ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತದ ಹಾದಿಯಲ್ಲಿ ಹೆಜ್ಜೆ ಇಟ್ಟ ಹಾಂಗ್ ಕಾಂಗ್ ! ನಡೆದದ್ದೇನು ಗೊತ್ತಾ?

ಚೀನಾ ದೇಶಕ್ಕೆ ತಕ್ಕ ಪಾಠ ಕಲಿಸಲು ಭಾರತದ ಹಾದಿಯಲ್ಲಿ ಹೆಜ್ಜೆ ಇಟ್ಟ ಹಾಂಗ್ ಕಾಂಗ್ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಚೀನಾ ದೇಶ ಒಂದಲ್ಲಾ ಒಂದು ರೀತಿಯಲ್ಲಿ ಇತರ ದೇಶಗೊಳೊಂದಿಗೆ ಖ್ಯಾತೆ ತೆಗೆಯುತ್ತಿದೆ. ಭಾರತ ಸೇರಿದಂತೆ ಜಪಾನ್, ತೈವಾನ್ ಹಾಗೂ ರಷ್ಯಾ ದೇಶಗಳ ಜೊತೆ ಗಡಿ ಖ್ಯಾತೆ ಯಾದರೇ ಹಾಂಗ್ ಕಾಂಗ್ ದೇಶದ ಮೇಲೆ ಇನ್ನಿಲ್ಲದ ಮಸಲತ್ತು ನಡೆಸಿ ರಾಷ್ಟ್ರೀಯ ಭದ್ರತಾ ಕಾನೂನು ಜಾರಿಗೊಳಿಸಿದೆ. ಇದರಿಂದ ಸಾಮಾನ್ಯವಾಗಿಯೇ ಎಲ್ಲಾ ದೇಶಗಳು ತನ್ನದೇ ಆದ ರೀತಿಯಲ್ಲಿ ಚೀನಾ ದೇಶಕ್ಕೆ ಉತ್ತರ ನೀಡುತ್ತಿವೆ.

ಭಾರತ ದೇಶ ಕೂಡ ಬಾರ್ಡರ್ ನಲ್ಲಿ ತಕ್ಕ ಉತ್ತರದ ನಂತರ ಡಿಜಿಟಲ್ ಸ್ಟ್ರೈಕ್ ಮಾಡಿತ್ತು. ಅಷ್ಟೇ ಅಲ್ಲದೇ, ಸ್ವದೇಶೀ ಭಾರತ ಎಂಬ ಅಭಿಯಾನದ ಮೂಲಕ ಹೊಸ ಅಲೆಯನ್ನು ದೇಶದಲ್ಲಿ ಸೃಷ್ಟಿ ಮಾಡಿದೆ. ಇದಾದ ಬಳಿಕ ವಿಶ್ವದ ಹಲವಾರು ದೇಶಗಳು ಭಾರತದ ಹಾದಿಯಲ್ಲಿ ಹೆಜ್ಜೆ ಹಾಕುತ್ತಿವೆ. ವಿಶ್ವದ ದೊಡ್ಡಣ್ಣ ಅಮೇರಿಕ ದೇಶವು ಕೂಡ ಭಾರತ ಉತ್ತಮ ನಿರ್ಧಾರ ಮಾಡಿದೆ, ನಾವು ಅದೇ ರೀತಿಯ ನಿರ್ಧಾರ ತೆಗೆದು ಕೊಳ್ಳುತ್ತೇವೆ ಎಂದು ಹೇಳುತ್ತಿರುವ ಸಮಯದಲ್ಲಿ ಹಾಂಗ್ ಕಾಂಗ್ ದೇಶ ಚೀನಾ ದೇಶದ ಅಪ್ಲಿಕೇಶನ್ ಗಳನ್ನೂ ಹೊರಹಾಕಲು ನಿರ್ಧಾರ ಮಾಡಿದೆ.

ಈ ನಿರ್ಧಾರದ ಮೊದಲನೇ ಹೆಜ್ಜೆಯಾಗಿ ಟಿಕ್ ಟಾಕ್ ಅಪ್ಲಿಕೇಶನ್ ಅನ್ನು ಹಾಂಗ್ ಕಾಂಗ್ ನಿಂದ ಹೊರ ಹಾಕಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ತೆಗೆದು ಕೊಳ್ಳುತ್ತಿರುವುದಾಗಿ ಹಾಂಗ್ ಕಾಂಗ್ ಹೇಳಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಬೈಟ್ ಡಾನ್ಸ್ ಕಂಪನಿಯು ಹೌದು, ಈ ವಿಷಯ ಸತ್ಯ. ಆದರೆ ನಾವು ಹಾಂಗ್ ಕಾಂಗ್ ದೇಶದ ಮನವೊಲಿಸುತ್ತೇವೆ ಹಾಗೂ ಅವರು ನೀಡಿರುವ ಕಾರಣದಲ್ಲಿ ಯಾವುದೇ ಹುರುಳಿಲ್ಲ ಎಂಬುದನ್ನು ಸಾಬೀತು ಪಡಿಸುತ್ತೇವೆ ಎಂದು ಹೇಳಿದ್ದಾರೆ. ಇದರ ಜೊತೆ ಚೀನಾ ದೇಶದ ಎಲ್ಲಾ ಅಪ್ಲಿಕೇಶನ್ ಗಳನ್ನೂ ಹೊರಹಾಕಲು ಹಾಂಗ್ ಕಾಂಗ್ ದೇಶ ನಿರ್ಧಾರ ಮಾಡಿದೆ ಎಂದು ತಿಳಿದು ಬಂದಿದೆ.