ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್, ಗಾಂಧಿ ಕುಟುಂಬಕ್ಕೆ ಶಾಕ್ ನೀಡಲು ಗೃಹ ಸಚಿವಾಲಯ ಅಖಾಡಕ್ಕೆ !

ಬಿಗ್ ಬ್ರೇಕಿಂಗ್: ಕಾಂಗ್ರೆಸ್ ಪಕ್ಷಕ್ಕೆ ಬಿಗ್ ಶಾಕ್, ಗಾಂಧಿ ಕುಟುಂಬಕ್ಕೆ ಶಾಕ್ ನೀಡಲು ಗೃಹ ಸಚಿವಾಲಯ ಅಖಾಡಕ್ಕೆ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಡುವೆ ಸರ್ಕಾರಿ ಹಣದ ಲೆಕ್ಕಾಚಾರಗಳ ಬಗ್ಗೆ ವಾದ-ವಿವಾದಗಳು ತಾರಕಕ್ಕೇರಿದೆ. ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರೇ ಟ್ರಸ್ಟಿಗಳಾಗಿರುವ ರಾಜೀವ್ ಗಾಂಧಿ ಫೌಂಡೇಶನ್, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಹಾಗೂ ಇಂದಿರಾ ಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳಿಗೆ ಪ್ರಧಾನ ಮಂತ್ರಿಗಳ ನೈಸರ್ಗಿಕ ವಿಪತ್ತಿನ ನಿಧಿಯಿಂದ ದೇಣಿಗೆ ನೀಡಲಾಗಿದೆ.

ಇನ್ನು ಚೀನಾ ದೇಶದ ವತಿಯಿಂದ ಕೂಡ ಕೋಟ್ಯಂತರ ರೂ ಹಣ ಹರಿದು ಬಂದಿದ್ದು ಇವೆಲ್ಲವೂ ಅಕ್ರಮ ಹಾಗೂ ತೆರಿಗೆ ವಂಚನೆ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿವೆ. ರಾಜೀವ್ ಗಾಂಧಿ ಫೌಂಡೇಶನ್ ಟ್ರಸ್ಟ್ ನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಮನಮೋಹನ್ ಸಿಂಗ್ ಹಾಗೂ ಪಿ ಚಿದಂಬರಂ ಸೇರಿದಂತೆ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ವಾದ್ರಾ ರವರು ಟ್ರಸ್ಟಿಗಳಾಗಿದ್ದಾರೆ. ಇನ್ನುಳಿದಂತೆ ಈ ಮೂರು ಟ್ರಸ್ಟ್ಗಳ ಅಧ್ಯಕ್ಷರಾಗಿರುವುದು ಮತ್ಯಾರು ಅಲ್ಲ ಸೋನಿಯಾ ಗಾಂಧಿ.

ವಿದೇಶಿ ಕಂಪನಿಗಳು, ಪ್ರಧಾನಮಂತ್ರಿ ನಿಧಿ ಸೇರಿದಂತೆ ವಿವಿಧ ಮೂಲಗಳಿಂದ ಬಂದಿರುವ ಹಣವು ಅಕ್ರಮವಾಗಿದೆ ಹಾಗೂ ತೆರಿಗೆ ವಂಚನೆಯಿಂದ ಕೂಡಿದೆ. ಆದಕಾರಣ ಈ ಮೂರು ಟ್ರಸ್ಟ್ಗಳ ಹಣದ ಮೂಲಕ ಹಾಗೂ ನಡೆದಿರುವ ಸಂಪೂರ್ಣ ವ್ಯವಹಾರ ಬಗ್ಗೆ ತನಿಖೆ ನಡೆಸಲು ಅಂತರ್​​ ಸಚಿವಾಲಯದ ಕಮಿಟಿಯನ್ನು ಕೇಂದ್ರ ಗೃಹ ಇಲಾಖೆ ನೇಮಿಸಿದೆ. ವಿಶೇಷವೆನೆಂದರೆ ಈ ತಂಡದಲ್ಲಿ ಸಿಬಿಐ ನಿರ್ದೇಶಕರು ಸೇರಿದಂತೆ ಜಾರಿ ನಿರ್ದೇಶನದ ವಿಶೇಷ ನಿರ್ದೇಶಕರು ಕೂಡ ಇರುತ್ತಾರೆ ಎಂದು ಗೃಹ ಸಚಿವಾಲಯ ತಿಳಿಸಿದೆ.