ಮನಸಿದ್ದರೆ ಮಾರ್ಗ ಎಂಬುದನ್ನು ನಿರೂಪಿಸಿದ ಪಾನಿಪುರಿ ವ್ಯಾಪಾರಿ! ಲಾಕ್ ಡೌನ್ ನಲ್ಲಿ ಮಾಡಿದ ಕೆಲಸಕ್ಕೆ ದೇಶದೆಲ್ಲೆಡೆ ಪ್ರಶಂಸೆಗಳ ಸುರಿಮಳೆ ! ಅಷ್ಟಕ್ಕೂ ಈತ ಮಾಡಿದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಮನಸ್ಸಿದ್ದರೆ ಮಾರ್ಗ ಎಂಬುವ ಗಾದೆ ಮಾತಿಗೆ ಇದೀಗ ಈ ಪಾನಿಪುರಿ ವ್ಯಾಪಾರಿ ಅರ್ಥ ತುಂಬಿದ್ದಾರೆ. ನಿಮಗೆಲ್ಲರಿಗೂ ತಿಳಿದಿರುವಂತೆ ಕೊರೊನ ಹರಡುವಿಕೆಯನ್ನು ತಡೆಯಲು ಇಡೀ ದೇಶವೇ ಹಲವಾರು ದಿನಗಳ ಕಾಲ ಲಾಕ್ ಡೌನ್ ಆಗಿತ್ತು. ಅಧಿಕೃತವಾಗಿ ಬಹುತೇಕ ವ್ಯಾಪಾರಗಳು ನಿಂತು ಹೋಗಿದ್ದವು, ಅಗತ್ಯವಾದ ಮೆಡಿಕಲ್ ಶಾಪ್ಸ್, ದಿನಸಿ ಅಂಗಡಿಗಳು ಬಿಟ್ಟರೇ ಯಾವುದೇ ವ್ಯಾಪಾರಗಳು ಇಡೀ ದೇಶದಲ್ಲಿ ನಡೆದಿಲ್ಲ.

ಅದರಲ್ಲಿಯೂ ಮೊದಲಿಗೆ ಬಾಗಿಲು ಮುಚ್ಚಿದ್ದು ಬೀದಿಬದಿ ವ್ಯಾಪಾರಿಗಳು. ಚಾಟ್ಸ್ ಅಂಗಡಿ ಸೇರಿದಂತೆ ಇನ್ಯಾವುದೇ ಅಂಗಡಿಗಳು ಇಲ್ಲಿಯವರೆಗೂ ತೆರೆದಿಲ್ಲ, ಹೋಟೆಲ್ ಗಳಲ್ಲಿ ಪಾರ್ಸೆಲ್ ಗೆ ಅವಕಾಶ ನೀಡಿರುವ ಕಾರಣ ಹಾಗೋ ಹೀಗೋ ಕೊಂಚ ವ್ಯಾಪಾರ ಮಾಡಿ ಕೊಳ್ಳುತ್ತಿದ್ದಾರೆ. ಈಗ ಇವೆಲ್ಲ ಯಾಕೆ ಹೇಳುತ್ತಿದ್ದಾರೆ ಎಂದು ಆಲೋಚನೆ ಮಾಡುತ್ತಿದ್ದೀರಾ? ಕೆಳಗಡೆ ನೋಡಿ ನಿಮಗೆ ತಿಳಿಯುತ್ತದೆ.

ಆದರೆ ಅದಕ್ಕೂ ಮುನ್ನ ನೆನಪಿಡಿ, ಏನು ಆಗುವುದಿಲ್ಲ ಎಂದು ಕೈಕಟ್ಟಿ ಕುಳಿತುಕೊಳ್ಳುವ ಮುನ್ನ ಏನಾದರೂ ಮಾಡಲೇಬೇಕು ಎಂಬ ಮನೋಶಕ್ತಿ ಇದ್ದರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಈ ಘಟನೆಯೇ ಉದಾಹರಣೆ.

ಇದೇ ಲಾಕ್ ಡೌನ್ ಕಾರಣದಿಂದ ಒಂದು ಅಪಾರ್ಟ್ಮೆಂಟ್ ಮುಂದೆ ಪಾನಿಪುರಿ ಮಾರುತ್ತಿದ್ದ ಯುವಕನನ್ನು ಕೂಡ ಪಾನಿಪುರಿ ಮಾರದಂತೆ ತಡೆಯಲಾಗಿತ್ತು. ಆತ ಅದೇ ಜಾಗದಲ್ಲಿ ನಾಲ್ಕೈದು ವರ್ಷಗಳಿಂದ ಪಾನಿಪುರಿ ಮಾರಿಕೊಂಡು ಜೀವನ ನಡೆಸುತ್ತಿದ್ದ.

ಆತ ಪಾನಿಪುರಿ ಮಾರುತ್ತಿದ್ದ ಅಪಾರ್ಟ್ಮೆಂಟ್ ನಲ್ಲಿ ಒಬ್ಬರು ಸಾಫ್ಟ್ವೇರ್ ಇಂಜಿನಿಯರ್ ಇದ್ದರು. ಅವರು ರೆಗ್ಯುಲರ್ ಆಗಿ ಆ ಯುವಕನ ಬಳಿ ಪಾನಿ ಪುರಿ ತಿನ್ನುತ್ತಿದ್ದರು. ಆದರೆ ಲಾಕ್ ಡೌನ್ ಆದಮೇಲೆ ಆತ ಕಣ್ಣಿಗೆ ಕಾಣಿಸಲಿಲ್ಲ. ಆಗ ಆ ಸಾಫ್ಟ್ವೇರ್ ಇಂಜಿನಿಯರ್, ಪಾಪ ನಮಗೆ ಹೇಗೋ ಸಂಬಳ ಬರುತ್ತದೆ. ಆತ ಇಲ್ಲಿ ಪಾನಿಪುರಿ ಮಾರಿ ಜೀವನ ಸಾಗಿಸುತ್ತಿದ್ದ, ಈಗ ಜೀವನ ಹೇಗೆ ಸಾಗಿಸುತ್ತಿದ್ದನೋ ಎಂದು ಕೊಂಡರು.

ಇದಾದ ಬಳಿಕ ಇದೀಗ ಲಾಕ್ ಡೌನ್ ಹಂತ ಹಂತವಾಗಿ ತೆರವುಗೊಳ್ಳುತ್ತಿರುವಾಗ ಆ ಸಾಫ್ಟ್ವೇರ್ ಇಂಜಿನಿಯರ್ ಅಗತ್ಯವಾದ ವಸ್ತುಗಳನ್ನು ಕೊಂಡು ಕೊಳ್ಳಲು ಅಂಗಡಿಗೆ ತೆರಳುತ್ತಿರುವಾಗ ಆತ ಕಣ್ಣಿಗೆ ಬೀಳುತ್ತಾನೆ. ಕೂಡಲೇ ಆತನನ್ನು ಕರೆದು, ಹಣ ನೀಡಲು ಮುಂದಾಗಿ ನೀನು ನನಗೆ ಕಾಣಿಸಲಿಲ್ಲ, ಎಷ್ಟೋ ದಿನದಿಂದ ಕೊಡಬೇಕು ಎಂದು ಕೊಂಡಿದ್ದೆ ಎನ್ನುತ್ತಾರೆ.

ಅದಕ್ಕೆ ಆತ ಬೇಡ ಬೇಡ ಎನ್ನುತ್ತಾನೆ, ನನಗೆ ಅರ್ಥ ವಾಗುತ್ತದೆ ನಿನ್ನ ವ್ಯಾಪಾರ ನಿಂತುಹೋಗಿದೆ. ನಿನಗೆ ಉಚಿತವಾಗಿ ಬೇಡ ಅನಿಸಿದರೇ, ನಿನ್ನ ವ್ಯಾಪಾರ ಎಲ್ಲ ಸರಿ ಹೋದ ಮೇಲೆ ಮರಳಿಸು ಎನ್ನುತ್ತಾರೆ. ಇದಕ್ಕೆ ಆತ, ಇಲ್ಲಾ ಸರ್, ಲಾಕ್ ಡೌನ್ ಬೇಗ ತೆರವುಗೊಳಿಸುವುದಿಲ್ಲ ನನಗೆ ತಿಳಿಯಿತು, ಮಾಧ್ಯಮಗಳಲ್ಲಿ ನೋಡಿದೆ. ಆಗ ನನ್ನ ಬಳಿ ಹಣವಿರಲಿಲ್ಲ. ಕೈಯಲ್ಲಿದ್ದ ಹಣ ಮೂರ್ನಾಲ್ಕು ದಿನಗಳಲ್ಲಿ ಕಾಲಿಯಾಗುತಿತ್ತು, ಅದೇ ಕಾರಣಕ್ಕೆ ಪಾನಿಪುರಿ ಜನರಿಗೆ ಬೇಡವಾಗಿರಬಹುದು, ಆದರೆ ಮಾಸ್ಕ್ ಬೇಕಾಗುತ್ತದೆ ಎಂದು ಅರಿತು ಕೊಂಡು ಮಾಸ್ಕ್ ಮನೆಯಲ್ಲಿಯೇ ಹೊಲೆದು ಮಾರುತ್ತಿದ್ದೇನೆ ಜೀವನಕ್ಕೆ ಏನು ತೊಂದರೆ ಇಲ್ಲಾ ಎಂದು ಉತ್ತರ ನೀಡುತ್ತಾನೆ.

ಇದನ್ನು ಕೇಳಿದ ಸಾಫ್ಟ್ವೇರ್ ಇಂಜಿನಿಯರ್ ಗೆ ಒಂದೆಡೆ ಆಶ್ಚರ್ಯ ಮತ್ತೊಂದೆಡೆ ಸಂತೋಷ. ಇದೀಗ ಈ ಘಟನೆಯನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದು, ಎಲ್ಲರೂ ಪಾನಿಪುರಿ ಯುವಕನಿಗೆ ಪ್ರಶಂಸೆಗಳ ಸುರಿಮಳೆಯನ್ನು ಸುರಿಸಿದ್ದಾರೆ.

Facebook Comments

Post Author: Ravi Yadav