ಸಾರ್ವಕಾಲಿಕ ಶ್ರೇಷ್ಠ ಆರ್ಸಿಬಿ ತಂಡಗಳನ್ನು ಘೋಷಣೆ ಮಾಡಿದ ESPN ಹಾಗೂ ಆಕಾಶ್ ಚೋಪ್ರಾ ! ಹೇಗಿದ್ದಾವೆ ಗೊತ್ತಾ ತಂಡಗಳು?

ನಮಸ್ಕಾರ ಸ್ನೇಹಿತರೇ, ವಿಶ್ವದ ಯಾವುದೇ ಫ್ರಾಂಚೈಸಿಗಳಿಗೆ ಇಲ್ಲದ ನಿಷ್ಠಾವಂತ ಅಭಿಮಾನಿಗಳನ್ನು ಹೊಂದಿರುವ ಆರ್ಸಿಬಿ ತಂಡವು ಕಳೆದ 12 ಆವೃತ್ತಿಗಳಲ್ಲಿ ಮೂರು ಬಾರಿ ಫೈನಲ್ ತಲುಪಿದೆ. ದುರದೃಷ್ಟವಶಾತ್ ಒಮ್ಮೆಯೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ.

ಆದರೂ ಕೂಡ ಯಾವೊಬ್ಬ ಅಭಿಮಾನಿಗಳು ಆರ್ಸಿಬಿ ತಂಡವನ್ನು ಬೆಂಬಲಿಸುವುದನ್ನು ಇಲ್ಲಿಯವರೆಗೂ ನಿಲ್ಲಿಸಿಲ್ಲ. ಇಡೀ ವಿಶ್ವದ ಇತರ ಟಿ20 ಲೀಗ್ ಗಳ ಫ್ರಾಂಚೈಸಿ ತಂಡಗಳಿಗೆ ಹೋಲಿಸಿಕೊಂಡರೇ ಸದಾ ಆರ್ಸಿಬಿ ತಂಡ ಹಾಗೂ ಆರ್ಸಿಬಿ ಅಭಿಮಾನಿಗಳು ಭರ್ಜರಿ ಸದ್ದು ಮಾಡುತ್ತಿರುತ್ತಾರೆ. ಯಾವುದೇ ಕ್ರಿಕೆಟ್ ಆಟಗಾರನಾಗಲಿ ಆರ್ಸಿಬಿ ತಂಡದಲ್ಲಿ ಸ್ಥಾನ ಸಿಕ್ಕಿದೆ ಎಂದರೆ ಬಹಳ ಉತ್ಸಾಹದಿಂದ ಆಟವಾಡಲು ತುದಿಗಾಲಲ್ಲಿ ನಿಂತಿರುತ್ತಾರೆ.

ಇನ್ನು ಈ ತಂಡದಲ್ಲಿ ಕೆಲವು ಆಟಗಾರರು ಮಾತ್ರ ಕಾಯಂ ಸ್ಥಾನ ಪಡೆದುಕೊಂಡಿದ್ದಾರೆ, ಕೆಲವರು ಕೆಲ ವರ್ಷಗಳ ಕಾಲ ಉತ್ತಮ ಪ್ರದರ್ಶನ ನೀಡಿ, ಇದೀಗ ಇತರ ಫ್ರಾಂಚೈಸಿಗಳ ತಂಡಗಳ ಭಾಗವಾಗಿದ್ದಾರೆ. ಹೀಗೆ ಎಲ್ಲಾ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಕನಿಷ್ಠ 20 ಟಿ-20 ಪಂದ್ಯಗಳಲ್ಲಿ ಆರ್ ಸಿ ಬಿ ತಂಡವನ್ನು ಪ್ರತಿನಿಧಿಸಿರುವ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಸಾರ್ವಕಾಲಿಕ ಶ್ರೇಷ್ಠ ಆರ್ಸಿಬಿ ತಂಡವನ್ನು ಕ್ರಿಕೆಟ್ ದಿಗ್ಗಜ ಸಂಸ್ಥೆ ESPN ಘೋಷಣೆ ಮಾಡಿದೆ. ಇದರ ಜೊತೆಗೆ ಆಕಾಶ್ ಚೋಪ್ರಾ ರವರು ಕೂಡ ಸಾರ್ವಕಾಲಿಕ ಶ್ರೇಷ್ಠ ಆರ್ಸಿಬಿ ತಂಡವನ್ನು ಘೋಷಣೆ ಮಾಡಿದ್ದು, ಯಾವುದು ಉತ್ತಮ್ಮ ತಂಡ ಎಂದು ನಿಮ್ಮ ಅಭಿಪ್ರಾಯ ತಿಳಿಸಿ.

ESPN ಸಂಸ್ಥೆಯ ಸಾರ್ವಕಾಲಿಕ ಆರ್‌ಸಿಬಿ ಇಲೆವೆನ್:
ಕ್ರಿಸ್ ಗೇಲ್, ಪಾರ್ಥಿವ್ ಪಟೇಲ್, ವಿರಾಟ್ ಕೊಹ್ಲಿ(ನಾಯಕ), ಎಬಿ ಡಿವಿಲಿಯರ್ಸ್, ರಾಸ್ ಟೇಲರ್, ರಾಬಿನ್ ಉತ್ತಪ್ಪ, ವಿನಯ್ ಕುಮಾರ್, ಮಿಚೆಲ್ ಸ್ಟಾರ್ಕ್, ಅನಿಲ್ ಕುಂಬ್ಳೆ,ಎಸ್ ಅರವಿಂದ್, ಯುಜ್ವೇಂದ್ರ ಚಾಹಲ್.

ಆಕಾಶ್ ಚೋಪ್ರಾ ಅವರ ಸಾರ್ವಕಾಲಿಕ ಆರ್‌ಸಿಬಿ ಇಲೆವೆನ್:
ವಿರಾಟ್ ಕೊಹ್ಲಿ (ನಾಯಕ), ಕ್ರಿಸ್ ಗೇಲ್, ಕೆಎಲ್ ರಾಹುಲ್ (WK), ಎಬಿ ಡಿವಿಲಿಯರ್ಸ್, ರಾಸ್ ಟೇಲರ್, ರಾಬಿನ್ ಉತ್ತಪ್ಪ, ಮಿಚೆಲ್ ಸ್ಟಾರ್ಕ್, ಅನಿಲ್ ಕುಂಬ್ಳೆ, ಯುಜ್ವೇಂದ್ರ ಚಹಲ್, ಆರ್ ವಿನಯ್ ಕುಮಾರ್, ಜಹೀರ್ ಖಾನ್

Facebook Comments

Post Author: Ravi Yadav