ಬಿಗ್ ಬ್ರೇಕಿಂಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಮಹಾ ಉಡುಗೊರೆ ನೀಡಲು ಸಜ್ಜಾದ ಟ್ರಂಪ್ ! ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಅಮೇರಿಕಾ ದೇಶವು ಹಲವಾರು ವರ್ಷಗಳ ಹಿಂದೆಯೇ ಬಲಿಷ್ಠ ಆರ್ಥಿಕ ದೇಶವಾಗಿ ಹೊರಹೊಮ್ಮಿದೆ. ವಿಶ್ವದಲ್ಲಿಯೇ ಬಲಿಷ್ಠ ಆರ್ಥಿಕತೆಯನ್ನು ಹೊಂದಿರುವ ಕೆಲವೇ ಕೆಲವು ರಾಷ್ಟ್ರಗಳಲ್ಲಿ ಅಮೇರಿಕ ದೇಶ ಕೂಡ ಒಂದು.

ಇದೇ ರೀತಿ ವಿಶ್ವದಾದ್ಯಂತ ಅಭಿವೃದ್ಧಿ ಹೊಂದಿದ ಮತ್ತು ಕೈಗಾರಿಕರಣ ಗೊಂಡ ಆರ್ಥಿಕತೆ ಗಳೆಂದು ದೇಶಗಳನ್ನು ವಿಂಗಡನೆ ಮಾಡಿ 1975 ರಲ್ಲಿ ವಿಶ್ವದ ಬಲಿಷ್ಠ ಆರ್ಥಿಕ ರಾಷ್ಟ್ರಗಳು ಜಿ-7 ಎಂಬ ಗುಂಪನ್ನು ಕಟ್ಟಿಕೊಂಡವು. ಮೊದಲ ವರ್ಷದಲ್ಲಿ ಕೇವಲ ಆರು ದೇಶಗಳು ಇತ್ತಾದರೂ, ಕೆನಡಾ ದೇಶ ಒಂದು ವರ್ಷದ ನಂತರ ಸೇರಿಕೊಂಡಿತ್ತು. ಈ ಗುಂಪು ಆರಂಭಗೊಂಡಾಗ ರಷ್ಯಾ ದೇಶವು ಕೂಡ ಸೇರಿತ್ತು, ಆದರೆ 2014ರಲ್ಲಿ ರಷ್ಯಾ ದೇಶವನ್ನು ಅಮಾನತು ಮಾಡಲಾಗಿತ್ತು. ಪ್ರಸ್ತುತ ಜಿ-7 ಗುಂಪಿನಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್ ದೇಶಗಳು ಇವೆ.

ಇದೀಗ ಇದೇ ಜೂನ್ ತಿಂಗಳಿನಲ್ಲಿ ಶೃಂಗಸಭೆ ಸಭೆಯು ಆರಂಭವಾಗಬೇಕಿತ್ತು, ಆದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಒಪ್ಪಿಕೊಂಡರೂ ಕೂಡ ವಿಶ್ವದ ಎಲ್ಲೆಡೆ ಕೋರೋನ ಪ್ರಭಾವದಿಂದ ಹಲವಾರು ದೇಶಗಳ ಪ್ರತಿನಿಧಿಗಳು ಬರಲು ಸಾಧ್ಯವಿಲ್ಲ ಎಂಬುದನ್ನು ಅರಿತಿರುವ ಟ್ರಂಪ್ ರವರು ಈ ಸಭೆಯನ್ನು ಮುಂದೂಡಿದ್ದಾರೆ. ಇದೇ ಸಂದರ್ಭದಲ್ಲಿ ಮಾತನಾಡಿರುವ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರವರು, ಜಿ-7 ಎಂಬ ಗ್ರೂಪನ್ನು ಜಿ-10 ಅಥವಾ 11 ಮಾಡಬೇಕಾಗಿದೆ. ಈ ಗುಂಪಿನ ಸದಸ್ಯರನ್ನು ಹೆಚ್ಚಿಸಬೇಕಾಗಿದೆ. ನಾನು ಆಸ್ಟ್ರೇಲಿಯಾ, ದಕ್ಷಿಣ ಕೊರಿಯಾ ಹಾಗೂ ಭಾರತ ದೇಶವನ್ನು ಈ ಸಭೆಗೆ ಆಹ್ವಾನಿಸಲು ಇಚ್ಚಿಸುತ್ತೇನೆ. ರಷ್ಯಾ ದೇಶವನ್ನು ವಾಪಸ್ಸು ಕರೆಸಿಕೊಳ್ಳುವ ಇರಾದೆ ಇದೆ ಎಂದು ತಿಳಿಸಿದ್ದಾರೆ.

ಯಾವ ದೇಶಗಳ ಕುರಿತಾದರೂ ಇತರ ದೇಶಗಳು ಸಮ್ಮತಿ ಸೂಚಿಸದೆ ಹೋಗಬಹುದು, ಆದರೆ ಭಾರತ ದೇಶವನ್ನು ಈ ಗುಂಪಿಗೆ ಸೇರಿಸಿಕೊಳ್ಳಲು ಯಾವುದೇ ದೇಶಗಳು ಇಲ್ಲ ಎನ್ನುವುದಿಲ್ಲ ಎಂದು ಹೇಳಲಾಗಿದೆ. ಯಾಕೆಂದರೆ ಈ ಜಿ-7 ದೇಶಗಳೆಲ್ಲವೂ ಭಾರತದ ಜೊತೆ ಉತ್ತಮ ಬಾಂದವ್ಯ ಹೊಂದಿವೆ. ಒಂದು ವೇಳೆ ಅದೇ ನಡೆದಲ್ಲಿ ಭಾರತವು ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ರಾರಾಜಿಸುವುದು ಖಚಿತವಾಗಲಿದೆ. ಈ ಕುರಿತು ನಾವು ಗಮನಿಸಬೇಕಾದ ವಿಷಯವೇನೆಂದರೇ, ಜಿ-7 ಗುಂಪಿನಲ್ಲಿ ಇರುವ ಕೆನಡಾ, ಇಟಲಿ, ಫ್ರಾನ್ಸ್ ಹಾಗೂ ಯುಕೆ ದೇಶಗಳಿಗಿಂತ ಭಾರತದ ಆರ್ಥಿಕತೆ ಮುಂದಿದೆ.

Facebook Comments

Post Author: Ravi Yadav