ನನಗೆ ಎಬಿಡಿ ಇಷ್ಟ, ಆದರೆ ಫೀಲ್ಡಿಂಗ್ ನಲ್ಲಿ ಈತನೇ ಶ್ರೇಷ್ಠ ಎಂದು ಭಾರತೀಯನನ್ನು ಆಯ್ಕೆ ಮಾಡಿದ ಜಾಂಟಿ ರೋಡ್ಸ್ !

ನನಗೆ ಎಬಿಡಿ ಇಷ್ಟ, ಆದರೆ ಫೀಲ್ಡಿಂಗ್ ನಲ್ಲಿ ಈತನೇ ಶ್ರೇಷ್ಠ ಎಂದು ಭಾರತೀಯನನ್ನು ಆಯ್ಕೆ ಮಾಡಿದ ಜಾಂಟಿ ರೋಡ್ಸ್ !

ನಮಸ್ಕಾರ ಸ್ನೇಹಿತರೇ, ಅಂತರರಾಷ್ಟ್ರೀಯ ಪಂದ್ಯಗಳನ್ನು ಬ್ಯಾಟಿಂಗ್ ಹಾಗೂ ಬೌಲಿಂಗ್ ಮೂಲಕವಷ್ಟೇ ಅಲ್ಲ ಬದಲಾಗಿ ಫೀಲ್ಡಿಂಗ್ ಮೂಲಕವೂ ಪಂದ್ಯ ಗೆಲ್ಲಬಹುದು ಎಂಬುದನ್ನು ತೋರಿಸಿಕೊಟ್ಟ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಫೀಲ್ಡಿಂಗ್ ಮಾಡುವ ಮೂಲಕ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ಏಕೈಕ ಆಟಗಾರ ಜಾಂಟಿ ರೋಡ್ಸ್ ಅವರು ಇದೀಗ ಭಾರತೀಯ ಆಟಗಾರನ ಫೀಲ್ಡಿಂಗ್ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಸುರೇಶ್ ರೈನಾ ಹಾಗೂ ಜಾಂಟಿ ರೋಡ್ಸ್ ಅವರು ಒಟ್ಟಾಗಿ ಸಂದರ್ಶನದಲ್ಲಿ ಭಾಗಿಯಾಗಿದ್ದಾಗ ವಿಶ್ವ ಕ್ರಿಕೆಟ್ ನಲ್ಲಿ ಅತ್ಯುತ್ತಮ ಫೀಲ್ಡರ್ ಯಾರು ಎಂದು ಇಬ್ಬರಿಗೂ ಸೇರಿ ಅಭಿಮಾನಿಗಳು ಪ್ರಶ್ನೆ ಕೇಳಿದಾಗ ಇಬ್ಬರು ಸೇರಿ ಒಂದು ಹೆಸರನ್ನು ತೆಗೆದು ಕೊಂಡಿದ್ದಾರೆ. ಸುರೇಶ್ ರೈನಾ ಅವರು ನೇರವಾಗಿ ಒಮ್ಮೆಲೆ ರವೀಂದ್ರ ಜಡೇಜ ಅವರ ಹೆಸರನ್ನು ತೆಗೆದು ಕೊಂಡರು, ಇನ್ನು ಜಾಂಟಿ ರೋಡ್ಸ್ ಅವರು ಈ ರೀತಿಯ ಮಾತುಗಳ ಮೂಲಕ ಆಟಗಾರರನ್ನು ಆಯ್ಕೆ ಮಾಡಿದರು.

ನನಗೆ ಎಬಿ ಡಿವಿಲಿಯರ್ಸ್ ರವರ ಬ್ಯಾಟಿಂಗ್ ನೋಡುವುದು ಬಹಳ ಇಷ್ಟ, ಅಷ್ಟೇ ಅಲ್ಲ ಅವರು ಫೀಲ್ಡಿಂಗ್ ಮಾಡುವಾಗ ಕೂಡ ನನಗೆ ನೋಡಲು ಬಹಳ ಇಷ್ಟವಾಗುತ್ತದೆ. ಬಹಳ ವೇಗವಾಗಿ ಕ್ರೀಡಾಂಗಣ ಕವರ್ ಮಾಡುವ ಅವರು ಉತ್ತಮ ಫೀಲ್ಡಿಂಗ್ ಮಾಡುತ್ತಾರೆ, ಆದರೆ ಭಾರತ ತಂಡದ ರವೀಂದ್ರ ಜಡೇಜಾ ರವರನ್ನು ಫೀಲ್ಡಿಂಗ್ ಮಾಡುವುದು ನೋಡಿದರೇ ಖಂಡಿತ ಆಶ್ಚರ್ಯವಾಗುತ್ತದೆ, ಯಾಕೆಂದರೆ ಇವರು ಕ್ರೀಡಾಂಗಣದಲ್ಲಿ ಬಹಳ ವೇಗವಾಗಿ ಓಡಾಡುತ್ತಾ ಯಾವುದೇ ಕ್ಲಿಷ್ಟಕರ ಕ್ಯಾಚು ಗಳನ್ನು ಕೂಡ ನೆಲಕ್ಕೆ ಹಾಕದೆ ಹಿಡಿದು ಬಿಡುತ್ತಾರೆ. ಬಾಲ್ ಕೈಗೆ ಸಿಕ್ಕ ಕೂಡಲೇ ಮರು ಕ್ಷಣದಲ್ಲಿ ಕೀಪರ್ ಅಥವಾ ಬೌಲರ್ ಕಡೆಗೆ ಬಾಲ್ ತಲುಪಿರುತ್ತದೆ. ಹೀಗಿರುವಾಗ ನಾನು ಹೇಗೆ ಎಬಿ ಡಿವಿಲಿಯರ್ಸ್ ರವರನ್ನು ಶ್ರೇಷ್ಠ ಎನ್ನಲಿ, ಎಬಿ ಡಿವಿಲಿಯರ್ಸ್ ಅವರು ಉತ್ತಮ ನನಗೂ ಇಷ್ಟ ಆದರೆ ಜಡೇಜಾ ರವರೇ ಶ್ರೇಷ್ಠ ಎಂದಿದ್ದಾರೆ.