ಗರುಡ ಪುರಾಣ: ಜೀವನದಲ್ಲಿ ಹಣದ ಕೊರತೆ ಯಾವಾಗ ಉಂಟಾಗುತ್ತದೆ ಹಾಗೂ ನಿರ್ವಹಣೆ ಹೇಗೆ ಎಂಬುದು ನಿಮಗೆ ಗೊತ್ತೇ?

ಗರುಡ ಪುರಾಣ: ಜೀವನದಲ್ಲಿ ಹಣದ ಕೊರತೆ ಯಾವಾಗ ಉಂಟಾಗುತ್ತದೆ ಹಾಗೂ ನಿರ್ವಹಣೆ ಹೇಗೆ ಎಂಬುದು ನಿಮಗೆ ಗೊತ್ತೇ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ನಮ್ಮ ಪುರಾಣಗಳಲ್ಲಿ ಹಲವಾರು ವಿಷಯಗಳನ್ನು ತಿಳಿಸಲಾಗಿದೆ. ಮನುಷ್ಯನ ಜೀವನದ ಪ್ರತಿಯೊಂದು ಭಾಗದ ಬಗ್ಗೆಯೂ ಸ್ಪಷ್ಟ ಚಿತ್ರಣ ನೀಡಲಾಗಿದೆ. ಇನ್ನು ಗರುಡ ಪುರಾಣದಲ್ಲಿಯೂ ಕೂಡ ಹಲವಾರು ವಿಷಯಗಳ ಕುರಿತು ತಿಳಿಸಿಕೊಡಲಾಗಿದೆ.

ಸ್ನೇಹಿತರೇ, ಪ್ರತಿಯೊಬ್ಬ ವ್ಯಕ್ತಿಯ ಆಸೆ ತನ್ನ ಕುಟುಂಬದಲ್ಲಿ ಸಂತೋಷ ಮತ್ತು ಸಮೃದ್ಧಿ ಇರಬೇಕು ಎಂಬುದಾಗಿದೆ, ಹಣದ ಕೊರತೆ ಇರಬಾರದು ಎಂದು ಪ್ರತಿದಿನ ಅಂದು ಕೊಳ್ಳುತ್ತಾರೆ. ಇದಕ್ಕಾಗಿ, ಗರುಡ ಪುರಾಣದಲ್ಲಿ ಕೆಲವು ವಿಷಯಗಳನ್ನು ಉಲ್ಲೇಖಿಸಲಾಗಿದೆ, ಅದನ್ನು ಅನುಸರಿಸದಿದ್ದರೆ ವ್ಯಕ್ತಿಯು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗಿದೆ.

ಕೊಳಕು ಬಟ್ಟೆಗಳನ್ನು ಧರಿಸುವುದು: ಗರುಡ ಪುರಾಣದಲ್ಲಿ, ಲಕ್ಷ್ಮಿ ದೇವಿಯು ಸ್ವಚ್ಛವಾಗಿ ಬದುಕದ ವ್ಯಕ್ತಿಯನ್ನು ತ್ಯಜಿಸುತ್ತಾರೆ ಎಂದು ತಿಳಿಸಲಾಗಿದೆ, ಇದನ್ನು ಯಾಕೆ ನಂಬಬೇಕು ಎಂದು ಕೊಂಡಿದ್ದೀರಾ? ನೀವೇ ಆಲೋಚಿಸಿ ಸ್ನೇಹಿತರೇ, ಸ್ವಚ್ಛವಾಗಿರುವವರ ಬಳಿ ಎಲ್ಲರೂ ವ್ಯಾಪಾರ ಮಾಡಲು ಬಯಸುತ್ತಾರೆ, ಅಷ್ಟೇ ಯಾಕೆ ಸ್ವಚ್ಛವಾಗಿರದೇ ಇದ್ದರೇ ಆತ್ಮೀಯರು ಕೂಡ ನಿಮ್ಮನ್ನು ಭೇಟಿಯಾಗುವುದಿಲ್ಲ. ಅದು ವ್ಯವಹಾರವಾಗಲಿ ಅಥವಾ ಯಾವುದೇ ಕೆಲಸವಾಗಿರಲಿ ಸ್ವಚ್ಛತೆಯಿಂದ ಎಲ್ಲರೂ ಪ್ರಭಾವಿತರಾಗುತ್ತಾರೆ.

ಕಠಿಣವಾಗಿ ಮಾತನಾಡುವವರು: ಕಠಿಣವಾಗಿ ಮಾತನಾಡುವ ವ್ಯಕ್ತಿಯೊಂದಿಗೆ ಸಹ ಲಕ್ಷ್ಮಿ ನಿಲ್ಲುವುದಿಲ್ಲ. ಸಣ್ಣ ವಿಷಯಗಳಲ್ಲಿ ಕಿರುಚುವುದು ಮತ್ತು ಎಲ್ಲದಕ್ಕೂ ಜಗಳವಾಡಲು ಪ್ರಾರಂಭಿಸುವವರನ್ನು ಲಕ್ಷ್ಮಿ ದೇವಿಯು ಎಂದಿಗೂ ಆಶೀರ್ವದಿಸುವುದಿಲ್ಲ. ಆದ್ದರಿಂದ ಮಾತಿನಲ್ಲಿ ಯಾವಾತ್ತಿದ್ದರು ಮಾಧುರ್ಯ ಇರಬೇಕು ಎಂದು ಗರುಡ ಪುರಾಣದಲ್ಲಿ ತಿಳಿಸಲಾಗಿದೆ.

ಹೆಚ್ಚು ತಿನ್ನುವವರು: ಗರುಡ ಪುರಾಣದ ಪ್ರಕಾರ, ಹೆಚ್ಚು ಆಹಾರವನ್ನು ಸೇವಿಸುವ ಜನರಿಗೆ ಲಕ್ಷ್ಮಿ ಇಲ್ಲ. ಜೀವನ ನಿರ್ವಹಣೆಯ ವಿಷಯದಲ್ಲಿ, ಹೆಚ್ಚು ಆಹಾರವನ್ನು ಸೇವಿಸುವವರು ಖಂಡಿತವಾಗಿಯೂ ಬೊಜ್ಜು ಹೊಂದಿರುತ್ತಾರೆ. ಸ್ಥೂಲಕಾಯತೆಯು ಶ್ರಮಿಸುವುದನ್ನು ತಡೆಯುತ್ತದೆ ಮತ್ತು ಇದರಿಂದ ಜನರು ಸೋಮಾರಿಯಾಗುತ್ತಾರೆ. ಲಕ್ಷ್ಮಿ ದೇವಿಯು ತಮ್ಮ ಸ್ವಂತ ಪರಿಶ್ರಮದ ಬಲದಿಂದ ಯಶಸ್ಸನ್ನು ಸಾಧಿಸಲು ಪ್ರಯತ್ನಿಸುವ ಜನರೊಂದಿಗೆ ಮಾತ್ರ ವಾಸಿಸುತ್ತಾರೆ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗುವವರು: ಒಬ್ಬ ವ್ಯಕ್ತಿಯು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಮಲಗಬಾರದು ಎಂದು ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ. ಇದರಿಂದ ಲಕ್ಷ್ಮಿ ದೇವಿಗೆ ಕೋಪ ಬರುತ್ತದೆ. ಈ ಸಮಯದಲ್ಲಿ ಮಲಗುವ ಜನರು ಬೇಜವಾಬ್ದಾರಿ ಮತ್ತು ಸೋಮಾರಿಯಾದವರು ಎಂದು ನಂಬಲಾಗಿದೆ.

ಹಲ್ಲುಗಳನ್ನು ಕೊಳಕು ಇಡುವುದು: ಹಲ್ಲುಗಳನ್ನು ಯಾವಾಗಲೂ ಸ್ವಚ್ಛವಾಗಿಡಬೇಕೆಂದು ವೈದ್ಯರು ಕೂಡ ಶಿಫಾರಸು ಮಾಡುತ್ತಾರೆ. ಏಕೆಂದರೆ ಕೊಳಕು ಹಲ್ಲುಗಳಿಂದ ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಬರುವ ಸಾಧ್ಯತೆಗಳಿವೆ. ಕೊಳಕು ಹಲ್ಲುಗಳಿಂದ ವ್ಯಕ್ತಿಯು ಅನಾರೋಗ್ಯ ಮತ್ತು ಸೋಮಾರಿಯಾಗುವ ಸಾಧ್ಯತೆ ಹೆಚ್ಚು. ಗರುಡ ಪುರಾಣದ ಪ್ರಕಾರ, ಲಕ್ಷ್ಮಿ ಅಂತಹ ವ್ಯಕ್ತಿಯೊಂದಿಗೆ ಎಂದಿಗೂ ನಿಲ್ಲುವುದಿಲ್ಲ.