ಚೀನಾಗೆ ಮರ್ಮಾಘಾತ ! ಆಟ ಆರಂಭಿಸಿದ ಟ್ರಂಪ್ ! ಮಾಡಿದ್ದೇನು ಗೊತ್ತಾ??

ಚೀನಾಗೆ ಮರ್ಮಾಘಾತ ! ಆಟ ಆರಂಭಿಸಿದ ಟ್ರಂಪ್ ! ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಅಮೆರಿಕ ದೇಶದ ಅಧ್ಯಕ್ಷರಾಗಿರುವ ಟ್ರಂಪ್ ರವರು ಮೊದಲಿನಿಂದಲೂ ಚೀನಾ ದೇಶವೇ ಇಡೀ ವಿಶ್ವದಲ್ಲಿ ಕೋರೋನ ವೈರಸ್ ಹರಡಲು ಪ್ರಮುಖ ಕಾರಣ. ಕೋರೋನ ಪರಿಸ್ಥಿತಿ ಮುಗಿದ ತಕ್ಷಣ ಚೀನಾ ದೇಶಕ್ಕೆ ಬುದ್ಧಿ ಕಲಿಸುತ್ತೇವೆ ಎಂದು ಗುಟುರು ಹಾಕುತ್ತಿದ್ದಾರೆ.

ಒಂದೆಡೆ ತನ್ನ ದೇಶ ಕೋರೋನ ವೈರಸ್ನಿಂದ ನಲುಗಿ ಹೋಗಿರುವ ಸಂದರ್ಭದಲ್ಲಿಯೂ ಗುಟುರು ಹಾಕುತ್ತಿದ್ದ ಟ್ರಂಪ್ ರವರು ಇದೀಗ ಚೀನಾ ದೇಶದ ವಿರುದ್ಧ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿದ್ದಾರೆ. ಈ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಡೊನಾಲ್ಡ್ ಟ್ರಂಪ್ ರವರು ಚೀನಾ ದೇಶಕ್ಕೆ ರಫ್ತಾಗುವ ಸಾಮಗ್ರಿಗಳ ಮೇಲೆ ಹದ್ದಿನ ಕಣ್ಣು ಇಡಲು ಘೋಷಿಸಿದ್ದಾರೆ. ಹೌದು ಸ್ನೇಹಿತರೇ, ವಿಶ್ವದ ಬಲಾಢ್ಯ ಎನಿಸಿಕೊಂಡಿರುವ ಅಮೇರಿಕಾ ದೇಶದ ಯುದ್ಧ ಸಾಮಗ್ರಿಗಳ ಮೇಲೆ ವಿಶ್ವದ ಬಹುತೇಕ ದೇಶಗಳು ಅವಲಂಬಿತವಾಗಿದೆ. ಚೀನಾ ದೇಶ ಎಷ್ಟೇ ದೊಡ್ಡ ಸೈನ್ಯ ಹೊಂದಿದ್ದರೂ, ಈಗಲೂ ಕೂಡ ಅಮೆರಿಕ ದೇಶದಿಂದ ಹಲವಾರು ಯುದ್ಧ ಸಾಮಗ್ರಿಗಳ ಬಿಡಿಭಾಗಗಳನ್ನು ಆಮದು ಮಾಡಿಕೊಳ್ಳುತ್ತದೆ.

ಇದೀಗ ಇದಕ್ಕೆ ಅಡ್ಡಗಾಲು ಹಾಕಿರುವ ಟ್ರಂಪ್ ರವರು ಅಮೆರಿಕ ದೇಶದಿಂದ ಯಾವುದೇ ಒಂದು ಚಿಕ್ಕ ಬಿಡಿಭಾಗ ಚೀನಾ ದೇಶಕ್ಕೆ ರಫ್ತ್ತು ಆಗಬೇಕೆಂದರೇ ಇನ್ನು ಮುಂದೆ ಅಮೆರಿಕ ಸರ್ಕಾರದ ಅಧಿಕೃತ ಅನುಮತಿ ಪಡೆದು ಕೊಳ್ಳಬೇಕು. ಅಷ್ಟೇ ಅಲ್ಲದೆ ಇನ್ನು ಮುಂದೆ ಚೀನಾ ದೇಶಕ್ಕೆ ರಫ್ತಾಗುವ ಪ್ರತಿಯೊಂದು ವಸ್ತುಗಳ ಮೇಲೆ ಕಠಿಣ ಷರತ್ತುಗಳನ್ನು ವಿಧಿಸಲು ಯೋಜನೆ ರೂಪಿಸಿದ್ದು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದಾರೆ. ಈ ಮೂಲಕ ನೇರವಾಗಿ ಚೀನಾ ದೇಶದ ಯುದ್ಧ ಸಾಮಗ್ರಿಗಳ ಮೇಲೆ ಕಣ್ಣಿಟ್ಟಿರುವ ಟ್ರಂಪ್ ರವರು ಹೇಳಿದಂತೆ ಕಠಿಣ ಕ್ರಮಗಳಲ್ಲಿ ಮೊದಲ ಹೆಜ್ಜೆ ಇರಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಮರೆಯಬೇಡಿ.