ಚೀನಾ-ಭಾರತದ ಗಡಿಯಲ್ಲಿ ಮಹತ್ವದ ವಿದ್ಯಮಾನ- ಹೊಸ ಆದೇಶ ಹೊರಡಿಸಿ ಚೀನಾಗೆ ಶಾಕ್ ನೀಡಿದ ಅಮಿತ್ ಶಾ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ಸುಖಾಸುಮ್ಮನೆ ಭಾರತದ ಗಡಿಯಲ್ಲಿ ಮೂಲ ಸೌಕರ್ಯಗಳ ಯೋಜನೆಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲಿ ಚೀನಾ ದೇಶ ಸುಖಾಸುಮ್ಮನೆ ಗಡಿ ಖ್ಯಾತೆ ತೆಗೆದಿದೆ. ಒಂದು ವೇಳೆ ಚೀನಾ ದೇಶಕ್ಕೆ ಹೊಂದಿಕೊಂಡಿರುವ ಭಾರತದ ಗಡಿಯಲ್ಲಿ ಮೂಲಸೌಕರ್ಯಗಳು ಅಭಿವೃದ್ಧಿಯಾದರೇ ಕಠಿಣ ಸಂದರ್ಭಗಳಲ್ಲಿ ಸೇನಾ ರವಾನೆ ಹಾಗೂ ಇನ್ನಿತರ ಮಹತ್ವದ ಕೆಲಸಗಳು ಸರಾಗವಾಗಿ ನಡೆಯಲಿವೆ ಎಂಬುದು ಚೀನಾ ದೇಶದ ಲೆಕ್ಕಾಚಾರವಾಗಿದೆ.

ಇದೇ ಕಾರಣಕ್ಕಾಗಿ ಹಲವಾರು ದಿನಗಳಿಂದ ಸುಖಸುಮ್ಮನೆ ಭಾರತದ ಜೊತೆ ಗಡಿ ಖ್ಯಾತೆ ತೆಗೆಯುತ್ತಿದೆ. ಹೀಗಿರುವಾಗ ಭಾರತ ದೇಶವು ಕೂಡ ಸುಮ್ಮನೆ ಕೂರದೆ ಮಹತ್ವದ ಆದೇಶ ಹೊರಡಿಸಿದೆ. ಹೌದು, ಇದೀಗ ಕೇಂದ್ರ ಗೃಹ ಸಚಿವಾಲಯವು ಚೀನಾ ಗಡಿಯ ಸಮೀಪ ಸಂಪೂರ್ಣ ರಸ್ತೆ ನಿರ್ಮಾಣವನ್ನು ಅತಿ ವೇಗವಾಗಿ ಪೂರ್ಣಗೊಳಿಸಲು ಜಾರ್ಖಂಡ್ ರಾಜ್ಯದಿಂದ 11,815 ಕಾರ್ಮಿಕರನ್ನು ಒಮ್ಮೆಲೆ 11 ವಿಶೇಷ ರೈಲುಗಳಲ್ಲಿ ಸಾಗಿಸಿ, ಕ್ವಾರಂಟೈನ್ ಕಡ್ಡಾಯ ಮಾಡಿ ಸಾಧ್ಯವಾದಷ್ಟು ಬೇಗ ಕೆಲಸ ಆರಂಭಿಸಲು ಮುಂದಾಗಿದೆ.

ಈ ವಿಷಯವನ್ನು ಈಗಾಗಲೇ ಅಮಿತ್ ಶಾ ರವರು ರೈಲ್ವೆ ಸಚಿವಾಲಯ ಹಾಗೂ ಜಾರ್ಖಂಡ್ ರಾಜ್ಯದಿಂದ ಕಾರ್ಮಿಕರು ಬೇಕಾಗಿರುವ ಕಾರಣ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸಿದ್ದಾರೆ. ಇದಷ್ಟೇ ಅಲ್ಲದೆ ಚೀನಾ ಗಡಿಯ ಬಳಿ ಇನ್ನಿತರ ರಸ್ತೆ ಹಾಗೂ ಸುರಂಗ ನಿರ್ಮಾಣ ಮಾಡಿಕೊಳ್ಳಲು 40,000 ಕಾರ್ಮಿಕರನ್ನು ನೇಮಿಸಲು ಕೇಂದ್ರ ಸರ್ಕಾರ ಆಯೋಜಿಸುತ್ತಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಗುರುವಾರ ತನ್ನ ವರದಿಯಲ್ಲಿ ತಿಳಿಸಿದೆ. ಈ ಮೂಲಕ ಚೀನಾ ದೇಶಕ್ಕೆ ಭಾರತ ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯುವುದಿಲ್ಲ ಎಂಬುದನ್ನು ಮತ್ತೊಮ್ಮೆ ಘಂಟಾಘೋಷವಾಗಿ ಸಾರಿದೆ.

Facebook Comments

Post Author: Ravi Yadav