ಭಾರತಕ್ಕೆ ಕಾಲಿಡಲು ಪ್ರಯತ್ನಿಸುತ್ತಿದ್ದ ಚೀನಾದ ಮತ್ತೊಂದು ದಾರಿ ಮುಚ್ಚಿದ ಭಾರತ ! ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಭಾರತ ದೇಶವು ಚೀನಾ ಸೇರಿದಂತೆ ಇತರ ಗಡಿ ಹಂಚಿಕೆಯ ದೇಶಗಳ ವಿದೇಶಿ ಬಂಡವಾಳ ಹೂಡಿಕೆಯ ನಿಯಮಗಳನ್ನು ಬದಲಾಯಿಸಿದೆ. ಇದರಿಂದ ಚೀನಾ ದೇಶ ಇನ್ನು ಮುಂದೆ ಭಾರತದಲ್ಲಿನ ಉದ್ಯಮಗಳಲ್ಲಿ ಮನಬಂದಂತೆ ಹೂಡಿಕೆ ಮಾಡುವುದು ಅಸಾಧ್ಯದ ಕೆಲಸ ಹಾಗೂ ಪ್ರತಿಯೊಂದು ಹೂಡಿಕೆಗೂ ಅನುಮತಿ ಪಡೆಯಬೇಕು.

ಈ ಆದೇಶ ಹೊರಡಿಸಿದರೂ ಕೂಡ ಚೀನಾ ದೇಶ ಇದರ ಬಗ್ಗೆ ಕಿಂಚಿತ್ತೂ ಆಲೋಚನೆ ಮಾಡಿರಲಿಲ್ಲ. ಯಾಕೆಂದರೇ, ಭಾರತದಲ್ಲಿ ಹೂಡಿಕೆ ಮಾಡಲು ಚೀನಾ ದೇಶ ಮೊದಲಿನಿಂದಲೂ ಮಾರ್ಗವೊಂದನ್ನು ಕಂಡುಕೊಂಡಿತ್ತು. ಅದುವೇ ಇತರ ದೇಶಗಳ ಮೂಲಕ ಹೂಡಿಕೆ ಮಾಡುವುದು. ಹೌದು ಸ್ನೇಹಿತರೇ, ಇತರ ದೇಶಗಳ ಕಂಪೆನಿಗಳಲ್ಲಿ ಹೂಡಿಕೆ ಮಾಡಿ, ಆ ಕಂಪನಿಗಳ ಮೂಲಕ ಹೂಡಿಕೆ ಮಾಡುವುದು ಅಥವಾ ತಾನೇ ಸ್ವಂತ ಕಂಪನಿಯನ್ನು ಸ್ಥಾಪಿಸಿ ಆ ಕಂಪನಿಯ ಮೂಲಕ ಹೂಡಿಕೆ ಮಾಡುತಿತ್ತು.

ಈ ರೀತಿಯ ದಾರಿಗಳಿಂದ ಚೀನಾ ದೇಶಕ್ಕೆ ಭಾರತಕ್ಕೆ ಕಾಲಿಡಲು ಹೆಬ್ಬಾಗಿಲು ಆಗಿದ್ದ ದೇಶ ಮತ್ಯಾವುದು ಅಲ್ಲಾ ಅದುವೇ ಸಿಂಗಾಪುರ್. ಈಗ ಇದನ್ನು ಚೆನ್ನಾಗಿ ಅರಿತಿರುವ ಭಾರತ ದೇಶವು ಸಿಂಗಾಪುರ್ ದೇಶಕ್ಕೂ ಕೂಡ ವಿದೇಶಿ ನೇರ ಹೂಡಿಕೆಗಳ (ಎಫ್‌ಡಿಐ) ಪರಿಶೀಲನೆಯನ್ನು ಬಿಗಿಗೊಳಿಸಲು ಭಾರತ ಸಜ್ಜಾಗಿದೆ. ಈ ಮೂಲಕ ಚೀನಾ ದೇಶಕ್ಕೆ ಮತ್ತೊಂದು ಶಾಕ್ ನೀಡಲು ಸಿದ್ಧವಾಗುತ್ತಿರುವ ಭಾರತ ಸಾಧ್ಯವಾದಷ್ಟು ವಸ್ತುಗಳನ್ನು ಇಲ್ಲಿಯೇ ತಯಾರಿಸಿ, ಹೂಡಿಕೆ ಮಾಡಿ ಸ್ವದೇಶೀ ಭಾರತದ ಕನಸನ್ನು ಹೊತ್ತುಕೊಂಡು ಮುಂದೆ ಸಾಗುತ್ತಿದೆ.

Post Author: Ravi Yadav