ವಿಶಾಖಪಟ್ಟಣಂ ಗ್ಯಾಸ್ ಲೀಕ್ ಘಟನೆಯಲ್ಲಿ ನೂರಾರು ಜನರ ಪ್ರಾಣ ಉಳಿಸಿದ ಮೊಬೈಲ್ ಗೇಮ್ ಪಬ್ಜಿ

ನಮಸ್ಕಾರ ಸ್ನೇಹಿತರೇ, ಇತ್ತೀಚಿನ ದಿನಗಳಲ್ಲಿ ನೀವು ನೋಡಿರುವಂತೆ ಪಬ್ಜಿ ಗೇಮ್ ಹವಾ ಭಾರೀ ಇದೆ‌. ಯುವಕರು ಈ ಆಂಡ್ರಾಯ್ಡ್ ಗೇಮ್ ನಲ್ಲಿ ಸದಾ ಮಗ್ನರಾಗಿರುತ್ತಾರೆ. ಸ್ನೇಹಿತರು ತಮ್ಮದೇ ಆದ ತಂಡ ಕಟ್ಟಿಕೊಂಡು ಆನ್ಲೈನ್ನಲ್ಲಿ ಇತರ ತಂಡಗಳ ಜೊತೆ ಪಬ್ಜಿ ಗೇಮ್ ನಲ್ಲಿ ಕಾಲ ಕಳೆಯುತ್ತಿರುತ್ತಾರೆ.

ಇವರನ್ನು ಕಂಡ ಕೂಡಲೇ ಪೋಷಕರು ಪಬ್ಜಿ ಗೇಮ್ ಆಡಬೇಡ ಎಂದು ಬುದ್ಧಿವಾದ ಹೇಳುವುದು ಹೆಚ್ಚು, ಆದರೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ನಲ್ಲಿ ಕಳೆದ ಕೆಲವು ದಿನಗಳ ಹಿಂದೆ ನಡೆದ ಗ್ಯಾಸ್ ಲೀಕ್ ಘಟನೆಯಲ್ಲಿ ಇದೆ ಪಬ್ಜಿ ಗೇಮ್ ನಿಂದ ನೂರಾರು ಜನರ ಪ್ರಾಣ ಉಳಿದಿದೆ. ಹೌದು ಎಂದಿನಂತೆ ಕಂಪನಿಯ ಸುತ್ತಲಿನ ಗ್ರಾಮದಲ್ಲಿ ವಾಸವಾಗಿರುವ ಪಠಾಳ ಸುರೇಶ್ ಎಂಬಾತ ಮಧ್ಯ ರಾತ್ರಿ 2 ಗಂಟೆಯಲ್ಲಿ ಪಬ್ಜಿ ಆಡುತ್ತಿದ್ದರು.

ಕಂಪನಿಯಿಂದ ಗ್ಯಾಸ್ ಲೀಕ್ ಆದ ಕೆಲವೇ ಕೆಲವು ನಿಮಿಷಗಳಲ್ಲಿ ಇವರ ಗ್ರಾಮ ಪೂರ್ತಿ ಗ್ಯಾಸ್ ಆವರಿಸುತ್ತದೆ, ಎಚ್ಚರವಾಗಿದ್ದ ಸುರೇಶ್ ರವರು ಕೂಡಲೇ ಏನಿದು ವಾಸನೆ ಎಂದು ನೋಡಿ ಪಕ್ಕದಲ್ಲೇ ಗ್ಯಾಸ್ ಕಂಪನಿ ಇರುವ ಕಾರಣ ಪೊಲೀಸರಿಗೆ ವಿಷಯ ಮುಟ್ಟಿಸಿ ಗ್ರಾಮದ ಜನತೆಯನ್ನು ಎಚ್ಚರಗೊಳಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಎಚ್ಚರಗೊಳಿಸಿ ಗ್ರಾಮದಿಂದ ಹೊರಗಡೆ ಸಾಧ್ಯವಾದಷ್ಟು ಜನರನ್ನು ಕಳುಹಿಸುವ ಪ್ರಯತ್ನ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲೇ ಹೇಗೆ ಉಳಿಸಿದರು ಎಂಬುದು ಮುಖ್ಯವಲ್ಲ, ಸಾಧ್ಯವಾದಷ್ಟು ಜನರನ್ನು ಎಚ್ಚರಗೊಳಿಸಿ, ಪ್ರಾಣ ಉಳಿಸಿದ ಸುರೇಶ್ ರವರಿಗೆ ಧನ್ಯವಾದಗಳು.

Post Author: Ravi Yadav