ಐದು ಶ್ರೇಷ್ಠ ಟಿ-ಟ್ವೆಂಟಿ ಆಟಗಾರರನ್ನು ಆಯ್ಕೆ ಮಾಡಿದ ಬ್ರಾವೊ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ?

ಐದು ಶ್ರೇಷ್ಠ ಟಿ-ಟ್ವೆಂಟಿ ಆಟಗಾರರನ್ನು ಆಯ್ಕೆ ಮಾಡಿದ ಬ್ರಾವೊ ! ಆಯ್ಕೆಯಾದ ಆಟಗಾರರು ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ವೆಸ್ಟ್ ಇಂಡೀಸ್ ತಂಡದ ಡ್ವೇನ್ ಬ್ರಾವೋ ರವರು ವಿಶ್ವದ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಗಳಲ್ಲಿ ಒಬ್ಬರು ಎಂಬುವುದರಲ್ಲಿ ಎರಡು ಮಾತಿಲ್ಲ. ಅದರಲ್ಲಿಯೂ ಕೊನೆಯ ಓವರ್ಗಳಲ್ಲಿ ಅತ್ಯುತ್ತಮ ಬೌಲಿಂಗ್ ಮಾಡುವ ಬ್ರಾವೊ ರವರು ಏಕಪಕ್ಷೀಯವಾಗಿ ಕೊನೆ ಕ್ಷಣದಲ್ಲಿ ಹಲವಾರು ಪಂದ್ಯಗಳನ್ನು ಗೆಲ್ಲಿಸಿ ಕೊಟ್ಟಿದ್ದಾರೆ.

ವಿಶ್ವದ ವಿವಿಧ ಟಿ-ಟ್ವೆಂಟಿ ಗಳಲ್ಲಿ ಉತ್ತಮ ಪ್ರದರ್ಶನ ನೀಡಿರುವ ಬ್ರಾವೋ ರವರು ಇದೀಗ ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಐವರು ಆಟಗಾರರನ್ನು ಆಯ್ಕೆ ಮಾಡಿದ್ದಾರೆ. ಹರ್ಷ ಭೋಗ್ಲೆ ರವರ ಜೊತೆ ನಡೆದ ಸಂದರ್ಶನದಲ್ಲಿ ಪ್ರತಿ ಸುತ್ತಿನಲ್ಲಿ ಹರ್ಷ ಭೋಗ್ಲೆ ರವರು ವಿವಿಧ ಆಯ್ಕೆಗಳನ್ನು ನೀಡುತ್ತಾ ಹೋದರು, ಆ ಆಟಗಾರರಲ್ಲಿ ಅತ್ಯುತ್ತಮ ಆಟಗಾರರು ಯಾರು ಎಂದು ಆಯ್ಕೆ ಮಾಡುತ್ತಾ ಕೊನೆಗೆ ಎಲ್ಲಾ ನಾಲ್ಕು ಸುತ್ತಿನಿಂದ ಐವರು ಆಟಗಾರರನ್ನು ಆಯ್ಕೆ ಮಾಡಿದರು.

ಮೊದಲ ಸುತ್ತಿನಲ್ಲಿ ಮ್ಯಾಥ್ಯೂ ಹೇಡನ್, ಡೇವಿಡ್ ವಾರ್ನರ್, ವೀರೇಂದ್ರ ಸೆಹ್ವಾಗ್, ಬ್ರೆಂಡನ್ ಮೆಕಲಂ, ಕ್ರಿಸ್ ಗೇಲ್ ಮತ್ತು ಡ್ವೇನ್ ಸ್ಮಿತ್ ರವರಲ್ಲಿ ಬ್ರಾವೋ ರವರು ಕ್ರಿಸ್ ಗೇಲ್ ಅವರನ್ನು ಆಯ್ಕೆ ಮಾಡಿದರು. ಇನ್ನು ಎರಡನೇ ಸುತ್ತಿನಲ್ಲಿ ಮತ್ತೊಬ್ಬ ಆರಂಭಿಕ ರನ್ನು ಆಯ್ಕೆ ಮಾಡಿ ಎಂದು ಹರ್ಷ ಭೋಗ್ಲೆ ರವರು ಶೇನ್ ವ್ಯಾಟ್ಸನ್, ಗೌತಮ್ ಗಂಭೀರ್, ಕೆಎಲ್ ರಾಹುಲ್, ಜಾನಿ ಬೈರ್‌ಸ್ಟೋವ್, ಜೋಸ್ ಬಟ್ಲರ್, ಮತ್ತು ಕ್ರಿಸ್ ಲಿನ್ ರವರ ಹೆಸರುಗಳನ್ನು ನೀಡಿದರು. ಇದರಲ್ಲಿ ಶೇನ್ ವ್ಯಾಟ್ಸನ್ ರವರನ್ನು ಆಯ್ಕೆ ಮಾಡುವ ಮೂಲಕ ಇಬ್ಬರು ಆರಂಭಿಕರನ್ನು ಆಯ್ಕೆಯನ್ನು ಪೂರ್ಣಗೊಳಿಸಿದರು..

ಇನ್ನು ಮೂರನೇ ಸುತ್ತಿನಲ್ಲಿ ಇವರಲ್ಲಿ ಅತ್ಯುತ್ತಮ ಬ್ಯಾಟ್ಸಮನ್ ಯಾರು ಎಂದು ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ, ರಿಷಭ್ ಪಂತ್, ಯುವರಾಜ್ ಸಿಂಗ್, ಬೆನ್ ಸ್ಟೋಕ್ಸ್, ಮತ್ತು ಮೈಕೆಲ್ ಹಸ್ಸಿ ರವರನ್ನು ನೀಡಿದಾಗ ವಿರಾಟ್ ಕೊಹ್ಲಿ ರವರನ್ನು ಆಯ್ಕೆ ಮಾಡುತ್ತೇನೆ, ಆದರೆ ಇವರೆಲ್ಲ ಜೊತೆಗೆ ನಾನು ಎಬಿ ಡಿವಿಲಿಯರ್ಸ್ ರವನ್ನು ಗಣನೆಗೆ ತೆಗೆದುಕೊಂಡು ಅವರನ್ನು ಕೂಡ ಆಯ್ಕೆ ಮಾಡುತ್ತೇನೆ, ವಿರಾಟ್ ಹಾಗೂ ಎಬಿ ಡಿವಿಲಿಯರ್ಸ್ ಇಬ್ಬರು ಶ್ರೇಷ್ಠ ಎಂದರು.

ಕೊನೆಯ ಸುತ್ತಿನಲ್ಲಿ ಫಿನಿಶರ್ ಆಯ್ಕೆ ಮಾಡುವಂತೆ ಎಂ.ಎಸ್. ಧೋನಿ, ಹಾರ್ದಿಕ್ ಪಾಂಡ್ಯ, ಗ್ಲೆನ್ ಮ್ಯಾಕ್ಸ್‌ವೆಲ್, ಆಂಡ್ರೆ ರಸ್ಸೆಲ್ ಮತ್ತು ಕೀರನ್ ಪೊಲಾರ್ಡ್ ರವರ ಹೆಸರುಗಳನ್ನು ನೀಡಿದಾಗ ಅವರಲ್ಲಿ ಎಂಎಸ್ ಧೋನಿ ರವರನ್ನು ಆಯ್ಕೆ ಮಾಡುವ ಮೂಲಕ ತನ್ನ ಸಂಪೂರ್ಣ ಲಿಸ್ಟ್ ಅನ್ನು ಕೊನೆಗೊಳಿಸಿದರು. ಒಟ್ಟಾರೆಯಾಗಿ ಶ್ರೇಷ್ಠ ಇದು ಬ್ಯಾಟ್ಸ್ಮನ್ಗಳ ಹೆಸರು ಈ ಕೆಳಗಿನಂತಿದೆ. ಕ್ರಿಸ್ ಗೇಲ್, ಶೇನ್ ವ್ಯಾಟ್ಸನ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಮತ್ತು ಎಂಎಸ್ ಧೋನಿ