50 ವರ್ಷಗಳ ಭಿಕ್ಷಾಟನೆಯಿಂದ ರಕ್ಷಿಸಿದ ನಂತರ 8 ವರ್ಷಗಳ ನಿರಂತರ ಆರೈಕೆ ನಂತರ ಈ ಆನೆ ಹೇಗೆ ಕಾಲ ಕಳೆಯುತ್ತಿದೆ ಗೊತ್ತಾ?

50 ವರ್ಷಗಳ ಭಿಕ್ಷಾಟನೆಯಿಂದ ರಕ್ಷಿಸಿದ ನಂತರ 8 ವರ್ಷಗಳ ನಿರಂತರ ಆರೈಕೆ ನಂತರ ಈ ಆನೆ ಹೇಗೆ ಕಾಲ ಕಳೆಯುತ್ತಿದೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ತನ್ನ ಜೀವನದ 50 ವರ್ಷಗಳನ್ನು ಭಿಕ್ಷಾಟಣೆಯಲ್ಲಿ ಕಳೆದ ಒಂದು ಆನೆಯನ್ನು ರಕ್ಷಿಸಿ, ಸತತ ಎಂಟು ವರ್ಷಗಳ ನಿರಂತರ ಆರೈಕೆ ನಂತರ ಆ ಆನೆ ಇತರ ಆನೆಗಳಂತೆ ಸಾಮಾನ್ಯ ಜೀವನ ನಡೆಸಲು ಆರಂಭಿಸುವುದನ್ನು ನೋಡಿದರೇ ಆರೈಕೆ ಮಾಡಿದವರಿಗೆ ಎಷ್ಟು ಆನಂದವಾಗಿರುತ್ತದೆ ಅಲ್ಲವೇ? ಅವರಿಗಷ್ಟೇ ಅಲ್ಲಾ, ಈ ಆನೆ ಸಂಭ್ರಮ ನೋಡಿದರೇ ಎಂತವರಿಗೂ ಹಾಗೇ ಅನಿಸುತ್ತದೆ.

ಉತ್ತರ ಪ್ರದೇಶದ ಆಗ್ರಾದ ಬೀದಿಗಳಲ್ಲಿ ಭಿಕ್ಷೆ ಬೇಡಲು ಬಳಸಿಕೊಳ್ಳುತ್ತಿದ್ದ ಆನೆಯನ್ನು ಕಳೆದ 8 ವರ್ಷಗಳ ಹಿಂದೆ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದರು. ಆದರೆ ರಕ್ಷಣೆ ಮಾಡುವ ಹೊತ್ತಿಗೆ, ಆನೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ಬಳ-ಲಿತ್ತು. ಆನೆಗೆ ಪೌಷ್ಠಿಕವಾದ ಆಹಾರವಿಲ್ಲದೇ, ನಿಶಕ್ತಿ ಹಾಗೂ ಸೋಂಕಿನಿಂದ ಬಳಲುತಿತ್ತು ಎಂಬುದು ವೈದ್ಯರ ವರದಿಯಿಂದ ತಿಳಿದು ಬಂದಿತ್ತು. ನಿರಂತರ ಆರೈಕೆ ಹಾಗೂ ಉಪಚಾರದಿಂದ 8 ವರ್ಷಗಳ ನಂತರ ಆನೆ ಸಾಮಾನ್ಯ ಸ್ಥಿತಿಗೆ ಮರಳಿದೆ. ಇದೀಗ ಈ ಆನೆ 4500 KG ತೂಕವಿದೆ.

ಆದರೆ ಎಷ್ಟೇ ಆರೈಕೆ ಮಾಡಿದರೂ ಫೂಲ್ಕಾಲಿ ಯಲ್ಲಿ ಚೈತನ್ಯ ಕಂಡು ಬಂದಿರಲಿಲ್ಲ, ನೀರು ಕೊಳಗಳು ಇದ್ದರೂ ಎಂದಿಗೂ ಇಳಿದು ಆಟವಾಡಿರಲಿಲ್ಲ. ಆದರೆ ಕೆಲವು ದಿನಗಳ ಹಿಂದೆ ಫೂಲ್ಕಾಲಿ ಳನ್ನು ವನ್ಯಜೀವಿ ಎಸ್‌ಒಎಸ್ ಕೇಂದ್ರಕ್ಕೆ ಕರೆತರಲಾಗಿತ್ತು. ಕರೆ ತಂದ ಕೆಲವು ದಿನಗಳ ಬಳಿಕ ಮೊದಲ ಬಾರಿಗೆ ನೀರಿನ ಕೊಳಕ್ಕೆ ಇಳಿದಿದ್ದು, ಈ ಆನೆಯ ಆರೈಕೆದಾರರು ಬಹಳ ಸಂತಸ ಪಟ್ಟು ವಿಡಿಯೋ ಅನ್ನು ಹಂಚಿ ಕೊಂಡಿದ್ದಾರೆ.