5 ದಿನಗಳ ಟ್ರಂಪ್ ಪ್ರಯತ್ನಕ್ಕೆ ಸಿಕ್ಕಿತು ಫಲ ! ಚೀನಾಗೆ ಬಿಗ್ ಶಾಕ್ ನೀಡಿದ ಬ್ರಿಟನ್ ! ಮಾಡಿದ್ದೇನು ಗೊತ್ತಾ?

5 ದಿನಗಳ ಟ್ರಂಪ್ ಪ್ರಯತ್ನಕ್ಕೆ ಸಿಕ್ಕಿತು ಫಲ ! ಚೀನಾಗೆ ಬಿಗ್ ಶಾಕ್ ನೀಡಿದ ಬ್ರಿಟನ್ ! ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಅಮೆರಿಕ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರು, ಚೀನಾ ದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಲು ನಿರ್ಧಾರ ಮಾಡಿ ಹಲವಾರು ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಚೀನಾ ದೇಶದ ಹಲವಾರು ಪ್ರೈವೇಟ್ ಕಂಪನಿಗಳನ್ನು ಈಗಾಗಲೇ ಮುಳುಗಿಸುವತ್ತಾ ದಾಪುಗಾಲಿಟ್ಟಿದ್ದಾರೆ. ಇದೀಗ ಕೇವಲ ಅಮೇರಿಕಾ ದೇಶವಲ್ಲ, ಬದಲಾಗಿ ಜಗತ್ತು ಚೀನಾ ದೇಶದ ಕೈಬಿಡಬೇಕು ಎಂದು ಡೊನಾಲ್ಡ್ ಟ್ರಂಪ್ ರವರು ಪಣತೊಟ್ಟಿದ್ದಾರೆ.

ಇದರ ಭಾಗವಾಗಿಯೇ ಟ್ರಂಪ್ ರವರು ಬ್ರಿಟನ್ ದೇಶದ ಮೇಲೆ ಕಳೆದ ಐದು ದಿನಗಳಿಂದ ಚೀನಾ ದೇಶದ ಮಹಾನ್ ಕನಸಾಗಿರುವ 5G ತಂತ್ರಜ್ಞಾನದ ಮೇಲೆ ನಿಷೇಧ ಹೇರಬೇಕು ಎಂದು ಬ್ರಿಟನ್ ದೇಶಕ್ಕೆ ಒತ್ತಾಯಿಸಿದರು. ಈಗಾಗಲೇ ಭದ್ರತಾ ವಿಷಯದ ಬಗ್ಗೆ ಆಲೋಚನೆ ಮಾಡಿ ಜಪಾನ್, ಆಸ್ಟ್ರೇಲಿಯಾ ನ್ಯೂಜಿಲೆಂಡ್ ಹಾಗೂ ಅಮೆರಿಕಾ ದೇಶಗಳು ಚೀನಾ ದೇಶದ ಹೂವಾಯ್ ಕಂಪನಿಯ 5G ತಂತ್ರಜ್ಞಾನವನ್ನು ನಿಷೇಧಿಸಿವೆ. ಹೀಗಿರುವಾಗ ಬ್ರಿಟನ್ ದೇಶ ಕೂಡ ಇದೇ ರೀತಿ ನಿರ್ಣಯ ಕೈಗೊಳ್ಳಬೇಕು ಎಂದು ಒತ್ತಾಯ ಮಾಡಿದ್ದರು.

ನೇರವಾಗಿ ನಿಮಗೆ ಚೀನಾ ದೇಶ ಬೇಕೋ ಅಥವಾ ಅಮೇರಿಕ ದೇಶ ಬೇಕೋ ಆಯ್ಕೆ ಮಾಡಿಕೊಳ್ಳಿ ಎಂದು ಟ್ರಂಪ್ ರವರು ಬಹಿರಂಗವಾಗಿ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದರು. ಇದೀಗ ಇನ್ನೇನು ಕೆಲವು ದಿನಗಳಲ್ಲಿ ಅಮೆರಿಕಾ ದೇಶದಲ್ಲಿ ಅಧ್ಯಕ್ಷ ಚುನಾವಣೆ ನಡೆಯಲಿದೆ, ಆದರೆ ಅದಕ್ಕೂ ಮುಂಚಿತವಾಗಿ ಹಲವಾರು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಟ್ರಂಪ್ ಸಹಿ ಹಾಕಲು ನಿರ್ಧಾರ ಮಾಡಿದ್ದು, ಬ್ರಿಟನ್ ದೇಶಕ್ಕೆ ಹಲವಾರು ರಿಯಾಯಿತಿಗಳನ್ನು ನೀಡಲು ಸಿದ್ಧರಾಗಿದ್ದಾರೆ. ಇದನ್ನು ಗಮನಿಸಿದ ಬ್ರಿಟನ್ ದೇಶ ಚೀನಾ ದೇಶದ ಹೂವಾಯ್ ಕಂಪನಿಗೆ ನಿಷೇಧ ಹೇರಲು ಮುಂದಾಗಿದೆ.

ಅಮೆರಿಕ ಸ್ನೇಹ ಸಂಬಂಧವನ್ನು ಯಾವುದೇ ಕಾರಣಕ್ಕೂ ಬಿಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಅರಿತಿರುವ ಬ್ರಿಟನ್ ಪ್ರಧಾನಿ ಜಾನ್ಸನ್ ರವರು, ಮೊದಲಿಗೆ ಭಾಗಶಹ ಒತ್ತಡ ಹೇರುತ್ತೇವೆ ಎಂದರು, ಆದರೆ ಡೊನಾಲ್ಡ್ ಟ್ರಂಪ್ ಇದಕ್ಕೆ ಒಪ್ಪದೇ ಇರುವ ಕಾರಣ ಮುಂದಿನ ಮೂರು ವರ್ಷಗಳ ಕಾಲ ಯಾವುದೇ ಕಾರಣಕ್ಕೂ ಚೀನಾ ದೇಶದ ಹೂವೈ ಕಂಪನಿ ಇಲ್ಲಿ ಯಾವುದೇ ರೀತಿಯ 5G ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಂತೆ ಇಲ್ಲ ಎಂದು ನಿಷೇಧ ಹೇರಲು ಮುಂದಾಗಿದ್ದಾರೆ. ಈ ಮೂಲಕ ವರ್ಷಕ್ಕೆ ಒಂದು ಲಕ್ಷ ಕೋಟಿಗೂ ಹೆಚ್ಚು ಹಣ ಗಳಿಸುವ ಹೂವೈ ಕಂಪನಿ ಮುಳುಗುವ ಹಂತಕ್ಕೆ ಬಂದು ತಲುಪುವುದು ಖಚಿತವಾಗಲಿದೆ.