170 ದೇಶಗಳ ಚೀನಾ ಪ್ರಾಜೆಕ್ಟ್ ಗೆ ಒಮ್ಮೆಲೇ ಬ್ರೇಕ್ ಹಾಕಿದ ಅಮೇರಿಕಾ! ಟ್ರಂಪ್ ಒಂದು ಆದೇಶದಿಂದ ಚೀನಾ ದೈತ್ಯ ಕಂಪನಿ ಮಕಾಡೆ ಮಲಗುವುದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಚೀನಾ ಹಾಗೂ ಅಮೇರಿಕಾ ದೇಶಗಳ ನಡುವಿನ ವ್ಯಾಪಾರ ವ್ಯವಹಾರ ಸಂಬಂಧಗಳು ಬಹುತೇಕ ಹಳಸಿಹೋಗಿವೆ. ಇಷ್ಟು ದಿವಸ ಅಮೇರಿಕಾ ನಿರ್ಧಾರಗಳನ್ನು ಕಂಡು ಸುಮ್ಮನಿದ್ದ ಚೀನಾ ದೇಶವು ಇತ್ತೀಚೆಗಷ್ಟೇ ಅಮೇರಿಕಾ ದೇಶಕ್ಕೆ ಟಾಂಗ್ ನೀಡಲು ಡಾಲರ್ ಬದಲಿಗೆ ತನ್ನ ಕರೆನ್ಸಿ ಮೂಲಕ ಷೇರು ಮಾರುಕಟ್ಟೆ ನಡೆಸಲು ನಿರ್ಧಾರ ಮಾಡಿ ಬೀಗಿತ್ತು.

ಇದೀಗ ಅಮೇರಿಕಾ ಅಧ್ಯಕ್ಷ ಟ್ರಂಪ್ ರವರು ಮತ್ತೊಂದು ಆದೇಶ ಹೊರಡಿಸಿದ್ದು, ಚೀನಾ ದೇಶದ ದೈತ್ಯ, ವರ್ಷಕ್ಕೆ ಲಕ್ಷಾಂತರ ಕೋಟಿ ಬಿಸಿನೆಸ್ ನಡೆಸುವ ಕಂಪನಿಯು ಬಹುತೇಕ ಮುಳುಗಡೆಯಾಗುವುದು ಖಚಿತವಾಗಿದೆ. ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಕಂಪನಿಯ ಅಧ್ಯಕ್ಷರೇ ಈ ಕುರಿತು ಮಾತನಾಡಿ ಅಮೇರಿಕಾ ದೇಶ ಈ ನಿರ್ಧಾರವನ್ನು ವಾಪಾಸು ತೆಗೆದುಕೊಳ್ಳದಿದ್ದಲ್ಲಿ ನಾವು ಇಷ್ಟು ದಿವಸ ಲಾಭಕ್ಕಾಗಿ ಕೆಲಸ ಮಾಡುತ್ತಿದ್ದವು, ಇನ್ನು ಮುಂದೆ ನಮ್ಮ ಕಂಪನಿಯನ್ನು ಉಳಿಸಿಕೊಳ್ಳಲು ಕೆಲಸ ಮಾಡಬೇಕಾದ ಪರಿಸ್ಥಿತಿ ಬರುತ್ತದೆ, ನಾವು ಅಮೇರಿಕಾದ ಬಿಡಿಭಾಗಗಳು ಇಲ್ಲದೆ ಏನು ಮಾಡಲು ಸಾಧ್ಯವಿಲ್ಲ ಎಂದು ಮಂಡಿಯೂರಿದೆ. ಅಷ್ಟಕ್ಕೂ ಈ ಎಲ್ಲಾ ವಿದ್ಯಮಾನಗಳ ಕುರಿತು ಸಂಪೂರ್ಣ ವಿವರಗಳೇನು ಗೊತ್ತಾ?

ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ವರ್ಷ ಮೇ ತಿಂಗಳಿನಲ್ಲಿ ಅಮೇರಿಕಾ ದೇಶವು ಚೀನಾ ದೇಶದ ದೈತ್ಯ ಕಂಪೆನಿಯಾದ ಹೂವೈ ಕಂಪನಿಗೆ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತಯಾರಿ ಮಾಡಲು ಅತ್ಯಗತ್ಯವಾದ ಸೆಮಿಕಂಡಕ್ಟರ್ ಗಳನ್ನು ರಫ್ತು ಮಾಡದಂತೆ ತನ್ನ ಕಂಪನಿಗಳಿಗೆ ಸೂಚನೆ ನೀಡಿತ್ತು. ಆದರೆ ಇದಕ್ಕೆ ತಲೆಕೆಡಿಸಿಕೊಳ್ಳದ ಹೂವೈ ಕಂಪನಿಯು ಅಮೇರಿಕಾ ದೇಶದ ರಹಸ್ಯ ತಂತ್ರಜ್ಞಾನವನ್ನು ಬಳಸಿಕೊಂಡು ಅಧಿಕೃತವಾಗಿ ಸೆಮಿಕಂಡಕ್ಟರ್ ತಯಾರು ಮಾಡುವ ತೈವಾನ್, ಜಪಾನ್ ಹಾಗೂ ದಕ್ಷಿಣ ಕೊರಿಯಾ ದೇಶಗಳಿಂದ ಅಗತ್ಯ ವಸ್ತುಗಳನ್ನು ತರಿಸಿ ಕೊಳ್ಳುತ್ತಿತ್ತು.

ಇದನ್ನು ಅರಿತು ಕೊಂಡಿರುವ ಟ್ರಂಪ್ ರವರು ಇದೀಗ ಇತರ ದೇಶಗಳ ಮೇಲೂ ಕೂಡ ಕಾನೂನು ವಿಧಿಸಿದ್ದಾರೆ, ಇನ್ನು ಮುಂದೆ ಯಾವುದೇ ದೇಶಗಳಾಗಲಿ ಇತರ ದೇಶಗಳಿಗೆ ತನ್ನ ವಿನ್ಯಾಸದ ಸೆಮಿಕಂಡಕ್ಟರ್ ಗಳನ್ನು ಅಥವಾ ಅದರ ವಿನ್ಯಾಸಗಳನ್ನು ರಫ್ತು ಮಾಡಬೇಕು ಎಂದರೇ ಅಮೆರಿಕ ಸರ್ಕಾರದ ಅನುಮತಿ ಪಡೆದು ಕೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ. ಅಮೆರಿಕ ದೇಶದ ವಿನ್ಯಾಸದ ಸೆಮಿಕಂಡಕ್ಟರ್ ಗಳಿಲ್ಲದೆ ಹೂವೈ ಕಂಪನಿಯು ಯಾವುದೇ ಚಿಕ್ಕ ಎಲೆಕ್ಟ್ರಾನಿಕ್ ಉಪಕರಣಗಳನ್ನು ತಯಾರಿಸಲು ಕೂಡ ಸಾಧ್ಯವಿಲ್ಲ.

ಟ್ರಂಪ್ ರವರ ಈ ಆದೇಶದ ಬೆನ್ನಲ್ಲೇ ಚೀನಾ ಕಂಪನಿಗೆ ಸೆಮಿಕಂಡಕ್ಟರ್ ರಫ್ತು ಮಾಡುತ್ತಿದ್ದ ತೈವಾನ್ ದೇಶದ ಕಂಪನಿಯು ಕೂಡ ನಾವು ಇನ್ನು ಮುಂದೆ ನಿಮಗೆ ಸೆಮಿಕಂಡಕ್ಟರ್ ಕೊಡಲು ಸಾಧ್ಯವಿಲ್ಲ ಎಂದು ಅಧಿಕೃತ ಘೋಷಣೆ ಮಾಡಿದೆ. ಇದನ್ನು ಗಮನಿಸಿದ ಹೂವೈ ಅಧ್ಯಕ್ಷ ಗುವೋ ಪಿಂಗ್ ರವರು, ಒಂದು ವೇಳೆ ಟ್ರಂಪ್ ರವರು ಈ ಆದೇಶ ವಾಪಸ್ ತೆಗೆದುಕೊಳ್ಳದೆ ಇದ್ದಲ್ಲಿ 170ಕ್ಕೂ ಹೆಚ್ಚು ದೇಶಗಳಲ್ಲಿ ನಾವು ವಿಸ್ತರಣೆ ಮಾಡಿರುವ ನೆಟ್ವರ್ಕ್ ಗಳ ನಿರ್ವಹಣೆ ಮತ್ತು ನಿರಂತರ ಕಾರ್ಯಾಚರಣೆ ಸಂಪೂರ್ಣ ನಿಂತು ಹೋಗುತ್ತದೆ. ಆಗ ಕಂಪನಿ ಬಹುತೇಕ ಕೊನೆಗೊಳ್ಳುತ್ತದೆ ಎಂದು ಮಾಧ್ಯಮಗಳ ಮುಂದೆ ಬಹಿರಂಗ ಹೇಳಿಕೆ ನೀಡಿದ್ದಾರೆ.

Facebook Comments

Post Author: Ravi Yadav