ಈ ಮೂವರು ಇಂದಿನ ಆಟಗಾರರು 2003 ವಿಶ್ವಕಪ್ ನಲ್ಲಿ ಇರಬೇಕಿತ್ತು ಎಂದ ಗಂಗೂಲಿ ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ಈ ಮೂವರು ಇಂದಿನ ಆಟಗಾರರು 2003 ವಿಶ್ವಕಪ್ ನಲ್ಲಿ ಇರಬೇಕಿತ್ತು ಎಂದ ಗಂಗೂಲಿ ! ಆಯ್ಕೆಯಾದವರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇಂದಿನ ಭಾರತೀಯ ಕ್ರಿಕೆಟ್ ತಂಡ ಎಷ್ಟೇ ಸರಣಿಗಳನ್ನು ಗೆದ್ದಿರಬಹುದು ಹಾಗೂ ಮುಂದೆ ಗೆಲ್ಲಬಹುದು, ಆದರೆ ಸಾರ್ವಕಾಲಿಕ ಶ್ರೇಷ್ಠ ಭಾರತ ತಂಡ ಯಾವುದು ಎಂದು ಕೇಳಿದರೇ, ಬಹುತೇಕರು ಮರು ಆಲೋಚನೆ ಮಾಡದೇ, ಸೌರವ್ ಗಂಗೂಲಿ ರವರು ಮುನ್ನೆಡಿಸಿದ ತಂಡ ಎನ್ನುತ್ತಾರೆ. ಅಂದು ಆ ತಂಡ ವಿಶ್ವಕಪ್ ಫೈನಲ್ ತಲುಪಿ ಸೋಲನ್ನು ಕಂಡಿದ್ದರೂ ಕೂಡ ಆ ತಂಡವೇ ಅಭಿಮಾನಿಗಳಿಗೆ ನೆಚ್ಚಿನ ತಂಡವಾಗಿದೆ.

ಇದೀಗ ಈ ತಂಡದ ಕುರಿತು ಯಾಕೆ ಮಾತು ಎಂದುಕೊಳ್ಳುತ್ತಿದಿರಾ? ಸೌರವ್ ಗಂಗೂಲಿ ರವರನ್ನು, ಇದೀಗ ಸಂದರ್ಶನ ನಡೆಸಿದ ಮಾಯಾಂಕ್ ಅಗರ್ವಾಲ್ ರವರು, ನೀವು 2003 ವಿಶ್ವಕಪ್ ಟೂರ್ನಿಯಲ್ಲಿ ತಂಡವನ್ನು ಮುನ್ನೆಡೆಸಿದ್ದೀರಿ, ಒಂದು ವೇಳೆ ನಿಮಗೆ ಕೊಹ್ಲಿ ರವರು ಮುನ್ನೆಡೆಸಿದ 2019 ರ ವಿಶ್ವಕಪ್ ತಂಡದಿಂದ 3 ಆಟಗಾರನ್ನು ಆಯ್ಕೆ ಮಾಡಿ, ನಿಮ್ಮ ತಂಡದಲ್ಲಿ ಸೇರಿಸಿಕೊಳ್ಳಿ ಎಂದರೇ ಯಾವ ಯಾವ ಆಟಗಾರರನ್ನು ಆಯ್ಕೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದರು.

ಇದಕ್ಕೆ ಉತ್ತರಿಸಿದ ಸೌರವ್ ಗಂಗೂಲಿ ರವರು, ಹೆಚ್ಚು ಆಲೋಚನೆ ಮಾಡದೇ, ವಿರಾಟ್ ಕೊಹ್ಲಿ, ಜಸ್ಪೀತ್ ಬುಮ್ರಾ ಹಾಗೂ ರೋಹಿತ್ ಶರ್ಮ ರವರನ್ನು ಆಯ್ಕೆ ಮಾಡಿದರು. ಈ ಆಯ್ಕೆಗಳನ್ನು ಸಮರ್ಥಿಸಿಕೊಂಡ ಸೌರವ್ ಗಂಗೂಲಿ ರವರು, ನಾವು ವಿಶ್ವಕಪ್ ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದೇವೆ, ಆದರೂ ಕೂಡ ದಕ್ಷಿಣ ಆಫ್ರಿಕಾದಲ್ಲಿ ಸರಣಿ ನಡೆದ ಕಾರಣ ಬುಮ್ರಾ ರವರು ಇದ್ದಿದ್ದರೇ ಚೆನ್ನಾಗಿ ಇರುತ್ತಿತ್ತು. ಇನ್ನು ರೋಹಿತ್ ಆರಂಭಿಕರಾಗಿ ಹಾಗೂ ನಾನು ಮೂರನೇ ಕ್ರಮಾಂಕ, ವಿರಾಟ್ ನಾಲ್ಕನೇ ಕ್ರಮಾಂಕದಲ್ಲಿ ಆಡಬಹುದಿತ್ತು. ಬಹುಶಃ ಈ ಮಾತನ್ನು ವೀರೇಂದ್ರ ಸೆಹ್ವಾಗ್ ರವರು ಕೇಳಿಸಿಕೊಳ್ಳುತ್ತಿರಬಹುದು, ಒಂದು ವೇಳೆ ಈ ವಿಷಯ ಅವರಿಗೆ ತಿಳಿದರೇ ಖಂಡಿತಾ ನನಗೆ ನಾಳೆ ಕರೆ ಮಾಡಿ, ನೀವು ಏನು ಆಲೋಚನೆ ಮಾಡುತ್ತೀರಾ ಎಂದು ಪ್ರಶ್ನಿಸುತ್ತಾರೆ ಎಂದು ನಕ್ಕು ಉತ್ತರ ನೀಡಿದರು.