ಹನುಮಂತ vs ಶ್ರೀ ರಾಮ : ಮಹಾನ್ ಶ್ರೀ ರಾಮನು ಸೋತ ಏಕೈಕ ಯುದ್ಧ ಯಾವುದು ಗೊತ್ತಾ?

ಹನುಮಂತ vs ಶ್ರೀ ರಾಮ : ಮಹಾನ್ ಶ್ರೀ ರಾಮನು ಸೋತ ಏಕೈಕ ಯುದ್ಧ ಯಾವುದು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಸಾಕ್ಷಾತ್ ಶ್ರೀ ವಿಷ್ಣುವಿನ ಅವತಾರವಾದ ಶ್ರೀ ರಾಮ ಎಂತಹ ಶಕ್ತಿವಂತ ಎಂಬುದು ನಿಮಗೆ ತಿಳಿದಿದೆ, ಹೀಗಿರುವಾಗ ರಾಮನು ಯಾವುದಾದರೂ ಯುದ್ಧದಲ್ಲಿ ಸೋತಿದ್ದಾನೆಯೇ? ಎಂಬ ಪ್ರಶ್ನೆ ಕೆಲವರಲ್ಲಿ ಮೂಡುತ್ತದೆ. ಇನ್ನು ಕೆಲವರು ಏನು ರಾಮನಿಗೆ ಸೋಲೇ? ಸಾಧ್ಯವೇ ಇಲ್ಲ ಎನ್ನುತ್ತಾರೆ. ಆದರೆ ಆ ಒಂದು ಯುದ್ಧದಲ್ಲಿ ಮಾತ್ರ ರಾಮ ಸೋತಿದ್ದಾನೆ ಎಂದರೆ ನೀವು ನಂಬಲೇಬೇಕು. ಈಗ ಆ ಯುದ್ಧ ಹಾಗೂ ಸನ್ನಿವೇಶ ಹೇಗಿತ್ತು ಎಂಬುದರ ಬಗ್ಗೆ ನಾವು ತಿಳಿದು ಕೊಳ್ಳೋಣ.

ಒಮ್ಮೆ ಕಾಶಿಯ ರಾಜನಾದ ಸೂರತ್ ನು ಶ್ರೀ ರಾಮನನ್ನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಾನೆ, ಮತ್ತು ಅಲ್ಲಿಂದ ತೆರಳುವಾಗ ಗುರುಗಳಾದ ವಿಶ್ವಾಮಿತ್ರ ರವರನ್ನು ಕಡೆಗಣಿಸುತ್ತಾನೆ. ನಿಮಗೆ ತಿಳಿದಿರುವಂತೆ ಹಿಂದೂ ಸಂಸ್ಕೃತಿಯಲ್ಲಿ ಗುರುಗಳ ಸ್ಥಾನ ದೇವರಿಗಿಂತಲೂ ಹೆಚ್ಚು. ಹೀಗಿರುವಾಗ ಇದನ್ನು ಕಂಡ ಶ್ರೀರಾಮನಿಗೆ ಗುರುಗಳಿಗೆ ಆದ ಅವಮಾನವನ್ನು ಸಹಿಸಲಾಗಲಿಲ್ಲ. ಇದರಿಂದ ಕೋಪ ಗೊಂಡ ಶ್ರೀ ರಾಮನು ರಾಜ ಸೂರತ್ ನನ್ನು ಇಹಲೋಕ ತ್ಯಜಿಸುವಂತೆ ಮಾಡುತ್ತೇನೆ ಎಂದು ಗುರುವಿಗೆ ಭರವಸೆ ನೀಡಿ ಹೊರಟನು.

ಈ ವಿಷಯ ತಿಳಿದ ಕೂಡಲೇ ರಾಜ ಸೂರತ್ ಗೆ ಶ್ರೀ ರಾಮನಿಂದ ನನ್ನ ಜೀವ ಕಾಪಾಡಿಕೊಳ್ಳಲು ಅಸಾಧ್ಯ ಏನು ಮಾಡುವುದು ಎಂದು ಆಲೋಚನೆಯಲ್ಲಿ ತೊಡಗಿಕೊಂಡಿದ್ದಾಗ ಹನುಮಂತನ ತಾಯಿ ನೆನಪಾಗುತ್ತಾರೆ. ಕೂಡಲೇ ಹನುಮಂತನ ತಾಯಿಯ ಬಳಿ ತೆರಳಿ ಶ್ರೀ ರಾಮನ ಹೆಸರು ಹೇಳದೇ ನನ್ನ ಪ್ರಾಣವನ್ನು ರಕ್ಷಿಸಿ ಎಂದು ಬೇಡಿಕೊಳ್ಳುತ್ತಾನೆ. ಹನುಮಂತನ ತಾಯಿ ಸರಿ, ನಿನ್ನ ಪ್ರಾಣವನ್ನು ರಕ್ಷಿಸುತ್ತೇನೆ ಎಂದು ಹೇಳಿ ರಾಜ ಸೂರತ್ ನನ್ನು ರಕ್ಷಿಸಲು ಹನುಮನಿಗೆ ಸೂರತ್ ಗೆ ಏನೂ ಆಗದಂತೆ ನೋಡಿಕೊಳ್ಳಲು ಹೇಳುತ್ತಾಳೆ.

ತಾಯಿಯ ಮಾತನ್ನು ಹನುಮಂತ ಒಪ್ಪಿಕೊಂಡು ಸೂರತ್ ನನ್ನು ಕಾಪಾಡುವುದಾಗಿ ತಾಯಿಗೆ ಮಾತು ನೀಡುತ್ತಾನೆ. ಮಾತು ನೀಡಿದ ಕೆಲವೇ ಕೆಲವು ಸಮಯದಲ್ಲಿ ಶ್ರೀರಾಮನು ಸೂರತ್ ನನ್ನು ಕೊಲ್ಲಲು ಬಂದಾಗ, ಹನುಮಾನ್ ಸ್ವತಹ ಶ್ರೀ ರಾಮನನ್ನು ನೋಡಿ ನಾನು ಮಾತು ನೀಡಿ ತಪ್ಪು ಮಾಡಿದೆ ಎಂದು ಅರಿತು ಕೊಳ್ಳುತ್ತಾನೆ. ಆದರೆ ತಾಯಿಗೆ ಮಾತು ನೀಡಿದ ಕಾರಣ ಶ್ರೀ ರಾಮ ಹಾಗೂ ಸೂರತ್ ನಡುವೆ ಬೃಹತ್ ರಕ್ಷಣೆಯ ಗೋಡೆಯಾಗಿ ನಿಂತು ಕೊಳ್ಳುತ್ತಾನೆ.

ಶ್ರೀ ರಾಮನು ಹನುಮಂತನ ಮೇಲೆ ಕೋಪಗೊಂಡು ಪಕ್ಕಕ್ಕೆ ಸರಿ ಎನ್ನುತ್ತಾರೆ, ಆದರೆ ಹನುಮಾನ್ ಒಪ್ಪುವುದಿಲ್ಲ. ಬೇರೆ ದಾರಿಯಿಲ್ಲದೆ ಶ್ರೀ ರಾಮನು ಬಾಣಬಿಡಲು ಸಿದ್ಧವಾಗುತ್ತಾನೆ. ನಿಮಗೆ ತಿಳಿದಿದೆ ಸ್ನೇಹಿತರೇ ರಾಮನ ಶಕ್ತಿ ಎಂಥದ್ದು ಎಂದು, ರಾಮನ ಬಾಣಗಳನ್ನು ತಡೆದುಕೊಳ್ಳುವ ಸಾಮರ್ಥ್ಯ ಯಾರಿಗೂ ಇರುವುದಿಲ್ಲ.

ಹನುಮಂತನಿಗೂ ಕೂಡ ಈ ಶಕ್ತಿ ಇರುವುದಿಲ್ಲ, ಆದರೆ ಹನುಮಂತ ಎಷ್ಟೇ ಆದರೂ ರಾಮನ ಬಂಟ. ಪ್ರತಿಕ್ಷಣ ರಾಮನನ್ನು ಜಪಿಸುವ ಹನುಮಂತನು ಇಂತಹ ಸಮಯದಲ್ಲಿ ಜಪಿಸದೇ ಇರುತ್ತಾನೆಯೇ? ಹೌದು, ಹನುಮಂತನು ರಾಮ ರಾಮ ರಾಮ ಎಂದು ಜಪಿಸಲು ಆರಂಭಿಸುತ್ತಾನೆ. ರಾಮನು ಬಿಟ್ಟ ಬಾಣಗಳು ಹನುಮಾನ್ ಬಳಿ ಬರುತ್ತಿದ್ದಂತೆ, ರಾಮನ ಜಪ ಕೇಳಿ ವಾಪಸ್ಸು ತೆರಳುತ್ತಿದ್ದವು, ರಾಮನು ಎಷ್ಟೇ ಪ್ರಯತ್ನ ಮಾಡಿದರೂ ಬಾಣಗಳು ಹನುಮಂತನನ್ನು ತಲುಪಲು ಸಾಧ್ಯವಾಗಲಿಲ್ಲ.

ಯಾಕೆಂದರೆ ಶ್ರೀ ರಾಮನಿಗಿಂತ ಶ್ರೀ ರಾಮನ ಹೆಸರೇ ಬಲವಾಗಿತ್ತು ಅಥವಾ ಶ್ರೇಷ್ಠವಾಗಿತ್ತು. ಈ ಯುದ್ಧ ಹೀಗೆ ಮುಂದುವರೆಯುತು, ರಾಮನು ಬಾಣಗಳನ್ನು ಬಿಡುವುದನ್ನು ನಿಲ್ಲಿಸಲಿಲ್ಲ, ಹನುಮಂತನು ಕೂಡ ರಾಮ ಜಪವನ್ನು ನಿಲ್ಲಿಸಲಿಲ್ಲ. ಇದೇ ಸಮಯದಲ್ಲಿ ಅಲ್ಲಿಗೆ ಗುರು ವಸಿಷ್ಠರು ಬಂದು ಗುರು ವಿಶ್ವಾಮಿತ್ರ ರಿಂದ ಕರುಣೆ ಕೋರಲು ಸೂರತ್ ರಾಜನಿಗೆ ನಿರ್ದೇಶನ ಮಾಡಿದರು, ಇದಾದ ನಂತರ ಯುದ್ಧವು ಮುಕ್ತಾಯವಾಯಿತು.

ನೀವು ಇಡೀ ರಾಮಾಯಣದಲ್ಲಿ ಗಮನಿಸಿರಬಹುದು, ಎಲ್ಲಿಯೂ ಯಾವ ಸಮಯದಲ್ಲಿಯೂ ಶ್ರೀರಾಮನ ಬಾಣವು ಎಂದಿಗೂ ವಿಫಲಗೊಂಡಿಲ್ಲ, ಆದರೆ ರಾಮ ರಾಮ ಎಂಬ ಜಪದಿಂದ ರಾಮನ ಬಾಣಗಳು ವಿಫಲಗೊಂಡವು. ಇದರಿಂದ ತಿಳಿಯುತ್ತದೆ, ಶ್ರೀ ರಾಮನ ಶಕ್ತಿಗಿಂತಲೂ ಆತನ ಹೆಸರಿಗೆ ಹೆಚ್ಚು ಶಕ್ತಿ ಇದೆ ಹಾಗೂ ಶ್ರೇಷ್ಠ ಎಂದು.