ದಾದ ಅಖಾಡಕ್ಕೆ ! ಬಾಯ್ಕಾಟ್ ಚೀನಾ ಅಭಿಯಾನಕ್ಕೆ ಬಿಸಿಸಿಐ ಸಾಥ್ ನೀಡಲು ಮಹತ್ವದ ಹೆಜ್ಜೆ ಇಟ್ಟು ಮಾಡಲು ಹೊರಟಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಇಡೀ ಭಾರತದಲ್ಲಿ ಗಡಿಯಲ್ಲಿ ನಡೆದ ಕಹಿ ಘಟನೆಯಿಂದ ಜನರು ಎಚ್ಚರಗೊಂಡಿದ್ದಾರೆ. ಸದ್ಯದ ಮಟ್ಟಿಗೆ ಚೀನಾ ದೇಶದ ಸರಕುಗಳನ್ನು
ಸಂಪೂರ್ಣವಾಗಿ ನಿಲ್ಲಿಸಲು ಸಾಧ್ಯವಿಲ್ಲದಿದ್ದರೂ ಕೂಡ ಸಾಧ್ಯವಾದಷ್ಟು ವಸ್ತುಗಳನ್ನು ಬಳಸುವುದನ್ನು ನಿಲ್ಲಿಸಿ, ಪ್ರತಿದಿನ ಇಲ್ಲಿಯೇ ಉತ್ಪಾದನೆ ಆರಂಭಿಸೋಣ ಹಾಗೂ ಸಾಧ್ಯವಾದಷ್ಟು ಬೇಗ ಸಂಪೂರ್ಣ ನಿಲ್ಲಿಸೋಣ ಎಂಬ ಮನೋಭಾವನೆ ಬಹುತೇಕ ಜನರಲ್ಲಿ ಮೂಡಿದೆ.

ಹೌದು, ಪ್ರತಿ ದಿವಸ ಸಾಧ್ಯವಾದಷ್ಟು ವಸ್ತುಗಳನ್ನು ಇಲ್ಲಿಯೇ ಉತ್ಪಾದಿಸುತ್ತಾ ನಾವ್ಯಾಕೆ ಭಾರತವನ್ನು ಮತ್ತಷ್ಟು ಬಲಿಷ್ಠ ಗೊಳಿಸಬಾರದು ಎಂಬ ಆಲೋಚನೆ ಎಲ್ಲರಲ್ಲಿ ಮೂಡಿದೆ. ಈ ಹಿಂದೆ ಹಲವಾರು ಬಾರಿ ಬಾಯ್ಕಾಟ್ ಚೀನಾ ಅಭಿಯಾನ ಸದ್ದು ಮಾಡಿತ್ತಾದರೂ, ಇಷ್ಟರ ಮಟ್ಟಿಗೆ ಎಂದು ಸದ್ದು ಮಾಡಿರಲಿಲ್ಲ. ಈ ಬಾರಿ ಹಲವಾರು ಸೆಲೆಬ್ರಿಟಿಗಳು ಕೂಡ ಈ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಇನ್ನು ಹರ್ಭಜನ್ ಸಿಂಗ್ ರವರು ಕೂಡ ಕೈ ಜೋಡಿಸಿ, ಯಾವುದೇ ಚೀನಾ ವಸ್ತು ಬಳಸುವುದಿಲ್ಲ, ಹಾಗೂ ಜಾಹೀರಾತುಗಳಲ್ಲಿ ಕೂಡ ಭಾಗವಹಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೇ ಸಮಯದಲ್ಲಿ ಬಿಸಿಸಿಐ ಕೂಡ ಐಪಿಎಲ್ ಪ್ರಾಯೋಜಕತ್ವಕ್ಕೆ ಚೀನಿ ಕಂಪನಿಯ ಅಗತ್ಯವಿಲ್ಲ. ಆದ್ದರಿಂದ ಕೂಡಲೇ ಪ್ರಾಯೋಜಕತ್ವವನ್ನು ಕೈಬಿಡುವಂತೆ ಮನವಿ ಮಾಡಿದ್ದರು. ಇದು ಕಷ್ಟ ಸಾಧ್ಯ ಎಂದು ಮೊದಲಿಗೆ ಕೆಲವೊಂದು ಐಪಿಎಲ್ ಅಧಿಕಾರಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದರು.‌

ಆದರೆ ಈಗ ಬಂದಿರುವ ಮಾಹಿತಿಯ ಪ್ರಕಾರ ಐಪಿಎಲ್ ಕ್ರಿಕೆಟ್ ಟೂರ್ನಿ ಆಯೋಜಕ ಸಂಸ್ಥೆಯು ಭಾರತದ ಗಡಿಯಲ್ಲಿ ನಡೆದ ಕಹಿ ಘಟನೆಯನ್ನು ಗಣನೆಗೆ ತೆಗೆದುಕೊಂಡು ಐಪಿಎಲ್ ಟೂರ್ನಿಯ ಪ್ರಾಯೋಜಕತ್ವವನ್ನು ಮರು ಪರಿಶೀಲನೆ ನಡೆಸಿ ನಿರ್ಧಾರ ತೆಗೆದುಕೊಳ್ಳಲು ಮುಂದಿನ ವಾರ ಮಹತ್ವದ ಸಭೆ ಕರೆದಿದೆ. ಈ ಮೂಲಕ ಭಾರತೀಯ ಕಂಪನಿಗಳಿಗೆ ಪ್ರಾಯೋಜಕತ್ವವನ್ನು ನೀಡುವುದರ ಆಲೋಚನೆಯಲ್ಲಿ ಬಿಸಿಸಿಐ ತೊಡಗಿಕೊಂಡಿದೆ ಎಂದು ತಿಳಿದು ಬಂದಿದೆ. ಒಂದು ವೇಳೆ ಸೌರವ್ ಗಂಗೂಲಿ ರವರು ಈ ನಿರ್ಧಾರ ತೆಗೆದುಕೊಂಡಲ್ಲಿ, ಖಂಡಿತವಾಗಲೂ ದೇಶದಲ್ಲೆಡೆ ಜನಸಾಮಾನ್ಯರ ಕೂಡ ಕೂಗಾಗಿರುವ ಬಾಯ್ಕಾಟ್ ಚೀನಾ ಅಭಿಯಾನಕ್ಕೆ ಆನೆ ಬಲ ಬಂದಂತಾಗಲಿದೆ.