ರೈತನ ಮಗಳು, IAS ಕನಸು ಹೊತ್ತುಕೊಂಡು ಪ್ರತಿದಿನ 24 KM ಸೈಕ್ಲಿಂಗ್ ಮಾಡಿ, SSLC ಯಲ್ಲಿ ಗಳಿಸಿದ ಅಂಕವೆಷ್ಟು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಷ್ಠೆ ಹಾಗೂ ಪರಿಶ್ರಮದಿಂದ ಕೆಲಸ ಮಾಡಿದರೇ ಯಶಸ್ಸು ಖಂಡಿತಾ ಸಿಕ್ಕೇ ಸಿಗುತ್ತೆ ಎಂಬುದಕ್ಕೆ ಈ ಘಟನೆಯ ಸ್ಪಷ್ಟ ಉದಾಹರಣೆ. ನಾವು ಇಂದು ಹೇಳಲು ಹೊರಟಿರುವುದು ಮಧ್ಯ ಪ್ರದೇಶದ ಒಬ್ಬ ರೈತನ ಮಗಳ ಕಥೆ. ಈಕೆಯ ಸಾಧನೆ ಕಂಡು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಪ್ರಶಂಸೆಯ ಮಾತುಗಳು ಕೇಳಿ ಬಂದಿವೆ.

ಮಧ್ಯಪ್ರದೇಶ ರಾಜ್ಯದ ಅಜ್ನೊಲ್ ಎಂಬ ಗ್ರಾಮದಲ್ಲಿ ವಾಸವಿರುವ ರೋಶ್ನಿ ಭಡೌರಿಯಾ ಎಂಬ ಬಾಲಕಿ ತನ್ನ ಗ್ರಾಮದಿಂದ ಬರೋಬ್ಬರಿ 12 KM ದೂರವಿರುವ ಶಾಲೆಗೆ ಪ್ರತಿ ದಿನವೂ ಸೈಕಲ್ ನಲ್ಲಿ ಹೋಗಿ ಬರುತ್ತಿದ್ದರು. ಅಲ್ಲಿಗೆ ಶಾಲೆಗೆ ಹೋಗಿ ಬರಲು ಪ್ರತಿದಿನ ಬರೋಬ್ಬರಿ 24 KM ದೂರ ಸೈಕಲ್ ನಲ್ಲಿಯೇ ಕ್ರಮಿಸಬೇಕಾಗಿತ್ತು. ಅದೆಷ್ಟೋ ದಿನಗಳು ಮಳೆ ಬಂದರೇ, ಮಣ್ಣಿನ ದಾರಿಯಲ್ಲಿ ಚಲಿಸುವುದು ಕಷ್ಟವಾಗಿ ಸಂಬಂಧಿಕರ ಅಥವಾ ಪರಿಚಯದವರ ಮನೆಯಲ್ಲಿಯೇ ರಾತ್ರಿ ಕಳೆದು ಶಾಲೆಗೆ ಹೋಗುತ್ತಿದ್ದರಂತೆ. ಇದೀಗ ಇಷ್ಟೆಲ್ಲಾ ಕಷ್ಟ ಪಟ್ಟು, ನಿಷ್ಠೆಯಿಂದ ಶಾಲೆಗೆ ಹೋಗಿ ಈ ಬಾಲಕಿ ರಾಜ್ಯಕ್ಕೆ 8 ನೇ ಸ್ಥಾನ ಪಡೆದು ಕೊಂಡಿದ್ದಾರೆ.

ಹೌದು, ಒಟ್ಟಾರೆಯಾಗಿ ಶೇಕಡಾ 98.5 ಅಂಕಗಳನ್ನು ಪಡೆಯುವ ಮೂಲಕ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ನೂರಕ್ಕೆ ನೂರು ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸಾಧಿಸಿ ಎಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಮುಂದೆ ಐಎಎಸ್ ಪರೀಕ್ಷೆಯನ್ನು ಮುಗಿಸಿ ಜಿಲ್ಲಾಧಿಕಾರಿಯಾಗಬೇಕು ಎಂಬ ಕನಸು ಇವರದ್ದು. ಈ ಕುರಿತು ತಂದೆಯನ್ನು ಪ್ರಶ್ನೆ ಮಾಡಿದಾಗ, ಮೂವರು ಮಕ್ಕಳು ಚೆನ್ನಾಗಿ ಓದುತ್ತಾರೆ. ನಾನು ಅವರಿಗೆ ಹಣ ನೀಡಲು ಸಾಧ್ಯವಿಲ್ಲ, ಆದರೆ ಅವರನ್ನು ಓದಿಸಿಯೇ ತೀರುತ್ತೇನೆ. ಯಾವುದೇ ಕಾರಣಕ್ಕೂ ಓದನ್ನು ನಿಲ್ಲಿಸುವುದಿಲ್ಲ ಎಂದು ಕಣ್ಣೀರು ಹಾಕಿದರು. ಒಟ್ಟಿನಲ್ಲಿ ಹಲವಾರು ಕಷ್ಟಗಳ ನಡುವೆಯೂ ಈ ಸಾಧನೆ ಮಾಡಿರುವ ಈ ಬಾಲಕಿ ನಿಜಕ್ಕೂ ಗ್ರೇಟ್.