ಚಿನ್ನದ ಪದಕ ವಿಜೇತ ಟ್ರೈನಿ ಕಾನ್ಸ್ಟೇಬಲ್ ಬೆಂಗಳೂರಿನಲ್ಲಿ ವಲಸಿಗರ ಪ್ರಾಣ ಉಳಿಸಿ ಸಾಹಸ ಮೆರೆದಿದ್ದು ಹೇಗೆ ಗೊತ್ತಾ?

ಚಿನ್ನದ ಪದಕ ವಿಜೇತ ಟ್ರೈನಿ ಕಾನ್ಸ್ಟೇಬಲ್ ಬೆಂಗಳೂರಿನಲ್ಲಿ ವಲಸಿಗರ ಪ್ರಾಣ ಉಳಿಸಿ ಸಾಹಸ ಮೆರೆದಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಸಂಜೆಯಾದರೆ ಬಾರಿ ಗಾಳಿಯ ಸಮೇತ ಮಳೆ ಸುರಿಯುತ್ತಿದೆ. ನಿನ್ನೆ ಸಂಜೆಯು ಕೂಡ ಹಲವಾರು ಕಡೆ ಗಾಳಿ ಸಮೇತ ಭಾರಿ ಮಳೆ ಬಂದಿದೆ.

ಅದೇ ರೀತಿ ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ವಲಸೆ ಕಾರ್ಮಿಕರು ಹಾಗೂ ಕುಟುಂಬದವರಿಗೆ ಆಶ್ರಯ ನೀಡಲು ನಿರ್ಮಾಣ ಮಾಡಿದ್ದ ತಾತ್ಕಾಲಿಕ ಶೆಲ್ಟರ್ ಗಳು ಬಾರಿ ಮಳೆ ಹಾಗೂ ಗಾಳಿಯಿಂದ ಕುಸಿಯ ತೊಡಗಿದವು. ಇದನ್ನು ಕಂಡ ಅಲ್ಲೇ ಇದ್ದ ಪೊಲೀಸ್ ಕಾನ್ಸ್ಟೇಬಲ್ ರವಿಕುಮಾರ್ ಎಂಬುವವರು, ಸಮಯಕ್ಕೆ ಸರಿಯಾದ ಚಾಕಚಕ್ಯತೆ ಮೆರೆದು ಹಲವಾರು ವಲಸಿಗರ ಪ್ರಾಣವನ್ನು ರಕ್ಷಿಸಿದ್ದಾರೆ. ವಿಶೇಷವೇನೆಂದರೆ ರವಿ ಕುಮಾರ್ ರವರು ಇನ್ನು ತರಬೇತಿ ಅವಧಿಯನ್ನು ಕೂಡ ಪೂರ್ಣಗೊಳಿಸಿಲ್ಲ, ತರಬೇತಿ ನಡುವೆಯೇ ಕೆಲಸ ಮಾಡುವ ಸಂದರ್ಭದಲ್ಲಿ ಈ ರೀತಿಯ ಸವಾಲು ಎದುರಾದಾಗ ಯಾವ ರೀತಿ ನಿರ್ವಹಣೆ ಮಾಡಿದ್ದಾರೆ ಎಂಬುದರ ಕುರಿತು ಇಲ್ಲಿದೆ ಮಾಹಿತಿ.

ಪ್ರವಾಸೋದ್ಯಮ ನಿರ್ವಹಣೆಯಲ್ಲಿ MBA ಪದವೀಧರ ರವಿಕುಮಾರ್ ರವರು, ಕುವೆಂಪು ವಿಶ್ವ ವಿದ್ಯಾನಿಲಯದಲ್ಲಿ ಚಿನ್ನದ ಪದಕ ವಿಜೇತರಾಗಿ, ತದನಂತರ ಕಳೆದ ಮೂರು ತಿಂಗಳ ಹಿಂದಷ್ಟೇ ಪೊಲೀಸ್ ಇಲಾಖೆಯನ್ನು ಸೇರಿಕೊಂಡಿದ್ದರು. ತರಬೇತಿಯ ಸಮಯದಲ್ಲಿ ಇವರನ್ನು ವಲಸೆ ಕಾರ್ಮಿಕರ ನಿರ್ವಹಣೆ ಮಾಡಲು ನೇಮಿಸಲಾಗಿತ್ತು. ಇದೇ ಸಮಯದಲ್ಲಿ ಬಾರಿ ಗಾಳಿಯಿಂದ ಶೆಲ್ಟರ್ ಗಳು ಕುಸಿಯ ತೊಡಗಿದಾಗ ಸಮಯಕ್ಕೆ ಸರಿಯಾಗಿ ಚಾಕಚಕ್ಯತೆ ಮೆರೆದು ವಲಸಿಗರನ್ನು ಹೊರಗೆ ತಂದರು.

ಇದೇ ಸಮಯದಲ್ಲಿ ವಲಸಿಗರು ಈಗಾಗಲೇ ಕುಸಿದಿರುವ ಶೆಲ್ಟರ್ ಗಳ ಬಳಿ ಹೋಗಿ ತಮ್ಮ ಚಪ್ಪಲಿ, ಪರ್ಸ್ ಇತ್ಯಾದಿ ತೆಗೆದುಕೊಳ್ಳಲು ಅವಶೇಷಗಳ ಕಡೆ ಹೋಗಲು ಆರಂಭಿಸಿದರು. ಇದರಿಂದ ಸಾಕಷ್ಟು ಕಷ್ಟ ಅನುಭವಿಸಿದ ರವಿಕುಮಾರ್ ಅವರು ವಲಸಿಗರನ್ನು ಅವಶೇಷಗಳ ಕಡೆ ಹೋಗದಂತೆ ಮನವೊಲಿಸಲು ಸಾಕಷ್ಟು ಕಷ್ಟ ಪಟ್ಟರು, ಆದ್ಯಾಗೂ ಕೊನೆಗೆ ಯಶಸ್ವಿಯಾದರು.

ಇದೇ ಸಂದರ್ಭದಲ್ಲಿ, ಶೆಲ್ಟರ್ ನ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದಾಗ ಮತ್ತೊಂದು ಕಡೆ ಮೂವರು ಮಕ್ಕಳು ಹಾಗೂ ಮಹಿಳೆಯೊಬ್ಬರು ಸಿಕ್ಕಿ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ರವಿಕುಮಾರ್ ಅವರು ಕೂಡಲೇ ಮಕ್ಕಳು ಹಾಗೂ ಮಹಿಳೆಯನ್ನು ಸುರಕ್ಷಿತವಾಗಿ ಹೊರಗೆ ತಂದು ಸಾಹಸ ಮೆರೆದಿದ್ದಾರೆ. ಇವರ ಕಾರ್ಯವನ್ನು ಕಂಡ ಶಿವಾಜಿನಗರ ಇನ್ಸ್ಪೆಕ್ಟರ್ ಸಿದ್ದರಾಜು ರವರು, ರವಿಕುಮಾರ್ ಅವರು ಮೊದಲಿನಿಂದಲೂ ಹೀಗೆ ಉತ್ತಮ ಕೆಲಸವನ್ನು ಮಾಡುತ್ತಿದ್ದಾರೆ. ಇನ್ನು ಇವರು ತರಬೇತಿಯನ್ನು ಪೂರ್ಣಗೊಳಿಸಿಲ್ಲ ಎಂದು ಹಾಡಿ ಹೊಗಳಿದ್ದಾರೆ. ಈ ರೀತಿಯ ಘಟನೆ ಉಂಟಾದಾಗ ಆಂಬುಲೆನ್ಸ್ ಹಾಗೂ ಅಗ್ನಿಶಾಮಕ ದಳದವರಿಗೆ ಕಾಯದೆ ಕೂಡಲೇ ಸಮಯ ಪ್ರಜ್ಞೆ ಮೆರೆದು ಎಲ್ಲರ ಪ್ರಾಣ ಉಳಿಸಿದ ರವಿಕುಮಾರ್ ರವರಿಗೆ ನಮ್ಮ ತಂಡದ ಪರವಾಗಿ ಅನಂತ ಅನಂತ ವಂದನೆಗಳು.