ಚೀನಾಗೆ ನಡುಕ ಖಚಿತ: ಜಪಾನ್, ಯುಎಸ್ ಅಲ್ಲಾ ಸ್ವಾಮಿ, ಅಖಾಡಕ್ಕೆ ಇಳಿಯಲ್ಲಿದ್ದಾನೆಯೇ ಭಾರತದ ಆಪ್ತಮಿತ್ರ?

ಚೀನಾಗೆ ನಡುಕ ಖಚಿತ: ಜಪಾನ್, ಯುಎಸ್ ಅಲ್ಲಾ ಸ್ವಾಮಿ, ಅಖಾಡಕ್ಕೆ ಇಳಿಯಲ್ಲಿದ್ದಾನೆಯೇ ಭಾರತದ ಆಪ್ತಮಿತ್ರ?

ನಮಸ್ಕಾರ ಸ್ನೇಹಿತರೇ, ಭಾರತದ ಗಡಿಯಲ್ಲಿನ ಅಭಿವೃದ್ಧಿ ಯೋಜನೆಗಳನ್ನು ಕಂಡು ಕಂಗಾಲಾಗಿರುವ ಚೀನಾ ದೇಶವು ಖ್ಯಾತೆ ತೆಗೆದು, ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗುವಂತೆ ಮಾಡಿದೆ. ಭಾರತ ದೇಶ ಕೂಡ ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟ ಪಡಿಸಿ ಎಲ್ಲದಕ್ಕೂ ಸಿದ್ದವಾಗಿ ನಿಂತಿದೆ.

ಇಷ್ಟೇ ಅಲ್ಲದೇ, ಈ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದು, ಹಲವಾರು ದೇಶಗಳು ಭಾರತದ ಪರವಾಗಿ ಧ್ವನಿ ಎತ್ತಿವೆ. ಅದರಲ್ಲಿಯೂ ಅಮೇರಿಕ, ಜಪಾನ್, ತೈವಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಚೀನಾ ದೇಶದ ವಿರುದ್ಧ ನಿಂತಿರುವ ಭಾರತದ ಕುರಿತು ಬಹಿರಂಗವಾಗಿ ಧ್ವನಿ ಎತ್ತಿವೆ. ಅಮೇರಿಕ ದೇಶ ಒಂದು ಹೆಜ್ಜೆ ಮುಂದೆ ಹೋಗಿ, ಭಾರತ ಸೇರಿದಂತೆ ಇನ್ನುಳಿದ ಏಷ್ಯಾ ದೇಶಗಳಿಗೆ ಚೀನಾ ವಿರುದ್ಧ ನಿಲ್ಲಲು ಸೇನೆ ರವಾನಿಸುವುದಾಗಿ ತಿಳಿಸಿದೆ.

ಇನ್ನು ರಷ್ಯಾ ದೇಶ ಬಹಿರಂಗವಾಗಿ ಬೆಂಬಲ ಘೋಷಿಸದೇ ಇದ್ದರೂ, ಭಾರತಕ್ಕೆ ಕೆಲವೇ ಕೆಲವು ದಿನಗಳಲ್ಲಿ ಅತ್ಯಗತ್ಯವಾಗಿರುವ ಯುದ್ಧ ಸಾಮಗ್ರಿಗಳನ್ನು ಕಳುಹಿಸಿಕೊಡುವುದಾಗಿ ತಿಳಿಸಿದೆ. ಇದನ್ನು ತಡೆಯಲು ಚೀನಾ ಮಾಡಿದ ಪ್ರಯತ್ನಗಳೆಲ್ಲವನ್ನು ವಿಫಗೊಳಿಸಿ ರಷ್ಯಾ ಈ ಆದೇಶ ಹೊರಡಿಸಿದೆ. ಭಾರತ ಹಾಗೂ ಚೀನಾ ದೇಶದ ನಡುವೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಯಾವುದೇ ವಿಷಯದಲ್ಲಾಗಲಿ ಸದಾ ಭಾರತದ ಪರ ನಿಂತು, ಎಲ್ಲಾ ಕಾರ್ಯಗಳಲ್ಲೂ ಕೈ ಜೋಡಿಸುವ ನಮ್ಮ ದೇಶದ ಆಪ್ತ ಮಿತ್ರ ಮಾತ್ರ ಯಾವ ವಿಷಯದಲ್ಲಿಯೂ ಕಾಣಿಸಿ ಕೊಂಡಿರಲಿಲ್ಲ. ಇದನ್ನು ಕಂಡು ನಿಮ್ಮಂತೆ ನಮಗೂ ಕೂಡ ಆಶ್ಚರ್ಯವಾಗಿತ್ತು. ಆದರೆ ಇದೀಗ ಆಪ್ತಮಿತ್ರ ಎಂಟ್ರಿ ಕೊಡಲಿದ್ದಾನೆ ಎಂಬ ಸುದ್ದಿ ಹೊರ ಬಂದಿದೆ. ಅಧಿಕೃತ ಆದೇಶ ಹೊರಬಿದ್ದಿಲ್ಲವಾದರೂ, ವಿಶ್ವದ ಪ್ರತಿಷ್ಠಿತ ಮಾಧ್ಯಮಗಳು ಒಂದು ನಿಗೂಢ ಪ್ರಶ್ನೆಯನ್ನು ನಮ್ಮ ಮುಂದಿಟ್ಟಿವೆ.

ಸ್ನೇಹಿತರೇ ಬಹುಶಃ ನಿಮಗೆಲ್ಲರಿಗೂ ಆ ಆಪ್ತಮಿತ್ರ ಯಾರೆಂದು ಇಷ್ಟೋತ್ತಿಗಾಗಲೇ ತಿಳಿದಿರಬಹುದು. ಆದರೆ ಈ ಸಮಯದಲ್ಲಿ ಅವರ ಕುರಿತು ಯಾಕೆ ಮಾತನಾಡುತ್ತಿದ್ದೀವಿ? ನಡೆಯುತ್ತಿವುದಾದರೂ ಏನು? ಎಂಬ ಎಲ್ಲಾ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸ್ನೇಹಿತರೇ, ನಾವು ಮಾತನಾಡುತ್ತಿರುವು ಈ ಹಿಂದೆ ಭಾರತದ ಜೊತೆ ಯುದ್ಧಗಳಲ್ಲಿ ಕೈ ಜೋಡಿಸಿ, ಎಂತಹ ಸಮಯದಲ್ಲಿಯೂ, ಎಷ್ಟೇ ವೇಗವಾಗಿ ಅಗತ್ಯತೆ ಇದ್ದರೂ ಕೂಡ ಭಾರತ ಕೇಳಿದ ಕೂಡ ತನ್ನಲ್ಲಿನ ದಾಸ್ತಾನು ಎಷ್ಟು ಎಂಬುದನ್ನು ಆಲೋಚನೆ ಕೂಡ ಮಾಡದೇ ಯುದ್ಧ ಸಾಮಗ್ರಿಗಳನ್ನು ಕಳುಹಿಸುವ ಇಸ್ರೇಲ್ ದೇಶ ಬಗ್ಗೆ. ಹೌದು ಭಾರತ ಹಾಗೂ ಇಸ್ರೇಲ್ ಸಂಬಂಧದ ಬಗ್ಗೆ ನಿಮಗೆ ಹೇಳುವ ಅವಶ್ಯಕತೆಯೇ ಇರುವುದಿಲ್ಲ. ಹೀಗಿರುವಾಗ ಇದೀಗ ಇಸ್ರೇಲ್ ಅಖಾಡಕ್ಕೆ ಇಳಿಯಲಿದೆ ಎಂಬ ಮಾತು ಕೇಳಿಬಂದಿದೆ.

ಹೌದು, ಚೀನಾ ವಾಯುಪಡೆಯ ಯುದ್ಧ ವಿಮಾನಗಳ ಸಂಖ್ಯೆ ಹೆಚ್ಚಾದ ಕೂಡಲೇ ಎರಡು ದಿನಗಳ ಹಿಂದೆ ಭಾರತವು ತನ್ನ ತ್ವರಿತ-ಪ್ರತಿಕ್ರಿಯೆಯ ಮೇಲ್ಮೈಯಿಂದ ಗಾಳಿಯ ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಪೂರ್ವ ಲಡಾಕ್ ವಲಯಕ್ಕೆ ಸ್ಥಳಾಂತರಿಸಿತ್ತು. ಇಂತಹ ಸಮಯದಲ್ಲಿ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯ ಅಭಾವ ಭಾರತವನ್ನು ಕಾಡುತ್ತಿದೆ. ಮತ್ತೊಂದೆಡೆ ರಷ್ಯಾ ಎರಡು ಮೂರು ತಿಂಗಳಿನಲ್ಲಿ ರವಾನಿಸುವ ಪ್ರಯತ್ನದಲ್ಲಿ ಇದೆ. ಇಂತಹ ಕಠಿಣ ಸಂದರ್ಭದಲ್ಲಿ ANI ಸಂಸ್ಥೆಯು, ಭಾರತವು ತನ್ನ ಸ್ನೇಹಿತನಿಂದ ಹೆಚ್ಚು ಸಾಮರ್ಥ್ಯವಿರುವ ವಾಯು ರಕ್ಷಣಾ ವ್ಯವಸ್ಥೆಯನ್ನು ಆಮದು ಮಾಡಿ ಕೊಳ್ಳಲಿದೆ ಎಂದು ವರದಿ ಮಾಡಿದೆ.

ಈ ವ್ಯವಸ್ಥೆಯು ವಿಶ್ವದ ಯಾವುದೇ ಮೂಲೆಗಳಿಂದ ಎದುರಾಗುವ ಸವಾಲುಗಳನ್ನು ಸುಲಭವಾಗಿ ಹಿಮ್ಮೆಟ್ಟಿಸಬಹುದಾಗಿದೆ ಎಂದು ವರದಿ ಮಾಡಿರುವ ಕಾರಣ ಇದೀಗ ಚಿತ್ತ ಇಸ್ರೇಲ್ ನತ್ತ ನೆಟ್ಟಿದೆ. ಯಾಕೆಂದರೆ, ವಿಶ್ವದಲ್ಲಿಯೇ ಅತ್ಯುತ್ತಮ ಏರ್ ಟೆಕ್ನಾಲಜಿ ಹೊಂದಿರುವ ದೇಶ ಅಷ್ಟೇ ಅಲ್ಲದೇ ಯಾವುದೇ ಷರತ್ತುಗಳು ಇಲ್ಲದೇ ಇಸ್ರೇಲ್ ದೇಶ ಭಾರತದ ಕೈ ಹಿಡಿಯುವ ಕಾರಣ, ANI ವರದಿ ಮಾಡಿರುವ ಆ ಆಪ್ತಮಿತ್ರ ಇಸ್ರೇಲ್ ದೇಶವೇ ಎಂಬ ಮಾತು ಕೇಳಿ ಬರುತ್ತದೆ. ಯುಸ್, ಜಪಾನ್ ಹಾಗೂ ರಷ್ಯಾ ದೇಶಗಳನ್ನು ಹೊರತುಪಡಿಸಿದರೇ ಉಳಿದಿರುವುದು ಇಸ್ರೇಲ್ ಮಾತ್ರ. ಒಂದು ವೇಳೆ ಅದೇ ನಡೆದಲ್ಲಿ ಚೀನಾಗೆ ಮತ್ತಷ್ಟು ನಡುಕ ಹುಟ್ಟುವುದು ಖಚಿತ.