ಎದುರಾಳಿ ತಂಡಗಳಿಂದ ಸಾರ್ವಕಾಲಿಕ ಶ್ರೇಷ್ಠ ತಂಡ ರಚಿಸಿದ ಮೈಕ್ ಹಸ್ಸಿ ! ಸ್ಥಾನ ಪಡೆದ ಮೂವರು ಭಾರತೀಯರು ಯಾರ್ಯಾರು ಗೊತ್ತಾ?

ಎದುರಾಳಿ ತಂಡಗಳಿಂದ ಸಾರ್ವಕಾಲಿಕ ಶ್ರೇಷ್ಠ ತಂಡ ರಚಿಸಿದ ಮೈಕ್ ಹಸ್ಸಿ ! ಸ್ಥಾನ ಪಡೆದ ಮೂವರು ಭಾರತೀಯರು ಯಾರ್ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ಬ್ಯಾಟ್ಸ್ಮನ್ ಮೈಕ್ ಹಸ್ಸಿ ರವರು ತಾವು ಟೆಸ್ಟ್ ಕ್ರಿಕೆಟ್ನಲ್ಲಿ ಕಂಡ ಅತ್ಯುತ್ತಮ ಆಟಗಾರರನ್ನು ಗಣನೆಗೆ ತೆಗೆದುಕೊಂಡು ಎದುರಾಳಿ ತಂಡ ಗಳಿಂದ ಸಾರ್ವಕಾಲಿಕ ಶ್ರೇಷ್ಠ ತಂಡವನ್ನು ರಚಿಸಿದ್ದಾರೆ.

ಈ ತಂಡದಲ್ಲಿ ನಾಲ್ವರು ದಕ್ಷಿಣ ಆಫ್ರಿಕಾದ ಆಟಗಾರರಿಗೆ ಸ್ಥಾನ ನೀಡಿದ್ದು ಮೂವರು ಭಾರತೀಯರು ಸೇರಿದಂತೆ ಇಬ್ಬರು ಶ್ರೀಲಂಕಾ ತಂಡದವರು ಆಯ್ಕೆಯಾಗಿದ್ದಾರೆ. ಉಳಿದಂತೆ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ತಂಡಗಳಿಂದ ತಲಾ ಒಬ್ಬ ಆಟಗಾರರು ಆಯ್ಕೆಯಾಗಿದ್ದಾರೆ. ಆರಂಭಿಕರಾಗಿ ಭಾರತದ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಹಾಗೂ ದಕ್ಷಿಣ ಆಫ್ರಿಕಾ ತಂಡದ ಗ್ರೇಮ್ ಸ್ಮಿತ್ ಅವರನ್ನು ಆಯ್ಕೆ ಮಾಡಿದ್ದಾರೆ.

ಇನ್ನುಳಿದಂತೆ ಮೂರನೇ ಸ್ಥಾನದಲ್ಲಿ ಬ್ರಯಾನ್ ಲಾರಾ ನಾಲ್ಕು ಮತ್ತು ಐದನೇ ಸ್ಥಾನದಲ್ಲಿ ಮತ್ತಿಬ್ಬರು ಭಾರತೀಯರಾದ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಅವರನ್ನು ಆಯ್ಕೆ ಮಾಡಿದ್ದಾರೆ. ತಮ್ಮ ಟೆಸ್ಟ್ ತಂಡದ ಆಲ್ರೌಂಡರ್ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾ ತಂಡದ ಜಾಕ್ ಕಾಲಿಸ್ ರವರಿಗೆ ಸ್ಥಾನ ನೀಡಿದ್ದಾರೆ. ವಿಕೆಟ್ ಕೀಪರ್ ಸ್ಥಾನವನ್ನು ಶ್ರೀಲಂಕಾ ಕ್ರಿಕೆಟ್ ದಿಗ್ಗಜ ಕುಮಾರ ಸಂಗಕ್ಕರರವರ ಪಡೆದುಕೊಂಡಿದ್ದು, ಮುತ್ತಯ್ಯ ಮುರಳೀಧರನ್ ರವರು ಏಕೈಕ ಸ್ಪಿನ್ನರ್ ಆಗಿ ಆಯ್ಕೆಯಾಗಿದ್ದಾರೆ. ಫಾಸ್ಟ್ ಬೌಲರ್ ಗಳ ಕೋಟಾದಲ್ಲಿ ಡೇಲ್ ಸ್ಟೇನ್, ಮೋರ್ನೆ ಮಾರ್ಕೆಲ್ ಮತ್ತು ಜೇಮ್ಸ್ ಆಂಡ್ರೆಸನ್ ರವರು ಆಯ್ಕೆಯಾಗಿದ್ದು ಒಟ್ಟಾರೆಯಾಗಿ ಈ ಕೆಳಗಿನಂತಿದೆ.

ವೀರೇಂದ್ರ ಸೆಹ್ವಾಗ್, ಗ್ರೇಮ್ ಸ್ಮಿತ್, ಬ್ರಿಯಾನ್ ಲಾರಾ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ,
ಜಾಕ್ ಕಾಲಿಸ್, ಸಂಗಕ್ಕಾರ, ಡೇಲ್ ಸ್ಟೇನ್, ಮೊರ್ನೆ ಮೊರ್ಕೆಲ್, ಜೇಮ್ಸ್ ಆಂಡರ್ಸನ್, ಮುತ್ತಯ್ಯ ಮುರಳೀಧರನ್.