ಸಾರ್ವಕಾಲಿಕ ಶ್ರೇಷ್ಠ ಭಾರತೀಯ ನಾಯಕನನ್ನು ಆಯ್ಕೆ ಮಾಡಿದ ಹರ್ಷ ಭೋಗ್ಲೆ ! ಆಯ್ಕೆಯಾದ ಲೆಜೆಂಡ್ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಕಳೆದ 20 ವರ್ಷಗಳಿಂದ ಕ್ರಿಕೆಟ್ ನಿರೂಪಕರಾಗಿ ಕಾರ್ಯ ನಿರ್ವಹಿಸುತ್ತಿರುವ ಹರ್ಷ ಭೋಗ್ಲೆ ರವರು ತಮ್ಮ ಜೀವನದ ಸರಿ ಸುಮಾರು ಅವಧಿಯನ್ನು ಕ್ರೀಡೆಯಲ್ಲಿಯೇ ಕಳೆದಿದ್ದಾರೆ. ಇದೀಗ ಐಸಿಸಿ ಸಂಸ್ಥೆಯ ಜೊತೆ ಮಾತನಾಡಿರುವ ಹರ್ಷ ಭೋಗ್ಲೆ ರವರು ಸಾರ್ವಕಾಲಿಕ ಶ್ರೇಷ್ಠ ಭಾರತೀಯ ನಾಯಕನನ್ನು ಆಯ್ಕೆ ಮಾಡಿದ್ದಾರೆ.

ಬಹುಶಹ ನೀವು ಈಗಾಗಲೇ ಹರ್ಷ ಭೋಗ್ಲೆ ರವರು ಯಾರನ್ನು ಆಯ್ಕೆ ಮಾಡಿದ್ದಾರೆ ಎಂಬುದನ್ನು ಊಹೆ ಮಾಡುರುತ್ತೀರಿ, ಆದರೆ ತಮ್ಮ ಆಯ್ಕೆಯನ್ನು ಸಮರ್ಥನೆ ಮಾಡಿಕೊಳ್ಳಲು ಅವರು ನೀಡಿದ ಕಾರಣಗಳ ಕುರಿತು ನೀವು ತಿಳಿದು ಕೊಳ್ಳಲೇಬೇಕು.

ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಎಂಎಸ್ ಧೋನಿ, ಸೌರವ್ ಗಂಗೂಲಿ ಹಾಗೂ ವಿರಾಟ್ ಕೊಹ್ಲಿ ಅವರ ಹೆಸರುಗಳನ್ನು ಸೂಚಿಸಿ ಐಸಿಸಿ ಕ್ರಿಕೆಟ್ ಸಂಸ್ಥೆಯು ಶಾನ್ ಪೋಲಾಕ್ ನೇತೃತ್ವದಲ್ಲಿ ನಡೆಸಿದ ಕಾರ್ಯಕ್ರಮದಲ್ಲಿ ಸಾರ್ವಕಾಲಿಕ ಶ್ರೇಷ್ಠ ನಾಯಕನನ್ನು ಆಯ್ಕೆ ಮಾಡುವಂತೆ ಕೇಳಿಕೊಂಡಾಗ ಹರ್ಷ ಭೋಗ್ಲೆ ರವರು ಮರುಕ್ಷಣ ಆಲೋಚನೆ ಮಾಡದೇ ಸೌರವ್ ಗಂಗೂಲಿ ಅವರ ಹೆಸರನ್ನು ಆಯ್ಕೆ ಮಾಡಿದರು. ಇದಕ್ಕೆ ನನ್ನ ಬಳಿ ಸ್ಪಷ್ಟ ಕಾರಣವು ಕೂಡ ಇದೆ ಎಂದು ತಮ್ಮ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡರು. ಅಷ್ಟಕ್ಕೂ ಅವರು ನೀಡಿರುವ ಕಾರಣಗಳಾದರೂ ಏನು ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಖಂಡಿತವಾಗಲೂ ಸೌರವ್ ಗಂಗೂಲಿ ರವರೇ ಶ್ರೇಷ್ಠ ನಾಯಕ, ನಿಮಗೆಲ್ಲರಿಗೂ ತಿಳಿದಿರುವಂತೆ ರಾಹುಲ್ ದ್ರಾವಿಡ್ ರವರ ದಾಖಲೆ ನಾಯಕನಾಗಿ ಎರಡು ವರ್ಷಗಳ ಕಾಲ ಅತ್ಯುತ್ತಮವಾಗಿತ್ತು, ಇದಾದ ನಂತರ ಕುಂಬ್ಳೆ ನಾಯಕತ್ವದ ಜವಾಬ್ದಾರಿ ವಹಿಸಿಕೊಂಡರು. ಅವರ ಉಪಸ್ಥಿತಿಯಲ್ಲಿಯು ಕೂಡ ತಂಡ ಉತ್ತಮ ಪ್ರದರ್ಶನವನ್ನು ನೀಡಿತು. ತದ ನಂತರ ಧೋನಿ ಹಾಗೂ ಕೊಹ್ಲಿ ನಾಯಕತ್ವವನ್ನು ಕೂಡ ನಾನು ಹತ್ತಿರದಿಂದ ನೋಡಿದ್ದೇನೆ. ಖಂಡಿತವಾಗಲೂ ನಾನು ಈ ಕುರಿತು ಅದೃಷ್ಟಶಾಲಿ ಎಂದು ಹೇಳಿ ಕೊಳ್ಳುತ್ತೇನೆ. ಆದರೆ ಈ ಎಲ್ಲಾ ನಾಯಕರ ಕುರಿತು ಮಾತನಾಡುವಾಗ ವಿವಿಧ ರೀತಿಯಲ್ಲಿ ಆಲೋಚನೆ ಮಾಡಿ ನೋಡಿದರೇ ಸೌರವ್ ಗಂಗೂಲಿ ರವರೇ ಶ್ರೇಷ್ಠ ಎನಿಸುತ್ತದೆ.

ಅದು 90ರ ದಶಕದ ಉತ್ತರಾರ್ಧ ಹಾಗೂ 2000 ದಶಕದ ಆರಂಭದಲ್ಲಿ ಭಾರತ ತಂಡದ ಮೇಲೆ ಜನರು ಮ್ಯಾಚ್ ಫಿಕ್ಸಿಂಗ್ ನಿಂದ ಕ್ರಿಕೆಟ್ ಮೇಲೆ ಸಂಪೂರ್ಣ ನಂಬಿಕೆ ಕಳೆದು ಕೊಂಡಿದ್ದರು, ಭಾರತೀಯ ಕ್ರಿಕೆಟ್ ಇಲ್ಲಿಗೆ ಅಂತ್ಯವಾಗುತ್ತದೆ ಎಂದು ಎಲ್ಲರೂ ಅಂದು ಕೊಂಡಿದ್ದರು. ಆದರೆ ಆ ಸಮಯದಲ್ಲಿ ಸೌರವ್ ಗಂಗೂಲಿ ರವರು ನಾಯಕರಾಗಿ ಆಯ್ಕೆಯಾದ ನಂತರ ತಂಡದಲ್ಲಿ ಪ್ರಮುಖ ಬದಲಾವಣೆಗಳು ನಡೆದವು.

ವಿದೇಶಗಳಲ್ಲಿ ಯಶಸ್ಸನ್ನು ಗಳಿಸುವ ಮೂಲಕ ತಂಡಕ್ಕೆ ಮತ್ತಷ್ಟು ಉತ್ಸಾಹ ತುಂಬಿದ ಗಂಗೂಲಿ ರವರು ತಮ್ಮ ಸ್ಪೂರ್ತಿದಾಯಕ ನಾಯಕತ್ವದಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ವಿವಿಎಸ್ ಲಕ್ಷ್ಮಣ್ ರವರಂತಹ ಆಟಗಾರರನ್ನು ಉತ್ತಮ ಪ್ರದರ್ಶನ ನೀಡುವಂತೆ ಮಾಡಿ ವಿದೇಶಿ ಪರಿಸ್ಥಿತಿಗಳಲ್ಲಿಯೂ ಭಾರತ ದೇಶ ಯಶಸ್ಸು ಗಳಿಸುವಂತೆ ಮಾಡಿದರು.

ಅಷ್ಟೇ ಅಲ್ಲದೇ ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಹಾಗೂ ಹರ್ಭಜನ್ ಸಿಂಗ್ ರಂತಹ ಯುವ ಪ್ರತಿಭೆಗಳನ್ನು ಸೇರ್ಪಡೆ ಮಾಡಿಕೊಂಡು ಬೆಂಬಲ ನೀಡಿ, ಕೂಡಲೇ ಪಂದ್ಯಗಳನ್ನು ಗೆಲ್ಲಲು ಆರಂಭಿಸಿದರು. ಇದರಿಂದ ಭಾರತೀಯರು ಮತ್ತೊಮ್ಮೆ ಕ್ರಿಕೆಟ್ ಮೇಲೆ ನಂಬಿಕೆ ಇಟ್ಟರು. ಕ್ರಿಕೆಟ್ ನೋಡಲು ಆರಂಭಿಸಿದರು, ಇದಾದ ನಂತರ ಗಂಗೂಲಿ ರವರ ನಾಯಕತ್ವದಲ್ಲಿ ಭಾರತವು 25 ವರ್ಷಗಳ ದೀರ್ಘಾವಧಿ ನಂತರ ವಿಶ್ವಕಪ್ ಫೈನಲ್ ತಲುಪಲು ಸಾಧ್ಯವಾಯಿತು. ಆದರೆ ನಾಯಕನಾಗಿ ಮತ್ತು ಆಟಗಾರನಾಗಿ ತಮ್ಮ ಜೀವನದ ಕೊನೆಯಲ್ಲಿ ಕೋಚ್ ಗ್ರೇಗ್ ಚಾಪೆಲ್ ರವರ ಅಡಿಯಲ್ಲಿ ಟೀಕೆಗಳನ್ನು ಎದುರಿಸಿದರು. ಆದರೂ ಕೂಡ ಎಂದಿಗೂ ತನ್ನ ಸ್ಪೂರ್ತಿದಾಯಕ ಮನೋಭಾವವನ್ನು ಬಿಡಲಿಲ್ಲ ಹಾಗೂ ತಾನು ಯಾಕೆ ಶ್ರೇಷ್ಠ ನಾಯಕ ಎಂದು ಹಲವಾರು ಬಾರಿ ಸಾಬೀತು ಪಡಿಸಿದರು ಎಂದು ಹಾಡಿ ಹೊಗಳಿದ್ದಾರೆ.

Post Author: Ravi Yadav