ಕೋವಿಡ್-19 ಕರ್ತವ್ಯ ನಿರತ ಪೊಲೀಸರಿಗೆ ಅವಾಜ್ ಹಾಕಿದ ಮಗನನ್ನು ಈ ಮಾಜಿ ಸಚಿವ ಮಾಡಿದ್ದೇನು ಗೊತ್ತಾ? ದೇಶದಲ್ಲೆಡೆ ಪ್ರಶಂಸೆಗೆ ಕಾರಣವಾದ ಮಾಜಿ ಸಚಿವರ ನಡೆ.

ನಮಸ್ಕಾರ ಸ್ನೇಹಿತರೇ, ದೇಶದಲ್ಲಿ ನಮ್ಮೆಲ್ಲರ ಜೀವವನ್ನು ರಕ್ಷಿಸಲು ತಮ್ಮ ಜೀವವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರು, ವೈದ್ಯರು ಹಾಗೂ ಪೊಲೀಸರ ಜೊತೆ ಜನರು ಮನಬಂದಂತೆ ವರ್ತಿಸುತ್ತಿದ್ದಾರೆ.

ಅವರೆಲ್ಲರೂ ನಮ್ಮ ಜೀವವನ್ನು ರಕ್ಷಿಸಲು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ ಎಂಬುದನ್ನು ಬಹುತೇಕರು ಮರೆತಿದ್ದಾರೆ. ಇನ್ನು ಕೆಲವು ರಾಜಕಾರಣಿಗಳ ಮಕ್ಕಳು ರಾಜಕೀಯದ ಬೆಂಬಲವಿದೆ ಎಂಬ ಧೈರ್ಯದಿಂದ ತಾವು ನಡೆದದ್ದೇ ದಾರಿ ಎಂದು ಬೀಗುತ್ತಿದ್ದಾರೆ. ಇನ್ನು ಮಧ್ಯಪ್ರದೇಶದಲ್ಲಿ ಇದೇ ರೀತಿಯ ಘಟನೆ ನಡೆದಿದ್ದು ಮಾಸ್ಕ್ ಧರಿಸದೆ ಇರುವ ಕಾರಣ ಪೊಲೀಸರು ದಂಡ ವಿಧಿಸಲು ಮುಂದಾದಾಗ ಕಾಂಗ್ರೆಸ್ ಪಕ್ಷದಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಹಾಗೂ ರಾಜೀನಾಮೆ ನೀಡಿ ಜ್ಯೋತಿರಾಧಿತ್ಯ ಸಿಂಧ್ಯ ರವರ ಬಳಗದಲ್ಲಿ ಗುರುತಿಸಿಕೊಂಡಿರುವ ಬಿಜೆಪಿ ಪಕ್ಷದ ಪ್ರದ್ಯುನ್ ಸಿಂಗ್ ತೋಮರ್ ಅವರ ಪುತ್ರ ಅವಾಜ್ ಹಾಕಿದ್ದಾರೆ. ಪೋಲೀಸರು ನೀವು ಯಾರಾದರೂ ಸರಿ ದಂಡ ಕಟ್ಟಲೇಬೇಕು ಎಂದು ಹೇಳಿದಾಗ, ಇಲ್ಲ ನಾನು ಕಟ್ಟುವುದಿಲ್ಲ ಎಂದು ಪೊಲೀಸರ ಜೊತೆ ವಾದಕ್ಕೆ ಇಳಿದಿದ್ದಾರೆ.

ಪೊಲೀಸರಿಗೆ ನಾನು ಯಾರೆಂದು ತಿಳಿದಿಲ್ಲ ಎಂದು ತನ್ನ ತಂದೆಯ ಬೆಂಬಲಿಗರಿಗೆ ಫೋನ್ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ಮನೆಗೆ ಹೋಗಿದ್ದಾರೆ. ಈ ವಿಷಯ ಸಂಜೆಯ ಹೊತ್ತಿಗೆ ಇವರ ತಂದೆಗೆ ತಿಳಿದಿದೆ, ಕೂಡಲೇ ಮಗನನ್ನು ಪೊಲೀಸರು ಕಾರ್ಯ ನಿರ್ವಹಿಸುತ್ತಿದ್ದ ಸ್ಥಳಕ್ಕೆ ಕರೆದುಕೊಂಡು ಹೋಗಿ, ತಾವು ಕ್ಷಮೆಯಾಚಿಸಿ, ಮಗನನ್ನು ಕ್ಷಮೆ ಕೇಳುವಂತೆ ಮಾಡಿ, ದಂಡ ಕಟ್ಟಿ, ಬುದ್ದಿ ಕಲಿಸಲು ಮಾಜಿ ಸಚಿವ ಪ್ರದ್ಯುನ್ ಸಿಂಗ್ ತೋಮರ್ ರವರು, ಪುರಸಭೆಯ ಕೆಲಸಗಾರರೊಂದಿಗೆ ರಸ್ತೆ ಬದಿ ಇರುವ ಕಸವನ್ನು ಸ್ವಚ್ಛ ಮಾಡಿ ಮನೆಗೆ ಬರಬೇಕು ಎಂದು ಮಗನಿಗೆ ಹೇಳಿ, ದಂಡ ವಿಧಿಸಿ ಹಾಗೂ ಸ್ವಚ್ಛ ಮಾಡುವವರೆಗೂ ಬಿಡಬೇಡಿ ಎಂದು ಪೊಲೀಸರಿಗೆ ತಾಕೀತು ಮಾಡಿದ್ದಾರೆ. ಅಷ್ಟೇ ಅಲ್ಲದೇ ಕಾನೂನು ಎಲ್ಲರಿಗೂ ಒಂದೇ, ಅವನು ಮಾಡಿದ ತಪ್ಪುಗಳಿಗೆ ಸರಿಯಾದ ಕ್ರಮ ಕೈಗೊಳ್ಳಬಹುದು ಯಾರಿಗೂ ಅಂಜಬೇಡಿ ಎಂದಿದ್ದಾರೆ. ಇವರ ಈ ನಡೆ ಇದೀಗ ದೇಶದ ಎಲ್ಲೆಡೆ ಪ್ರಶಂಸೆಗೆ ವ್ಯಕ್ತವಾಗಿದ್ದು, ಯಾರೇ ಆಗಲಿ ಕಾನೂನು ಒಂದೇ ಎಂದು ಜನರು ಅಭಿಪ್ರಾಯ ತಿಳಿಸಿದ್ದಾರೆ.

Post Author: Ravi Yadav