋಟೋಗಳಲ್ಲಿ ಬಳಸುವಂತಿಲ್ಲ. ಇದನ್ನು ಕಂಡ ಜನ ಯಾಕೆ ಎಂದು ಪ್ರಶ್ನಿಸಿದಾಗ ಸತ್ಯ ಹೊರ ಬಿದ್ದಿದೆ. ಇಡೀ ದೇಶದ ಎಲ್ಲೆಡೆ ನಡೆಯುತ್ತಿರುವ ಅಭಿಯಾನಕ್ಕೆ ಬೆಂಬಲ ಸೂಚಿಸಿ ನಮ್ಮ ಸೈನಿಕರ ಪರವಾಗಿ ನಾವು ಇದ್ದೇವೆ ಎಂಬುದನ್ನು ತೋರಿಸಲು ಕಾರ್ತಿಕ್ ಆರ್ಯನ್ ರವರು ಚೀನಾ ದೇಶದ ಒಪ್ಪೋ ಕಂಪನಿಯೊಂದಿಗೆ ಬ್ರಾಂಡ್ ಅಂಬಾಸಿಡರ್ ಆಗಿ ಮುಂದುವರೆಯುವುದಿಲ್ಲ ಎಂದು ತಿಳಿಸಿ ಒಪ್ಪಂದ ಮುಗಿಸಿದ್ದಾರೆ. ಇದೇ ಮೊದಲ ಬಾರಿಗೆ ಈ ರೀತಿಯ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ನೀಡಿದಂತಾಗಿದ್ದು, ದಿಗ್ಗಜ ಕಂಪನಿಗಳ ನಂತರ ಇದೀಗ ಬಾಲಿವುಡ್ ಸೆಲೆಬ್ರಿಟಿಗಳು ಬೆಂಬಲ ಸೂಚಿಸುತ್ತಿರುವ ಕಾರಣ ಖಂಡಿತ ಈ ಅಭಿಯಾನ ಮತ್ತಷ್ಟು ಯಶಸ್ವಿಯಾಗಲಿದೆ. ಒಟ್ಟಿನಲ್ಲಿ ಬಾಲಿವುಡ್ ನಲ್ಲಿ ಬೆಂಬಲ ಸೂಚಿಸಿದ ಮೊದಲ ಸೆಲೆಬ್ರೆಟಿ ಕಾರ್ತಿಕ್ ರವರಿಗೆ ನಮ್ಮ ತಂಡದ ಪರವಾಗಿ ಧನ್ಯವಾಗಲು.