ಯುರೋಪ್, ಭಾರತದ ಹಾದಿ ತುಳಿದ ಅಮೇರಿಕ ! ಚೀನಾ ದೇಶಕ್ಕೆ ಮತ್ತೊಂದು ಬಿಗ್ ಶಾಕ್ ! ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಅಮೇರಿಕಾ ಹಾಗೂ ಚೀನಾ ದೇಶಗಳ ನಡುವೆ ವಾಣಿಜ್ಯ ಹಾಗೂ ವ್ಯಾಪಾರ ವಹಿವಾಟುಗಳಲ್ಲಿ ಬಾರಿ ತಿಕ್ಕಾಟ ನಡೆಯುತ್ತಿದೆ. ಒಂದೆಡೆ ಟ್ರಂಪ್ ರವರು ತಮ್ಮದೇ ಆದ ನಿರ್ಧಾರಗಳನ್ನು ತೆಗೆದು ಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಚೀನಾ ದೇಶ ಕೂಡ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದೆ.

ಇತ್ತೀಚೆಗಷ್ಟೇ ಅಮೆರಿಕ ದೇಶದ ಹಲವಾರು ಕಠಿಣ ಕ್ರಮಗಳಿಗೆ ಉತ್ತರಿಸಲು ಚೀನಾ ದೇಶ ತನ್ನ ಶೇರು ಮಾರುಕಟ್ಟೆಯಲ್ಲಿ ಇನ್ನುಮುಂದೆ ಡಾಲರ್ ಗಳಲ್ಲಿ ವ್ಯವಹಾರ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿ ತನ್ನದೇ ಆದ ಕರೆನ್ಸಿಯಲ್ಲಿ ವ್ಯವಹಾರ ಮಾಡಲು ನಿರ್ಧಾರ ಮಾಡಿತ್ತು. ಇಷ್ಟೆಲ್ಲಾ ನಡೆದರೂ ಕೂಡ ಎರಡೂ ದೇಶಗಳು ನೇರವಾಗಿ ಆದರೆ ವ್ಯಾಪಾರ ಹಾಗೂ ಹೂಡಿಕೆಯ ಸಂಬಂಧ ಯಾವುದೇ ಕ್ರಮಗಳನ್ನು ತೆಗೆದು ಕೊಂಡಿರಲಿಲ್ಲ, ಯಾಕೆಂದರೆ ಕೆಲವೇ ಕೆಲವು ತಿಂಗಳುಗಳ ಹಿಂದೆ ಎರಡು ದೇಶಗಳ ನಡುವೆ ರಫ್ತು ಹಾಗೂ ಆಮದಿನ ವಿಷಯದಲ್ಲಿ ಅತಿ ದೊಡ್ಡ ವ್ಯಾಪಾರ ಒಪ್ಪಂದ ನಡೆದಿತ್ತು.

ಎರಡು ದೇಶಗಳು ನಾವು ಇಷ್ಟು ಸಾಮಗ್ರಿಗಳನ್ನು ರಫ್ತು ಮಾಡಿಯೇ ತೀರುತ್ತೇವೆ ಹಾಗೂ ಇಷ್ಟು ಸರಕುಗಳನ್ನು ಆಮದು ಮಾಡಿಕೊಂಡು ಎರಡು ದೇಶಗಳ ನಡುವೆ ಸಂಬಂಧ ಕಾಪಾಡಿ ಕೊಳ್ಳುತ್ತೇವೆ ಎಂದು ಒಪ್ಪಂದ ಮಾಡಿಕೊಂಡಿದ್ದವು. ಆದರೆ ಇದೀಗ ಈ ಒಪ್ಪಂದದ ನಡುವೆಯು ಅಮೆರಿಕ ದೇಶದ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರು ಚೀನಾ ದೇಶಕ್ಕೆ ಅಡ್ಡಗಾಲು ಹಾಕಲು ಭಾರತ ಹಾಗೂ ಯುರೋಪ್ ದೇಶಗಳು ತೆಗೆದುಕೊಂಡ ಕಠಿಣ ನಿರ್ಧಾರವನ್ನು ತೆಗೆದುಕೊಂಡು ಬಿಟ್ಟಿದ್ದಾರೆ.

ಹೌದು ನಿಮಗೆಲ್ಲರಿಗೂ ತಿಳಿದಿರುವಂತೆ ವಿಶ್ವದ ಆರ್ಥಿಕತೆಯು ಕೋರೋನ ದಿಂದ ನೆಲಕಚ್ಚಿರುವ ಸಂದರ್ಭದಲ್ಲಿ ಚೀನಾ ದೇಶವು ಇತರ ದೇಶಗಳ ಪ್ರಮುಖ ಹಾಗೂ ದೊಡ್ಡ-ದೊಡ್ಡ ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕ ವಿಶ್ವದ ಆರ್ಥಿಕತೆಯ ಮೇಲೆ ಪ್ರಭಾವ ಹೆಚ್ಚಿಸಲು ಮುಂದಾಗಿತ್ತು, ಕೂಡಲೇ ಎಚ್ಚೆತ್ತುಕೊಂಡ ಯುರೋಪ್ ದೇಶಗಳು ಹಾಗೂ ಭಾರತ ದೇಶವು ವಿದೇಶಿ ಬಂಡವಾಳ ಹೂಡಿಕೆ ನಿಯಮಗಳನ್ನು ಬದಲಾವಣೆ ಮಾಡಿ ಚೀನಾ ದೇಶವನ್ನು ತಮ್ಮ ದೇಶಗಳಲ್ಲಿ ಹೂಡಿಕೆ ಮಾಡದಂತೆ ತಡೆದಿದ್ದರು.

ಇದೀಗ ಚೀನಾ ದೇಶ ಅಮೆರಿಕ ದೇಶದ ಕಂಪನಿಗಳಲ್ಲಿ ಹೂಡಿಕೆ ಮಾಡುಲು ಯೋಜನೆ ರೂಪಿಸುತ್ತಿದೆ ಎಂದು ತಿಳಿದ ಕೂಡಲೇ ಅಧ್ಯಕ್ಷರಾಗಿರುವ ಡೊನಾಲ್ಡ್ ಟ್ರಂಪ್ ರವರ ಅಮೆರಿಕ ಸಂಸತ್ತಿನಲ್ಲಿ ಮಸೂದೆ ಮಂಡಿಸಲು ಸಿದ್ಧವಾಗಿದ್ದಾರೆ. ಈಗಾಗಲೇ ಇಟಲಿ, ಸ್ಪೇನ್, ಜರ್ಮನಿ ಹಾಗೂ ಭಾರತ ದೇಶಗಳು ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದು ಇದೀಗ ಅಮೆರಿಕ ದೇಶವು ಕೂಡ ಇದೇ ನಿರ್ಧಾರ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ.

Post Author: Ravi Yadav