ರೈನಾ ರವರ ಪ್ರಕಾರ ಸಚಿನ್, ಸೆಹವಾಗ್, ದ್ರಾವಿಡ್, ಯುವರಾಜ್ ಅವರಂತೆ ಪ್ರಾಬಲ್ಯ ಹೊಂದಿರುವ ಯುವ ಕ್ರಿಕೆಟಿಗ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ಸುರೇಶ್ ರೈನಾ ರವರು ಇದೀಗ ಭಾರತೀಯ ಯುವ ಆಟಗಾರರ ಕುರಿತು ಮಾತನಾಡಿದ್ದಾರೆ. ಹೌದು ಇನ್ಸ್ಟಾಗ್ರಾಂ ಲೈವ್ ನಲ್ಲಿ ಚಾಹಲ್ ರವರ ಜೊತೆ ಮಾತನಾಡಿದ ಸುರೇಶ್ ರೈನಾ ರವರು ತಮ್ಮ ಅಭಿಪ್ರಾಯಗಳನ್ನು ಹೊರಹಾಕಿದರು.‌

ಭಾರತೀಯ ಕ್ರಿಕೆಟ್ ತಂಡ ಹಾಗೂ ಐಪಿಎಲ್ ಟೂರ್ನಿ ಗಳ ಕುರಿತು ಮಾತನಾಡುವಾಗ ಭಾರತದ ಯುವ ಆಟಗಾರರು ಕುರಿತು ನಿಮ್ಮ ಅಭಿಪ್ರಾಯವೇನು ಎಂದರೇ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಹಾಗೂ ರಾಹುಲ್ ದ್ರಾವಿಡ್ ರವರಂತೆ ಯುವ ಆಟಗಾರ ರಿಷಬ್ ಪಂತ್ ರವರು ಒಬ್ಬ ಶ್ರೇಷ್ಠ ಆಟಗಾರ, ಅಗ್ರ ಬ್ಯಾಟ್ಸ್ಮನ್, ಇವರ ಬ್ಯಾಟಿಂಗ್ ನೋಡಲು ನಾನು ಇಷ್ಟಪಡುತ್ತೇನೆ.

ಹಿರಿಯ ಆಟಗಾರರಾದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಯುವರಾಜ್ ಹಾಗೂ ರಾಹುಲ್ ದ್ರಾವಿಡ್ ರವರಂತೆ ಇವರು ಪ್ರಾಬಲ್ಯ ಹೊಂದಿದ್ದಾರೆ, ಖಂಡಿತವಾಗಿಯೂ ಮುಂದೊಂದು ದಿನ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಮಿಂಚುತ್ತಾರೆ ಎಂಬ ಭರವಸೆ ನನಗಿದೆ ಎಂದು ರಿಷಬ್ ಪಂತ್ ರವರ ಕುರಿತು ಭರವಸೆಯ ಮಾತುಗಳನ್ನು ಆಡಿದ್ದಾರೆ. ಸುರೇಶ್ ರೈನಾ ರವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಅಭಿಪ್ರಾಯಗಳು ವ್ಯಕ್ತವಾಗಿದ್ದು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.

Post Author: Ravi Yadav