ಬಿಗ್ ನ್ಯೂಸ್: ಭಾರತಕ್ಕೆ ಮತ್ತೊಂದು ಮಹಾ ಸಿಹಿಸುದ್ದಿ ನೀಡಿದ ಆಸ್ಟ್ರೇಲಿಯಾ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಮೊದಲಿಂದಲೂ ಚೀನಾ ಹಾಗೂ ಆಸ್ಟ್ರೇಲಿಯಾ ದೇಶಗಳು ಹಲವಾರು ರೀತಿಯ ವ್ಯಾಪಾರ ಸಂಬಂಧಗಳನ್ನು ಹೊಂದಿದ್ದವು. ಎರಡು ದೇಶಗಳು ಒಂದಕ್ಕೆ ಒಂದು ಬಹಳ ಅವಲಂಬಿತವಾಗಿದ್ದವು.

ಅದರಲ್ಲಿಯೂ ಆಸ್ಟ್ರೇಲಿಯಾ ದೇಶದಿಂದ ಕಲ್ಲಿದ್ದಲು, ಕಬ್ಬಿಣದ ಅದಿರು, ಮಾಂಸ ಹಾಗೂ ಬಾರ್ಲಿ ಗಳನ್ನು ಚೀನಾ ದೇಶ ಗಣನೀಯವಾಗಿ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇದೀಗ ಅಂತರಾಷ್ಟ್ರೀಯ ಮಟ್ಟದಲ್ಲಿ ಆಸ್ಟ್ರೇಲಿಯಾ ದೇಶವು ಕರೋನ ವೈರಸ್ ವಾದದಲ್ಲಿ ವಿರುದ್ಧವಾಗಿ ನಿಂತಿರುವ ಕಾರಣ ಚೀನಾ ದೇಶ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲು ಆರಂಭಿಸಿದೆ. ಮೊದಲಿಗೆ ಆಸ್ಟ್ರೇಲಿಯಾ ದೇಶದಲ್ಲಿನ ವಿದ್ಯಾರ್ಥಿಗಳು ನಾವು ಆಸ್ಟ್ರೇಲಿಯಾ ದೇಶವನ್ನು ಬಿಟ್ಟು ಮತ್ತೆ ಚೀನಾ ದೇಶಕ್ಕೆ ತೆರಳುತ್ತೇವೆ ಎಂದು ಬಹಿರಂಗ ಹೇಳಿಕೆ ನೀಡುತ್ತಿದ್ದರು.

ಮತ್ತೊಂದೆಡೆ ಚೀನಾ ದೇಶವು ಆಸ್ಟ್ರೇಲಿಯ ದೇಶದ ಬಾರ್ಲಿ ಆಮದಿನ ಮೇಲೆ ಏಕಾಏಕಿ 80 ಪರ್ಸೆಂಟ್ ಸುಂಕವನ್ನು ಹೆಚ್ಚು ಮಾಡಿತ್ತು. ಇದೀಗ ಚೀನಾ ದೇಶವು ಕಲ್ಲಿದ್ದಲು ಹಾಗೂ ಕಬ್ಬಿಣದ ಅದನ್ನು ಕೂಡ ಆಮದು ನಿಲ್ಲಿಸುವ ಅಥವಾ ಸುಂಕ ಹೆಚ್ಚು ಮಾಡುವ ಆಲೋಚನೆಯಲ್ಲಿ ತೊಡಗಿಕೊಂಡಿದೆ.

ಇದರಿಂದ ಪರೋಕ್ಷವಾಗಿ ನೀವು ಅಂತರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಪರವಾಗಿ ನಿಲ್ಲದೆ ಇದ್ದರೆ ಈ ಎಲ್ಲಾ ಪರಿಣಾಮಗಳು ಮುಂದುವರಿಯುತ್ತವೆ ಎಂಬ ಸಂದೇಶ ಚೀನಾ ದೇಶ ಸಾರಿದೆ. ಆದರೆ ಆಸ್ಟ್ರೇಲಿಯಾ ದೇಶವು ನೀವು ನಮ್ಮ ಉತ್ಪನ್ನಗಳನ್ನು ತೆಗೆದುಕೊಳ್ಳದೆ ಇದ್ದರೂ ಪರವಾಗಿಲ್ಲ ನಮಗೆ ನಮ್ಮ ಉತ್ಪನ್ನಗಳನ್ನು ಹೇಗೆ ಮಾರಾಟ ಮಾಡುವುದು ಹಾಗೂ ನಮಗೆ ಅಗತ್ಯವಾಗಿರುವ ವಸ್ತುಗಳನ್ನು ಹೇಗೆ ಆಮದು ಮಾಡಿ ಕೊಳ್ಳುವುದು ಎಂದು ತಿಳಿದಿದೆ ಎಂದು ಚೀನಾ ದೇಶದ ಆದೇಶದ ಬೆನ್ನಲ್ಲೇ ಭಾರತದ ಕದ ತಟ್ಟಿದೆ.

ಹೌದು ಇದೀಗ ಭಾರತದ ಕಟ್ಟಿರುವ ಆಸ್ಟ್ರೇಲಿಯಾ ದೇಶವು ನಾವು ಚೀನಾ ದೇಶದಿಂದ ಹಲವಾರು ವೈದ್ಯಕೀಯ ಸರಕುಗಳು, ತಂತ್ರಜ್ಞಾನ ಮತ್ತು ನಿರ್ಣಾಯಕ ಕನಿಜ ಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಇದರ ಜೊತೆಗೆ ಹಲವಾರು ವಸ್ತುಗಳನ್ನು ರಫ್ತು ಕೂಡ ಮಾಡುತ್ತಿದ್ದೇವೆ, ನಾವು ಭಾರತವನ್ನು ಸಂಪೂರ್ಣ ನಂಬುತ್ತಿದ್ದೇವೆ, ವಿಶ್ವಾಸಾರ್ಹ ಪೂರೈಕೆ ಸರಪಳಿಯನ್ನು ಅಭಿವೃದ್ಧಿಪಡಿಸಲು ಉಭಯ ದೇಶಗಳು ಒಪ್ಪಂದ ಮಾಡಿಕೊಳ್ಳುವುದು ಬಹಳ ಅತ್ಯಗತ್ಯವಾಗಿದೆ ಎಂದು ಭಾರತದ ಮುಂದೆ ಹೊಸ ಒಪ್ಪಂದದ ಮನವಿಯನ್ನು ಇಟ್ಟಿದೆ.

ಈ ಕುರಿತು ಮುಂದಿನ ತಿಂಗಳ 4ನೇ ತಾರೀಕಿನಂದು ನಡೆಯಲಿರುವ ವರ್ಚುಯಲ್ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ನಾವು ಭಾರತದ ಜೊತೆ ಮಾತುಕತೆ ನಡೆಸಲಿದ್ದೇವೆ ಎಂದು ಆಸ್ಟ್ರೇಲಿಯಾ ದೇಶ ತಿಳಿಸಿದೆ.

ಒಂದು ವೇಳೆ ಅದೇ ನಡೆದಲ್ಲಿ ಭಾರತಕ್ಕೆ ಇದರಿಂದ ಲಕ್ಷಾಂತರ ಕೋಟಿ ರೂಗಳಲ್ಲಿ ಲಾಭವಿದ್ದು, ಭಾರತದಲ್ಲಿ ತಯಾರಾಗುವ ಹಲವಾರು ಸರಕುಗಳು ಆಸ್ಟ್ರೇಲಿಯಾ ದೇಶಕ್ಕೆ ದಿನನಿತ್ಯದ ಲೆಕ್ಕದಲ್ಲಿ ಬಹಳ ಅಗತ್ಯವಾಗಿದೆ. ಒಟ್ಟಿನಲ್ಲಿ ಈ ಒಪ್ಪಂದದ ಮನವಿಯ ಮೂಲಕ ಕೊರೋನಾ ನಂತರ ಜಗತ್ತಿನಲ್ಲಿ ಭಾರತ ದೇಶವು ರಫ್ತು ವಿನಿಮಯ ಪದ್ಧತಿಯಲ್ಲಿ ಮತ್ತಷ್ಟು ಯಶಸ್ಸು ಗಳಿಸಲಿದೆ ಎಂಬ ಲೆಕ್ಕಾಚಾರಗಳಿಗೆ ದಿನೇ ದಿನೇ ಬಲಗೊಳ್ಳುತ್ತಿವೆ.

Facebook Comments

Post Author: Ravi Yadav