ಐಸಿಸಿ ಗೆ ಬೇಕಾಗಿರುವ ಬಲವಾದ ನಾಯಕತ್ವವನ್ನು ಈ ಭಾರತೀಯನು ಮಾತ್ರ ನೀಡಬಲ್ಲ ಎಂದ ಸ್ಮಿತ್ ಕಾರಣಗಳ ಸಮೇತ ಅದ್ಭುತ ವಿವರಣೆ ನೀಡಿದ್ದು ಹೇಗೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗಷ್ಟೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾಗಿ ಮಾಜಿ ಸೌತ್ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಗ್ರೇಮ್ ಸ್ಮಿತ್ ರವರು ಆಯ್ಕೆಯಾಗಿದ್ದಾರೆ. ಇದೀಗ ಇದೇ ಮೊದಲ ಬಾರಿಗೆ ಅಧ್ಯಕ್ಷ ಸ್ಥಾನದಲ್ಲಿ ಕುಳಿತ ನಂತರ ಮೊದಲ ಸರಣಿಯನ್ನು ಆಯೋಜಿಸಿದ್ದಾರೆ. ಹೌದು, ಇದೀಗ ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳು ಸರಣಿಗೆ ಒಪ್ಪಿಗೆ ನೀಡಿವೆ.

ಭಾರತ ಹಾಗೂ ಸೌತ್ ಆಫ್ರಿಕಾ ತಂಡಗಳು ಕೊರೋನಾ ಪರಿಸ್ಥಿತಿ ಆಗಸ್ಟ್ ತಿಂಗಳಿನಲ್ಲಿ ಕೊನೆಯಾಗಲಿದೆ ಎಂದು ಅಂದಾಜು ಮಾಡಿಕೊಂಡು,ಇದಾದ ಕೂಡಲೇ 3 ಟಿ20 ಪಂದ್ಯಗಳುಳ್ಳ ಸರಣಿ ನಡೆಸಲು ನಿರ್ಧಾರ ಮಾಡಿದ್ದಾರೆ. ಇದರ ಕುರಿತು ಅಧಿಕೃತ ಘೋಷಣೆ ಮಾಡುವಾಗ ಮಾತನಾಡಿರುವ ಗ್ರೇಮ್ ಸ್ಮಿತ್ ರವರು ಇನ್ನೇನು ಕೆಲವೇ ದಿನಗಳಲ್ಲಿ ಐಸಿಸಿ ಸಂಸ್ಥೆಯ ಅಧ್ಯಕ್ಷ ಸ್ಥಾನ ಖಾಲಿಯಾಗಲಿದೆ.

ಈ ಸ್ಥಾನವನ್ನು ತುಂಬಲು ಬಿಸಿಸಿಐ ಮುನ್ನಡೆಸುತ್ತಿರುವ ಸೌರವ್ ಗಂಗೂಲಿ ರವರೇ ಸೂಕ್ತ, ಯಾಕೆಂದರೆ ಆತನಿಗೆ ಕ್ರಿಕೆಟ್ ಆಟವಾಡಿದ ಅನುಭವವಿದೆ ಹೇಗೆ ತಂಡವನ್ನು ಮುನ್ನಡೆಸಬೇಕು ಎಂಬುದನ್ನು ತಿಳಿದು ಕೊಂಡಿದ್ದಾರೆ. ಅಷ್ಟೇ ಅಲ್ಲದೆ ಇಡೀ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಹೆಚ್ಚು ಗೌರವಯುತವಾಗಿ ಕಾಣುವ ಆಟಗಾರರಲ್ಲಿ ಸೌರವ್ ಗಂಗೂಲಿ ಒಬ್ಬರಾಗಿದ್ದಾರೆ. ಕೊರೊನ ಪರಿಸ್ಥಿತಿಯಿಂದ ಎಲ್ಲಾ ಕ್ರೀಡೆಗಳು ನಿಂತು ಹೋಗಿರುವ ಸಂದರ್ಭದಲ್ಲಿ ಮತ್ತೆ ಕ್ರೀಡಾ ಜಗತ್ತನ್ನು ನಿರ್ಮಿಸಲು ಗಂಗೂಲಿ ರವರೆ ಸೂಕ್ತ ವ್ಯಕ್ತಿ ಎಂದು ತಮ್ಮದೇ ಆದ ಅಭಿಪ್ರಾಯಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.

Facebook Comments

Post Author: Ravi Yadav